ಜಗತ್ತಿನಲ್ಲಿರುವ ಜೀವಸಂಕುಲಗಳಿಗೆ ವೈವಿಧ್ಯಮಯವಾದ ಜೀವಿತಾವಧಿಯಿದೆ. ಅವುಗಳ ಪೈಕಿ ಉಭಯವಾಸಿಗಳು ಎಂದು ಕರೆಯಲ್ಪಡುವ ಮೊಸಳೆಗಳ ಜೀವಿತಾವಧಿ 35-40 ವರ್ಷಗಳು. ಕೆಲವೊಂದು ಕಡೆ ಮೊಸಳೆಗಳು 60 ರಿಂದ 70 ವರ್ಷಗಳ ಕಾಲ ಬದುಕಿರುವ ಬಗ್ಗೆಯೂ ಉಲ್ಲೇಖಗಳಿವೆ. ಆದರೆ ಬರೋಬ್ಬರಿ 120 ವರ್ಷ ಪೂರೈಸಿ ಇನ್ನೂ ಕೂಡ ಜೀವಂತವಾಗಿರುವ ಜಗತ್ತಿನ ಅತ್ಯಂತ ದೊಡ್ಡ ಮೊಸಳೆಯ ಬಗ್ಗೆ ನಿಮಗೆ ಗೊತ್ತಾ?.

ಹೌದು, ಕ್ಯಾಸಿಯಸ್ ಎಂಬ ಹೆಸರಿನ ಆಸ್ಟ್ರೇಲಿಯಾದ ಮೊಸಳೆಯ ವಯಸ್ಸು 120 ವರ್ಷ. ಈ ಮೊಸಳೆ ವಿಶ್ವದ ಅತ್ಯಂತ ದೊಡ್ಟ ಮೊಸಳೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ಮೊಸಳೆಯು 18 ಅಡಿ ಉದ್ದವುದ್ದು, ಪ್ರಾಈ ಶಾಸ್ತ್ರಜ್ಞರ ಪ್ರಕಾರ ಇದು ಮೊಸಳೆಗಳಲ್ಲೇ ಅಸಾಮಾನ್ಯವಾದ ಗಾತ್ರ. ಇಷ್ಟು ದೊಡ್ಡ ದೇಹದ ಮತ್ತು ವಯಸ್ಸಿನ ಮೊಸಳೆ ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.ಇಷ್ಟು ಹಿರಿಯ ಮತ್ತು ಶಕ್ತಿಶಾಲಿಯಾಗಿದ್ದರೂ ಕೂಡ ಕ್ಯಾಸಿಯಸ್ ಅತ್ಯಂತ ಸೌಮ್ಯ ಸ್ವಭಾವದ ಮೊಸಳೆ ಎಂಬುದು ಮತ್ತೊಂದು ಕೌತುಕದ ಸಂಗತಿ.
1984ರಲ್ಲಿ ಸ್ಟ್ರೇಲಿಯಾದಲ್ಲಿ ಈ ಮೊಸಳೆಯನ್ನು ಸಂಶೋಧಕರು ಸೆರೆ ಹಿಡಿದಾಗ ಇದಕ್ಕೆ 80 ವರ್ಷವಾಗಿತ್ತು ಎಂದು ಅಂದಾಜಿಸಲಾಗಿದೆ. ಈ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರ್ಜ್ ಕ್ರೈಗ್ ಇದನ್ನು ಮೊಸಳೆ ಪಾರ್ಕ್ ಗೆ ಸೇರಿಸಿದ್ದರು. ಇದೀಗ ಇವರ ಮೊಮ್ಮಗ ಟೂಡಿ ಸ್ಕಾಟ್ ಇದನ್ನು ಆರೈಕೆ ಮಾಡುತ್ತಿದ್ದಾರೆ. 120 ವರ್ಷದ ಈ ಕ್ಯಾಸಿಯಸ್ ಜಗತ್ತಿನ ಅತ್ಯಂತ ದೊಡ್ಡ ಮೊಸಳೆ ಎಂಬ ವಿಶ್ವದಾಖಲೆ ಮಾಡಿದೆ.