ಸಾಧಾರಣವಾಗಿ ಮಕ್ಕಳಿಗೆ ಜಾತಕದಲ್ಲಿ ದೋಷ ಇದೆ ಅಂತ ಅಂದರೆ ತಂದೆ ತಾಯಿಗಳಿಗೆ ಇದ್ದೇ ಇರುತ್ತದೆ. ಹೀಗೆ ದೋಷಗಳು ಪಾಪ ಪುಣ್ಯ ಎಲ್ಲವೂ ಕೂಡ ಜೊತೆಯಲ್ಲಿ ಬರುತ್ತದೆ. ತಂದೆ ತಾಯಿಯರು ಮಾಡಿಟ್ಟಂತಹ ಆಸ್ತಿ ಮಕ್ಕಳಿಗೆ ಬರುತ್ತದೆ ಅಲ್ವಾ ,ಅದಕ್ಕೆ ಹಕ್ಕುದಾರರು ಅವರೇ ಅಲ್ವಾ, ಅಂದಮೇಲೆ ಅವರು ಮಾಡಿದ ಕರ್ಮದ ಗಂಟು ಯಾರಿಗೆ ಹೋಗಬೇಕು. ಅದು ಕೂಡ ಮಕ್ಕಳಿಗೆ ವರ್ಗಾವಣೆ ಆಗುವಂತಹ ಪರಿಸ್ಥಿತಿ ಇರುತ್ತದೆ. ಹಾಗಾಗಿ ಈ ಸರ್ಪ ದೋಷ, ಪಿತೃ ದೋಷ ,ಸ್ತ್ರೀಶಾಪವಿರಬಹುದು ಇವೆಲ್ಲವೂ ಕೂಡ ಹಿಂದಿನವರಿಂದ ಬರುತ್ತಿರುವಂತಹ ಸಮಸ್ಯೆ ಆಗಿರುತ್ತದೆ.
ಈ ಶ್ರೇಷ್ಠ ಮಟ್ಟದ ಸ್ಥಾನ ಅಂದರೆ ಸಪ್ತ ಕ್ಷೇತ್ರ ಈ ಸಮಸ್ಯೆಗಳಿಗೆ ಇಲ್ಲಿ ಕೇವಲ ಒಂದು ವಾರದಲ್ಲಿ ಪರಿಹಾರ ಆಗಲಿದೆ. ಮತ್ತಷ್ಟು ಜನರಿಗೆ 48 ದಿನಗಳ ಕಾಲ ವ್ರತವನ್ನು ಕೊಡುತ್ತೇವೆ. ಆ 48 ದಿನಗಳ ಕಾಲದ ನಂತರ ಸಮಸ್ಯೆಗಳು ಪರಿಹಾರವಾಗುತ್ತದೆ. ಸಮಸ್ಯೆಗಳು ಪರಿಹಾರವಾದಂತಹದು ಹಲವಾದರಿದೆ. ರಾಹು ಯಾವ ಸ್ಥಾನದಲ್ಲಿದ್ದಾಗ ದೋಷಗಳು ಬರುತ್ತದೆ. ಯಾವ ಸ್ಥಾನದಲ್ಲಿದ್ದಾಗ ವಿದ್ಯಾಭ್ಯಾಸದಲ್ಲಿ ಅಡಚಣೆ ಬರಬಹುದು. ಮದುವೆಗಳು ವಿಳಂಬವಾಗಬಹುದು, ಪುತ್ರ ಸ್ಥಾನದಲ್ಲಿದ್ದಾಗ ಸಂತಾನಗಳಿಗೆ ಆಯಾ ಸಮಸ್ಯೆಗಳು ಬರುವಂತಹ ಸಾಧ್ಯತೆಗಳು ಇರುತ್ತದೆ. ಅಷ್ಟೇ ಅಲ್ಲದೆ ಬೇರೆ ಪಾಪಗಳ ದೃಷ್ಟಿ ಬಿದ್ದಾಗ ಈ ರೀತಿಯ ಅನೇಕ ರೀತಿಯ ಒಂದು ಸಂಯೋಗದ ಸಮಸ್ಯೆಗಳಿಗೆ ಪರಿಹಾರ ಕ್ಷೇತ್ರದಲ್ಲಿ ನೀಡುವಂತೆ ಇದೆ.
ಬಹಳಷ್ಟು ಜನ ವಿದೇಶದಲ್ಲಿ ಸಂಕಲ್ಪಗಳನ್ನು ಮಾಡಿ ಅವರಿಗೆ ಪರಿಹಾರಗಳಾದವು ಸಾಕಷ್ಟಿದೆ. ಈ ರೀತಿಯಾಗಿ ಅಲ್ಲಿ ಸಂತಾನವಾದವರು ಸುಮಾರು ಜನ ಇದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಬಹಳಷ್ಟು ರೀತಿಯ ಪರಿಹಾರಗಳು ಸುಲಭವಾಗಿ ಸಿಗುತ್ತದೆ. ಕೆಲವರಿಗೆ ಉದ್ಯೋಗದ ಸಮಸ್ಯೆಗಳಿರುತ್ತದೆ ಜಾತಕದಲ್ಲಿ ಇರುವಂತಹ ದೋಷಗಳು ಪರಿಹಾರ ಆಗಬೇಕು ಎನ್ನುವುದಾಗಿದೆ. ಧೈರ್ಯದಿಂದ ಸ್ವಾಮಿಯನ್ನು ನಂಬಿದರೆ ಖಂಡಿತ ಕೆಲಸಗಳು ನಡೆಯುತ್ತದೆ.
ಇಲ್ಲಿ ಕೆಲವು ಸಮಸ್ಯೆಗಳಿಗೆ ಇಂತಹ ಪರಿಹಾರ ಎಂದು ಇರುತ್ತದೆ. ನಾವು ನೋಡಿದಾಗ ಸರಿಯಾದ ರೀತಿಯಲ್ಲಿ ಪರಿಹಾರ ಹೇಳುವ ಅವಕಾಶವಿರುತ್ತದೆ. ಅದರಿಂದಾಗಿ ನೀವು ಸೂಕ್ತವಾದಂತಹ ಪರಿಹಾರವನ್ನು ಮಾಡಿದಾಗ ಖಂಡಿತವಾಗಿಯೂ ಕೂಡ, ಅದು ಸರಿಪಡಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ.ಷಇಂತಹ ಉದಾಹರಣೆಗಳು ಬೇಕಾದಷ್ಟು ಇವೆ. ಇಲ್ಲಿ ಬಹಳ ವಿಶೇಷವಾದಂತಹ ಅನೇಕ ರೀತಿಯ ಒಂದು ಸಮಸ್ಯೆಗಳಿಗೆ ಪರಿಹಾರವನ್ನು ಕಾಣುವಂತಹ ತಾಣವಾಗಿದೆ. ಹೀಗಾಗಿ ಎಲ್ಲರೂ ಮುಕ್ತಿನಗರ ಕ್ಷೇತ್ರಕ್ಕೆ ಬಂದು ಸ್ವಾಮಿಯ ದರ್ಶನ ಮಾಡಿ ಅನುಗ್ರಹವನ್ನು ಪಡೆದುಕೊಳ್ಳಿ.