ಸೌತ್ ಇಂಡಸ್ಟ್ರಿಯ ಬ್ಯೂಟಿಫುಲ್ ಮತ್ತು ಜನಪ್ರಿಯ ನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ತಮ್ಮ ಬಹುಕಾಲದ ಗೆಳೆಯ ಮತ್ತು ಹೈಸ್ಕೂಲ್ ಸ್ನೇಹಿತ ಆಂಟೋನಿ ತಟ್ಟಿಲ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿದೆ. ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆ ‘ಬೇಬಿ ಜಾನ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕೀರ್ತಿ ಸುರೇಶ್, ಈ ಚಿತ್ರದ ಮೂಲಕ ಬಾಲಿವುಡ್ಗೂ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ, ಸಿನಿಮಾ ಬಿಡುಗಡೆಗೂ ಮುನ್ನವೇ ಕೀರ್ತಿ ಸುರೇಶ್ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಲಿದ್ದಾರೆ. ಮೂಲಗಳ ಪ್ರಕಾರ ಅವರು ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಾರೆ.

ಆಂಟೋನಿ ತಟ್ಟಿಲ್ ಯಾರು?
ಮಾಧ್ಯಮ ವರದಿಗಳ ಪ್ರಕಾರ, ಆಂಟೋನಿ ತಟ್ಟಿಲ್ ದುಬೈನ ದೊಡ್ಡ ಉದ್ಯಮಿ. ಹಾಗೆಯೇ ಕೀರ್ತಿ ಸುರೇಶ್ ಅವರ ಶಾಲಾ ಸ್ನೇಹಿತ ಕೂಡ. ಮಾಧ್ಯಮ ವರದಿಗಳ ಪ್ರಕಾರ, ಕೀರ್ತಿ ಸುರೇಶ್ ಮತ್ತು ಆಂಟನಿ ತಟ್ಟಿಲ್ ಸುಮಾರು 15 ವರ್ಷಗಳಿಂದ ರಿಲೇಶನ್ಶಿಪ್ ನಲ್ಲಿದ್ದಾರೆ. ಈಗ ಇಬ್ಬರೂ ಮುಂಬರುವ ತಿಂಗಳಲ್ಲಿ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಅನ್ನು ಯೋಜಿಸುತ್ತಿದ್ದಾರೆ.
ಈ ದಿನ ಮದುವೆಯಾಗುತ್ತಾರೆ!
ವರದಿಗಳ ಪ್ರಕಾರ, ಡಿಸೆಂಬರ್ ಎರಡನೇ ವಾರದಲ್ಲಿ ಅಂದರೆ ಡಿಸೆಂಬರ್ 11 ಮತ್ತು 12 ರಂದು ಮದುವೆ ನಡೆಯಲಿದೆ. ಅಲ್ಲಿಗೆ ಕೀರ್ತಿ ಬಾಲಿವುಡ್ನಲ್ಲಿ ತಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾಗುವ ಮೊದಲೇ ಮದುವೆಯಾಗಲಿದ್ದಾರೆ. ಆದರೆ, ಇದುವರೆಗೂ ಕೀರ್ತಿ ಸುರೇಶ್ ಅವರ ಮದುವೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಶೀಘ್ರದಲ್ಲೇ ಅವರು ಈ ವಿಷಯದ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಯಿದೆ. ಕೀರ್ತಿ ಸುರೇಶ್ ಮತ್ತು ಆಂಟೋನಿ ತಟ್ಟಿಲ್ ಶಾಲೆಯಲ್ಲಿ ಒಟ್ಟಿಗೆ ಓದಿದ್ದರು ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.

ಸೂಪರ್ ಸ್ಟಾರ್ಸ್ ಜೊತೆ ನಟನೆ
ಸೌತ್ ಇಂಡಸ್ಟ್ರಿಯ ಜನಪ್ರಿಯ ನಟಿಯರಲ್ಲಿ ಕೀರ್ತಿ ಸುರೇಶ್ ಒಬ್ಬರು. ಹಲವಾರು ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸೂಪರ್ಸ್ಟಾರ್ ಅಲ್ಲು ಅರ್ಜುನ್ ಹೊರತುಪಡಿಸಿ, ಅವರು ಧನುಷ್ ರಂತಹ ದೊಡ್ಡ ಸ್ಟಾರ್ಗಳ ಜೊತೆ ಕೆಲಸ ಮಾಡಿದ್ದಾರೆ. ಕೀರ್ತಿ ಸುರೇಶ್ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ. ಕೀರ್ತಿ ಸುರೇಶ್ ಚಲನಚಿತ್ರ ನಿರ್ಮಾಪಕ ಜಿ. ಸುರೇಶ್ ಮತ್ತು ತಮಿಳು ನಟಿ ಮೇನಕಾ ಅವರ ಪುತ್ರಿ. ಕೀರ್ತಿ ಬಾಲ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.