ಸೆಲಬ್ರೆಟಿ ಎಂದ ಕೊಡಲೇ ಸಾಕಷ್ಟು ಸುದ್ದಿಗಳು ಹಬ್ಬುತ್ತಲೇ ಇರುತ್ತದೆ.ಈ ಸುದ್ದಿಗಳಲ್ಲಿ ಕೆಲವು ಸತ್ಯವು ಹೌದು ಇನ್ನ ಕೆಲವು ಸುಳ್ಳು ಇರಬಹುದು.ಹಾಗಾಗಿ ಕೆಲ ವಿಚಾರಗಳನ್ನು ಸೆಲಬ್ರೆಟಿಗಳು ಗುಟ್ಟಾಗಿ ಇಡಲು ಬಯಸುತ್ತಾರೆ.ಒಂದೊಂದು ಬಾರಿ ಸೆಲಬ್ರೆಟಿಗಳ ಬಗ್ಗೆ ನೈಜ ಸುದ್ದಿಗಳಿಗಿಂತ ಸುಳ್ಳು ಸುದ್ದಿ ಹಬ್ಬುವುದೇ ಹೆಚ್ಚು.ಹೀಗೆ ಸಿನಿಮಾ ರಂಗದಲ್ಲಿ ಸೆಲಬ್ರೆಟಿಗಳ ವಿಚಾರವಾಗಿ ಸುದ್ದಿಗಳು ಹಬ್ಬುವುದು ಹೊಸದೇನಲ್ಲ. ಕೆಲವೊಮ್ಮೆ ಇದನ್ನೆಲ್ಲ ಅನುಭವ ಮಾಡಿ ಮಾಡಿ ನೈಜ ಸುದ್ದಿಗಳನ್ನು ಕೂಡ ನಂಬದೆ ಇರದಂತೆ ಮಾಡಿಬಿಟ್ಟಿದೆ.ಇದೀಗ ಈ ಸಾಲಿಗೆ “ಚಂದನಾ ಅನಂತಕೃಷ್ಣ ಹಾಗೂ ವಾಸುಕಿ ವೈಭವ್” ಕೂಡ ಸೇರ್ಪಡೆಯಾಗಿದ್ದಾರೆ.

ಇನ್ನು ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದು ಬಿಗ್ ಬಾಸ್ ಸೀಸನ್ 7ರ ಮುಕಾಂತರ.ಇವರಿಬ್ಬರು ಬಣ್ಣದ ಲೋಕಕ್ಕೆ ಸಂಭದ ಪಟ್ಟವರು.ಆದರೆ ಇಬ್ಬರದು ಬೇರೆ ಬೇರೆ ಕ್ಷೇತ್ರಾ.ಚಂದನ ಅವರು ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿಯೂ ನಟಿ ಎಂದು ಗುರುತಿಸಿಕೊಂಡಿದ್ದಾರೆ.ಇತ್ತ ವಾಸುಕಿ ಅವರ ಬಗ್ಗೆ ಹೇಳುವುದಾದರೆ ಸಂಗೀತ ನಿರ್ದೇಶನದಲ್ಲಿ ಬಹಕ ಪ್ರಖ್ಯಾತಿಯನ್ನು ಪಡುದುಕೊಂಡಿದ್ದಾರೆ.ಇವರ ಸಂಯೋಜನೆಯಲ್ಲಿ ಬಂದ ಹಾಡುಗಳು ಈಗ ಎಲ್ಲರ ಪ್ಲೇ ಲಿಸ್ಟ್ ನಲ್ಲಿ ಮೊಳಗುತ್ತಲೇ ಇರುತ್ತದೆ.
ಇನ್ನು ಚಂದನ ಅವರು ಮೂಲತಃ ತುಮಕೂರಿನವರಾದ ಅವರು ಬಿಕಾಂ ಪಡವಿದರರಾಗಿದ್ದಾರೆ. ಚಂದನ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕಿರುತೆರೆಯ ಮುಕಾಂತರ.ರಂಗಭೂಮಿ ಕಲಾವಿದೆಯಾದ ಚಂದನಾ ಕಿರುತೆರೆಯಲ್ಲೂ ಮಿಂಚಿದವರು. ರಾಜಾ ರಾಣಿ, ಮುದ್ದು ಮಣಿಗಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ನಟಿಯನ್ನು ಚಂದನ ಅನ್ನುವರಿಗಿಂತ ಚುಕ್ಕಿ ಎನ್ನುವವರೆ ಹೆಚ್ಚಾಗಿದ್ದಾರೆ. ಈ ನಟಿ ‘ಜಾಲಿ ಬ್ಯಾಚುಲರ್ಸ್’ ಎಂಬ ಸಿನಿಮಾದಲ್ಲಿ ನಟಿಸಿ ಬಾಲ್ಯ ಕನಸನ್ನು ನನಸು ಮಾಡಿಕೊಂಡಿದ್ದಾರೆ.ಇಂದು ಚಂದನಾ ಅನಂತಕೃಷ್ಣ ಅವರು ಬಹುಮುಖ ಪ್ರತಿಭೆ ಎಂದು ಪ್ರಸಿದ್ದಿ ಪಡೆದಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿಯಾಗಿದ್ದ ಚಂದನಾ ಅವರು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಜೊತೆ ಹಸೆಮಣೆ ಏರುತ್ತಾರೆ ಎನ್ನುವ ಸುದ್ದಿ ವೈರಲ್ ಆಗ್ತಿದೆ.
ಈ ಜೋಡಿ ಬಿಗ್ ಬಾಸ್ ವೇದಿಕೆಯಲ್ಲಿ ಒಳ್ಳೆಯ ಸ್ನೇಹಿತರಾಗಿ ಗುರುತಿಸಿಕೊಂಡಿದ್ದರು. ಈ ಸೀಸನ್ ಮುಗಿದ ಬಳಿಕ ಕೂಡ ಹೊರ ಪ್ರಪಂಚದಲ್ಲಿದ್ದಾಗ ಸಬೇಹಿತರಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅಕ್ಟೋಬರ್ ತಿಂಗಳಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಂದನಾ ಅನಂತಕೃಷ್ಣ ಹಾಗೂ ವಾಸುಕಿ ವೈಭವ್ ಫೋಟೋಶೂಟ್ ಮಾಡಿದ್ದರು. ಆ ಫೋಟೋವನ್ನು ಚಂದನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಾಸುಕಿ ಅವರ ಹುಟ್ಟುಹಬ್ಬದ ಶುಭಾಷಯಗಳನ್ನು ತಿಳಿಸುವ ಮುಕಾಂತರ ಹಂಚಿಕೊಂಡಿದ್ದರು. ಕಳೆದ ವಾರ ವಾಸುಕಿ ಅವರ ಹುಟ್ಟು ಹಬ್ಬಕ್ಕೆ ಮತ್ತದೇ ಫೋಟೋಶೂಟ್ನಲ್ಲಿ ತೆಗೆಸಿದ ಮತ್ತೊಂದು ಫೋಟೋವನ್ನು ಅಪ್ ಲೋಡ್ ಮಾಡಿ ವಿಶ್ ಮಾಡಿದ್ದಾರೆ.
ಇದು ಈಗ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ. ಇಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡಿದ್ದೀರಾ ಎಂಬ ಮಾತುಗಳು ಕೂಡ ಕೇಳಿವರುತ್ತಿವೆ.ಇವರಿಬ್ಬರ ಸ್ನೇಹ ಯಾವತ್ತಿಗೂ ಪ್ರೀತಿಯ ರೀತಿ ಕಂಡಿಲ್ಲ.ಆದರೆ ಅವರಿಬ್ಬರ ಭಾವನೆ ಇಂದು ಬೇರೆ ಆಗಿರಬಹುದು.ಈ ಜೋಡಿ ಮುಂದಿನ ದಿನಗಳಲ್ಲಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುತ್ತಾರ ಎಂದು ನಾವು ಕಾದುನೋಡಬೇಕಿದೆ.ಆದರೆ ಇಷ್ಟೆಲ್ಲ ಸದ್ದು ಮಾಡುತ್ತಿರುವ ಈ ವಿಚಾರದ ಕುರಿತು ಈ ಜೋಡಿ ಯಾವ ಪ್ರತಿಕ್ರಿಯೆ ನೀಡಿಲ್ಲ.ಇವರಿಬ್ಬರ ಈ ಮೌನ ಎಲ್ಲರಲ್ಲೂ ಅನುಮನಾ ಹೆಚ್ಚಿಸುತ್ತಿದೆ ಎಂದರೆ ತಪ್ಪಾಗಲಾರದು.