ಇದು ಡಿಜಿಟಲ್ ಯುಗ, ಸೋಷಿಯಲ್ ಮೀಡಿಯಾದಲ್ಲಿ ಯಾರು ಯಾರನ್ನು ಬೇಕಾದರೂ ಯಾವಾಗ ಆದರೂ ಪರಿಚಯ ಮಾಡಿಕೊಳ್ಳಬಹುದು ಎಂದು ನಮಗೆಲ್ಲ ಗೊತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಎಲ್ಲರೂ ಒಳ್ಳೆಯವರಾಗೆ ಇರುತ್ತಾರೆ ಎಂದು ಹೇಳೋದಕ್ಕೆ ಆಗಲ್ಲ. ಕೆಲವರು ನಮ್ಮ ನಂಬಿಕೆ ಗಳಿಸಿ ಮೋಸ ಮಾಡುವಂಥ ಜನರು ಕೂಡ ಇರುತ್ತಾರೆ. ಹಾಗಾಗಿ ನಾವು ಎಷ್ಟೇ ಹುಷಾರಾಗಿ ಇದ್ದರೂ ಕೂಡ ಕಡಿಮೆಯೇ. ಮೋಸ ಮಾಡುವವರೇ ತುಂಬಿರುವ ಈ ಪ್ರಪಂಚದಲ್ಲಿ ನಾವು ನಮ್ಮ ಬಗ್ಗೆ ಮಾತ್ರ ಹೆಚ್ಚು ಗಮನ ಕೊಡಬೇಕು. ಆಗ ನಮಗಾಗುವ ಮೋಸದಿಂದ ಪಾರಾಗಬಹುದು ಜೊತೆಗೆ ಯಾರಲ್ಲಿಯೂ ನಂಬಿಕೆ ಇಡಬಾರದು. ಆಗ ಮೋಸ ಹೋಗುವ ಪ್ರಮೇಯವೇ ಬರುವುದಿಲ್ಲ. ಈ ರೀತಿ ನಂಬಿ ಅನ್ಯಾಯಕ್ಕೆ ಒಳಗಾಗಿರುವ ಅನೇಕ ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ.

ಇಂಥದ್ದೇ ಒಂದು ಘಟನೆಯ ಬಗ್ಗೆ ಇಂದು ನಿಮಗೆ ತಿಳಿಸಿ ಹೇಳುತ್ತೇವೆ. ಇದು ಕಿರುತೆರೆಯಲ್ಲಿ ಫೇಮಸ್ ಆಗಿರುವ ಜಾಹ್ನವಿ ಅವರ ಬದುಕಿನಲ್ಲಿ ನಡೆದಿರುವ ಘಟನೆ. ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಸ್ಪರ್ಧಿಯಾಗಿ ಬಂದ ಜಾಹ್ನವಿ, ಬಹಳ ಬೇಗ ಎಲ್ಲರಿಗೂ ಇಷ್ಟವಾದರು. ಇವರಲಿದ್ದ ಟ್ಯಾಲೆಂಟ್ ಜನರಿಗೆ ಬಹಳ ಇಷ್ಟವಾದ ಕಾರಣ, ಇವರ ಜನಪ್ರಿಯತೆ ಕೂಡ ಜಾಸ್ತಿಯಾಯಿತು. ಸುದ್ದಿ ವಾಚಕಿಯಾಗಿ ಮತ್ತು ನಿರೂಪಕಿಯಾಗಿ ಸಹ ಕೆಲಸ ಶುರು ಮಾಡಿ, ಅದರಲ್ಲಿ ಕೂಡ ಒಳ್ಳೆಯ ಹೆಸರನ್ನು ಪಡೆದುಕೊಂಡರು ಜಾಹ್ನವಿ. ಪ್ರಸ್ತುತ ಇವರು ಕಿರುತೆರೆಯಲ್ಲಿ ಬಹಳ ಫೇಮಸ್, ಕಲರ್ಸ್ ಕನ್ನಡ ವಾಹಿನಿಯ ಶೋಗಳನ್ನು ಜಾಹ್ನವಿ ನಿರೂಪಣೆ ಮಾಡುತ್ತಾರೆ. ಇವರು ಜೀವನದಲ್ಲಿ ಬಹಳ ಕಷ್ಟಪಟ್ಟು ಬೆಳೆದು ಬಂದಿದ್ದಾರೆ. ಆ ಕಷ್ಟದ ದಿನಗಳು ನಾವಂದು ಕೊಂಡ ಹಾಗಿಲ್ಲ.
ಜಾಹ್ನವಿ ಅವರು ತಮ್ಮ ಬದುಕಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಒಬ್ಬ ವ್ಯಕ್ತಿಯಿಂದ ಮೋಸ ಹೋದ ಘಟನೆ ಬಗ್ಗೆ ಕೂಡ ಮಾತನಾಡಿದ್ದಾರೆ. ಜಾಹ್ನವಿ ಅವರು ಕೆಲವು ವರ್ಷಗಳ ಹಿಂದೆ ಹೈದರಾಬಾದ್ ಮೂಲದ ಒಬ್ಬ ವ್ಯಕ್ತಿಯಿಂದ ಮೋಸ ಹೋಗಿದ್ದರಂತೆ. ಆಗ ಜಾಹ್ನವಿ ಅವರು ಹೊಸದಾಗಿ ಮನೆ ಕಟ್ಟಿಸಿದ್ದರು, ಅವರು ಮನೆ ಕಟ್ಟಿಸಿದ್ದು ಬ್ಯಾಂಕ್ ಲೋನ್ ತೆಗೆದುಕೊಂಡು. ಇವರು ಬಣ್ಣದ ಲೋಕದಲ್ಲಿ ಇರುವ ಕಾರಣ ಜಾಹ್ನವಿ ಅವರಿಗೆ ನ್ಯಾಶನಲೈಸ್ಡ್ ಬ್ಯಾಂಕ್ ನಲ್ಲಿ ಲೋನ್ ಸಿಕ್ಕಿರಲಿಲ್ಲ. ಪ್ರೈವೇಟ್ ಬ್ಯಾಂಕ್ ನಲ್ಲಿಯೇ ಲೋನ್ ಪಡೆದಿದ್ದರಂತೆ. ಆ ಲೋನ್ ಅನ್ನು ನ್ಯಾಶನಲೈಸ್ಡ್ ಬ್ಯಾಂಕ್ ಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಬೇಕಿತ್ತಂತೆ. ಆದರೆ ಆ ಕೆಲಸ ಮಾಡಿಸಿಕೊಳ್ಳುವುದಕ್ಕೆ ಬ್ಯಾಂಕ್ ನವರ ಸಹಾಯ ಬೇಕಿತ್ತು..

ಆದರೆ ಆಗ ಜಾಹ್ನವಿ ಅವರಿಗೆ ಬ್ಯಾಂಕ್ ನಲ್ಲಿ ಯಾರು ಕೂಡ ಪರಿಚಯ ಇರಲಿಲ್ಲ. ಯಾರಾದರೂ ತಾವು ಬ್ಯಾಂಕ್ ನಲ್ಲಿ ಕೆಲಸ ಮಾಡೋದು ಎಂದು ಹೇಳಿದರೆ, ತಾವೇ ಪರಿಚಯ ಮಾಡಿಕೊಳ್ಳುತ್ತಿದ್ದರಂತೆ ಈ ವಿಚಾರದ ಬಗ್ಗೆ ಮಾತನಾಡೋಕೆ. ಅದೇ ರೀತಿ ಫೇಸ್ ಬುಕ್ ನಲ್ಲಿ ಒಬ್ಬ ವ್ಯಕ್ತಿಯ ಪರಿಚಯ ಆಯಿತಂತೆ. ಆ ವ್ಯಕ್ತಿ ಹೈದರಾಬಾದ್ ಮೂಲದವನು, ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದಾಗಿ ಜಾಹ್ನವಿ ಅವರ ಜೊತೆಗೆ ಹೇಳಿ, ನಿಮ್ಮ ಅಣ್ಣನಾಗಿ ಇರುತ್ತೇನೆ ಎಂದು ಹೇಳಿದನಂತೆ. ಅದನ್ನು ನಂಬಿ ಜಾಹ್ನವಿ ಆತನ ಜೊತೆಗೆ ಚೆನ್ನಾಗಿ ಮಾತನಾಡುತ್ತಿದ್ದರಂತೆ. ಇಬ್ಬರ ನಡುವೆ ಅಣ್ಣ ತಂಗಿ ಎಂದು ಆತ್ಮೀಯತೆ ಬೆಳೆದು, ಜಾಹ್ನವಿ ಆತನ ಬಳಿ 8 ಲಕ್ಷ ರೂಪಾಯಿಗಳ ಸಾಲವನ್ನು ತೆಗೆದುಕೊಂಡಿದ್ದರಂತೆ. ಆತನ ನಿಜ ಸ್ವರೂಪ ಏನೆಂದು ನಂತರ ಗೊತ್ತಾಗಿದೆ.
ಜಾಹ್ನವಿ ಅವರಿಗೆ ಪದೇ ಪದೇ ಕರೆಮಾಡಿ, ತೊಂದರೆ ಕೊಡುತ್ತಿದ್ದನಂತೆ ಪರಿಸ್ಥಿತಿ ಹೇಗಾಯಿತು ಎಂದರೆ, ಆ ವ್ಯಕ್ತಿ ಸಾಕಷ್ಟು ಬೇರೆ ಬೇರೆ ನಂಬರ್ ಗಳಿಂದ ಕರೆಮಾಡುವುದಕ್ಕೆ ಶುರು ಮಾಡಿದ್ದಾನೆ. ಪೊಲೀಸರಿಗೆ ದೂರು ಕೊಟ್ಟಾಗ, ಎಲ್ಲಾ ನಂಬರ್ ಗಳು ಆತನದ್ದೇ ಎಂದು ತಿಳಿದುಬಂದಿದೆ. ಹಾಗೆಯೇ ಆತ ನಾರ್ಮಲ್ ವ್ಯಕ್ತಿ ಅಲ್ಲ, ಸೈಕೋ ಎಂದು ಕೂಡ ತಿಳಿದುಬಂದಿದೆ. ಇದರಿಂದ ಜಾಹ್ನವಿ ಅವರಿಗೆ ಆತಂಕವಾಗಿ, ಎಲ್ಲಾ ನಂಬರ್ ಗಳನ್ನು ಬ್ಲಾಕ್ ಮಾಡಿದರಂತೆ. ಆತ ಸುಮ್ಮನಿರದೇ, ನನ್ನ ತಂಗಿ ನನಗೆ ಮಾತ್ರ ಎನ್ನುವ ಆಟಿಟ್ಯೂಡ್ ಶುರುವಾಗಿ, ಇನ್ನು ತೊಂದರೆ ಕೊಡುವುದಕ್ಕೆ ಶುರು ಮಾಡಿದ್ದಾನೆ. ಯಾರಾದರೂ ಜಾಹ್ನವಿ ಅವರ ಬಗ್ಗೆ ಪೋಸ್ಟ್ ಮಾಡಿದರೆ ಕೋಪ ಮಾಡಿಕೊಳ್ಳುತ್ತಿದ್ದನಂತೆ. ಟಿವಿ ಚಾನೆಲ್ ಗಳಿಗೆ ಜಾಹ್ನವಿ ಹೆಸರಿನಲ್ಲಿ ಕೆಟ್ಟದಾಗಿ ಪತ್ರ ಬರೆಯುತ್ತಿದ್ದನಂತೆ.

ಜಾಹ್ನವಿ ಅವರ ಮನೆ ಹರಾಜಿಗೆ ಬಂದಿದೆ ಎಂದು ಕೂಡ ಸುಳ್ಳು ಹೇಳಿ, ಕೆಟ್ಟದಾಗಿ ಪತ್ರ ಬರೆದಿದ್ದನಂತೆ. ಇದೆಲ್ಲವೂ ಸಮಸ್ಯೆಗಳು ಜಾಸ್ತಿ ಆಗುತ್ತಿದ್ದ ಹಾಗೆ, ಜಾಹ್ನವಿ ಅವರು ಇನ್ನು ಸುಮ್ಮನೆ ಇರುವುದು ತಪ್ಪು ಎಂದು ಅರ್ಥವಾಗಿ, ಹೈದರಾಬಾದ್ ಗೆ ಹೋಗಿ ಆತನ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ, ಕೊನೆಗೆ ಪೊಲೀಸರು ಆತನನ್ನು ಬಂಧಿಸಿದರಂತೆ. ನಂತರ ಜಾಹ್ನವಿ ಅವರು ಆತನಿಂದ ತೆಗೆದುಕೊಂಡ ಸಾಲವನ್ನು ತೀರಿಸಿದ್ದಾರೆ. ಈ ವಿಚಾರವನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ. ಬದುಕಲ್ಲಿ ಹೀಗೆಲ್ಲಾ ನಡೆದು ಹೋಗಬಹುದು. ಹಾಗಾಗಿ ಎಲ್ಲಾ ವ್ಯಕ್ತಿಗಳ ಜೊತೆಗೆ ಬಹಳ ಹುಷಾರಾಗಿ ಇರಬೇಕು. ಯಾರನ್ನು ಅತಿಯಾಗಿ ನಂಬಿ ಮೋಸ ಹೋಗಬಾರದು. ಜಾಹ್ನವಿ ಅವರ ಬದುಕಿನ ಘಟನೆ ಎಲ್ಲರಿಗು ಒಂದು ರೀತಿಯ ಪಾಠ ಆಗಿದೆ.



