ಈ ಬಾರಿ “ಬಿಗ್ ಬಾಸ್ ಸೀಸನ್ 9″ ದಿನದಿಂದ ದಿನಕ್ಕೆ ಬಹಳಷ್ಟು ಇಂಟೆಸ್ಟಿಂಗ್ ಅನ್ನಿಸುತ್ತಿದೆ.ಇದಕ್ಕೆ ಕಾರಣ ಈ ಬಾರಿ ನೀಡುತ್ತಿರುವ ವಿಶೇಷ ಟಾಸ್ಕ್ ಹಾಗೂ ವಿಶೇಷವಾಗಿ ಆಗಮಿಸಿರುವ ಸ್ಪರ್ದಿಗಳು. ಈ ಸೀಸನ್ ಕಳೆದ ಎಲ್ಲಾ ಸಿಸನ್ ಗಳಿಗಿಂತ ವಿಬ್ಬಿನ್ನವಾಗಿದೆ.ಮೊದಲ ಬಾರಿಗೆ ಓಟಿಟಿ ಸೀಸನ್ ಆರಂಭಿಸಿದ್ದರು.ಈ ಸೀಸನ್ ಶುರುವಿನಲ್ಲೂ ಕೂಡ ಬಹಳ ಭಯವಿತ್ತು ಆದರೆ ಆ ಬಯವೆಲ್ಲವನ್ನೂ ಕೇವಲ ವಾರಗಳಲ್ಲಿ ಅಳಿಸಿಹಾಕಿತ್ತು. ಟಿವಿ ಸೀಸನ್ ಗಳಂತೆ ಈ ಚಿಕ್ಕ ಸೀಸನ್ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಈ ಸೀಸನ್ ನಲ್ಲಿ ಅರ್ಹತೆ ಪಡೆದ “ರೂಪೇಶ್ ಶೆಟ್ಟಿ, ಸಾನಿಯಾ ಅಯ್ಯರ್,ಆರ್ಯವರ್ಧನ್ ಹಾಗೂ ರಾಕೇಶ್ ಅಡಿಗ” ಅವರನ್ನು ಇದೀಗ ನಾವು ಬಿಗ್ ಬಾಸ್ ಸೀಸನ್ 9 ರಲ್ಲಿ ಕಾಣಬಹುದು.

ಇವರೊಟ್ಟಿಗೆ ಕಳೆದ ಸೀಸನ್ ಗಳಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡ 5 ಪ್ರವೀಣರಾದ ಪ್ರಶಾಂತ್ ಸಂಬರ್ಗಿ,ದೀಪಿಕಾ ದಾಸ್,ಅನುಪಮಾ ಗೌಡ ಹಾಗೂ ದಿವ್ಯಾ ಉರುಡುಗ ಅವರನ್ನು ಕೊಡ ಈ ಸೀಸನ್ ಸ್ಪರ್ದಿಗಳಾಗಿ ನಾವು ಕಾಣಬಹುದಾಗಿದೆ.ಮಿಕ್ಕ ನವೀನರನ್ನು ನಾವು ಹೆಚ್ಚಾಗಿ ಕಿರುತೆರೆಯ ಕಲಾವಿದರನ್ನು ಕಾಣಬಹುದು. ಕೇವಲ ಒಂದೇ ವಾರಗಳಲ್ಲಿ ಮನೆಯಲ್ಲಿ ಇರುವ ಸ್ಪರ್ದಿಗಳು ಮನರಂಜನೆಯಲ್ಲಿ ಬಹಳ ಹೈಪ್ ಪಡೆದುಕೊಳ್ಳುತ್ತಿದೆ.ಕೇವಲ ನಾಲ್ಕು ವಾರದಲ್ಲಿ ಬಹಳಷ್ಟು ವಿಷಯಗಳು ಆ ಮನೆಯಲ್ಲಿ ನಡೆಯುವುದನ್ನು ನಾವು ನೋಡಿದ್ದೇವೆ.
ದಿನದಿಂದ ದಿನಕ್ಕೆ ಕುತೂಹಲ ಮೂಡಿಸುವಂತೆ ವಿಭಿನ್ನ ಟಾಸ್ಕ್ ಗಳನ್ನು ನೀಡುತ್ತಾ ಎಲ್ಲರನ್ನು ಮನೋರಂಜಿಸುತ್ತಾ ಬರುತ್ತಿದ್ದಾರೆ.ಆದರೆ ಕಳೆದ ವಾರ ಈ ಹಿಂದೆ ಓಟಿಟಿ ಸೀಸನ್ ನಲ್ಲಿ ಮನಗೆದಿದ್ದ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ಅವರಿಗೆ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. “ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್” ಜೋಡಿ ಓಟಿಟಿ ಸೀಸನ್ ಯಿಂದಲೂ ಬಹಳ ಸಲಿಗೆ ಇರುವ ಸ್ನೇಹವನ್ನು ಹೊಂದಿದ್ದರು.
ಹಾಗಾಗಿ ಇವರಿಬ್ಬರ ನಡುವೆ ಹಗ್ ಮಾಡುವುದು ಒಟ್ಟಿಗೆ ಕುಳಿತು ಊಟ ಮಾಡುವುದು ಹಾಗೂ ಒಬ್ಬರಿಗೆ ಮತ್ತೊಬ್ಬರು ಊಟ ಮಾಡಿಸುವುದು ಹೆಚ್ಚಾಗಿತ್ತು.ಆದ್ರೆ ಕಳೆದ ವಾರ “ಆರ್ಯವರ್ಧನ್” ಅವರ ಕ್ಯಾಪ್ಟನ್ಷಿಪ್ ಮುಗಿದ ನಂತರವೂ ಕ್ಯಾಪ್ಟನ್ ರೂಮ್ ನಲ್ಲಿ ಕುಳಿತು ಮಾತನಾಡಿದ್ದು ಹಾಗೂ ರೂಪೇಶ್ ಹಾಗೂ ಸಾನಿಯಾ ಇದ್ದ ರೀತಿ ಹೊರಗಿನ ಜನರಿಗೆ ಸರಿ ಕಾಣಿವುದಿಲ್ಲ ಹಾಗೂ ಅದು ಬಿಗ್ ಬಾಸ್ ವೇದಿಕೆಗೆ ಗೌರವ ನೀಡುವಂತಿಲ್ಲ ಎಂದು ಕಿಚ್ಚ ಖಡಕ್ ವಾರ್ನ್ ಮಾಡಿದ್ದರು.
ಇದಾದ ನಂತರ ರೂಪೇಶ್ ಸಾನಿಯಾ ಅವರಿಂದ ಬಹಳ ಅಂತರವನ್ನು ಕಾದಿದ್ದಾರೆ.ಈ ಕಾರಣದಿಂದ ಹೊರಗಿನ ಕೆಲ ಮಂದಿಗೆ ಬೇಸರವಾಗಿದೆ.ಈ ಜೋಡಿಗೆ ಓಟಿಟಿ ಸೀಸನ್ ನಿಂದಲೇ ಅಭಿಮಾನಿಗಳು ಹುಟ್ಟಿಹಾಕಿದ್ದಾರೆ. ಈ ಜೋಡಿ ಬಿಗ್ ಬಾಸ್ ಮನೆಗೆ ಬಂದು 64 ನೆ ದಿನಕ್ಕೆ ಕಾಲಿಟ್ಟಿದೆ ಇಷ್ಟು ದಿನಗಳ ಕಾಲ ನಾವು ಬಿಗ್ ಬಾಸ್ ವೀಕ್ಷಿಸಲು ಬೇಬಿ ಡಾಲ್ ಸಾನಿಯಾ ಅಯ್ಯರ್ ಹಾಗೂ ಮೃದು ಸ್ವಭಾವದ ಎಲ್ಲರ ಗೆಳೆಯ ರೂಪೇಶ್ ಶೆಟ್ಟಿ ಕಾರಣ.ಈಗ ಇವರಿಬ್ಬರು ಇಟ್ಟಾಗಿ ಇರದೇ ಇರುವುದು ಕೆಲವರಿಗೆ ಬೇಸರ ತಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ. ಇದ್ರಿಂದ ಬಿಗ್ ಬಾಸ್ ವೀಕ್ಷಕರು ಕೊಂಚ ತಗ್ಗುತ್ತಾರ ಅಥವಾ ಇವರಿಬ್ಬರು ಮುಂದೆ ಯಾವ ರೀತಿ ವರ್ತಿಸುತ್ತಾರೆ ಎಂದು ನಾವೆಲ್ಲರೂ ಕಾದು ನೋಡಬೇಕಿದೆ.



