2011ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸಂಜು ವೆಡ್ಸ್ ಗೀತಾ ಸಿನಿಮಾ ಮತ್ತೆ ಪಾರ್ಟ್ 2 ನೊಂದಿಗೆ ತೆರೆ ಮೇಲೆ ಸದ್ದು ಮಾಡಲು ಬರುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರ ಒಂದರಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟಿಸುವ ಸಾಧ್ಯತೆ ಇದೆ. ಈ ಹಿಂದೆ ‘ಕೆಜಿಎಫ್’ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದ ತಮನ್ನಾ ಇದೀಗ ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಮೂಲಕ ಕನ್ನಡಕ್ಕೆ ಮತ್ತೆ ಮರಳುವ ಸಾಧ್ಯತೆ ಇದೆ ಎಂದು ನಿರ್ದೇಶನ ನಾಗಶೇಖರ್ ಮಾಹಿತಿ ನೀಡಿದ್ದಾರೆ. ಈ ಕುರಿತು ಅವರನ್ನು ಅಪ್ರೋಚ್ ಮಾಡಲು ತಯಾರಿ ನಡೆದಿದೆ.

ಈ ಹಿಂದೆ ತಮನ್ನಾ ಅವರೊಂದಿಗೆ ತಮಿಳು, ಹಾಗೂ ತೆಲುಗಿನಲ್ಲಿ ಸಿನಿಮಾವನ್ನ ಮಾಡಿದ್ದೆ. ಆದರೆ ಈಗ ಬರೀ ಕನ್ನಡದಲ್ಲಿ ಸಿನಿಮಾ ಮಾಡಬೇಕೆಂದಿದ್ದೇನೆ ಎಂದಿದ್ದಾರೆ. ‘ಸಂಜು ವೆಡ್ಸ್ ಗೀತಾ’ ಮೊದಲ ಪಾರ್ಟ್ ನಲ್ಲಿ ಸಂಜಯ್ ಅಥವಾ ಸಂಜು ಪಾತ್ರಕ್ಕೆ ಶ್ರೀನಗರ ಕಿಟ್ಟಿ ಬಣ್ಣ ಹಚ್ಚಿದ್ದರೆ, ರಮ್ಯಾ ಅವರು ಗೀತಾ ಪಾತ್ರಕ್ಕೆ ಜೀವ ತುಂಬಿದ್ದರು. ಆದರೀಗ ಎರಡನೇ ಪಾರ್ಟ್ನಲ್ಲಿ ರಮ್ಯಾ ಬದಲಿಗೆ ಶ್ರೀನಗರ ಕಿಟ್ಟಿಗೆ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿರುವುದು ವಿಶೇಷ.
ಈ ಸಿನಿಮಾಗೂ ರಮ್ಯಾ ಅವರನ್ನೇ ಕೇಳೋಣ ಎಂದುಕೊಂಡಿದ್ದೆ. ಆದರೆ ಅವರು ಸಿಗದೆ ಇದ್ದರೆ ಏನು ಮಾಡೋದು ಅಂತ ಪ್ರಶ್ನೆ ಮೂಡಿದಾಗ ನೆನಪಾದದ್ದು ರಚಿತಾ ರಾಮ್ ಹಾಗೂ ತ್ರಿಶಾ. ರಚಿತಾ ಅವರನ್ನು ಕೇಳಿದಾಗ ಖುಷಿಯಿಂದ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ನಾಗಶೇಖರ್. ಇನ್ನು ಈ ಸಿನಿಮಾದಲ್ಲಿ ರಮ್ಯಾ ಕೃಷ್ಣ, ಪ್ರಕಾಶ್ ರಾಜ್, ರಂಗಾಯಣ ರಘು, ಸಾಧುಕೋಕಿಲ ಅವರ ದೊಡ್ಡ ತಾರಾಬಳಗವೇ ಇರಲಿದೆ. ಸಧ್ಯಕ್ಕೆ ಈ ಸಿನಿಮಾವು ಕನ್ನಡದಲ್ಲಷ್ಟೇ ನಿರ್ಮಾಣಗೊಳ್ಳುತ್ತಿದ್ದು ಇದು ಹಿಟ್ ಆದ ಮೇಲೆ ನೋಡೋಣ. ಇದೇ ಆಗಸ್ಟ್ 15ಕ್ಕೆ ಸಿನಿಮಾದ ಅದ್ಧೂರಿ ಮುಹೂರ್ತವನ್ನ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಮಾಡಲಿದ್ದೇವೆ.
‘ಸಂಜು ವೆಡ್ಸ್ ಗೀತಾ’ ಸಿನಿಮಾದಂತೆ ಸಂಜು ವೆಡ್ಸ್ ಗೀತಾ -2′ ಸಿನಿಮಾವನ್ನ 2024ರ ಏಪ್ರಿಲ್ ಒಂದಕ್ಕೆ ಬಿಡುಗಡೆ ಮಾಡಬೇಕೆಂದಿದ್ದೇವೆ ಎಂದು ನಾಗಶೇಖರ್ ತಿಳಿಸಿದ್ದಾರೆ. ಮೊದಲ ಬಾರಿಗೆ ಕಿಟ್ಟಿ ಹಾಗೂ ರಚಿತಾ ಜೊತೆಯಾಗಿ ನಟಿಸುತ್ತಿದ್ದು, ಈ ಹಿಂದೆ ಕಿಟ್ಟಿ ಹಾಗೂ ರಮ್ಯಾ ಸೃಷ್ಟಿಸಿದ್ದ ಸೆನ್ಸೇಷನ್ ಮತ್ತೆ ಕ್ರಿಯೇಟ್ ಆಗಲಿದೆಯೇ ಎಂದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಮುಂಬೈ ಹಾಗೂ ಸ್ವಿಜರ್ಲ್ಯಾಂಡ್ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಇನ್ನು ಈ ಸಿನಿಮಾವನ್ನ ಡಾ.ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ.
ಇನ್ನು ಈ ಹಿಂದೆ ಸಂಜು ವೆಡ್ಸ್ ಗೀತಾ ಸಿನಿಮಾ ಬಿಡುಗಡೆ ಆದ ನಂತರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸನ್ನು ಕಂಡಿತ್ತು. ಹಾಗೇ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈ ಸಿನಿಮಾದ ಹಾಡುಗಳು ಇಂದಿಗೂ ಸೂಪರ್ ಹಿಟ್ ಆಗಿದೆ. ಇದೀಗ ಈ ಸಿನಿಮಾಗೆ ಸಂಜು ವೆಡ್ಸ್ ಗೀತಾ ಎಂದು ಹೆಸರಿಡುವ ಮೂಲಕ ಪ್ರೇಕ್ಷಕರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಒಟ್ಟಾರೆ ಈ ಸಿನಿಮಾ ಮತ್ತೊಮ್ಮೆ ಪಾರ್ಟ್ 2 ನೊಂದಿಗೆ ಮತ್ತೆ ಸದ್ದು ಮಾಡಲು ಬರುತ್ತಿದೆ.