ಬಾಲಿವುಡ್ ಇಂಡಸ್ಟ್ರಿಯಲ್ಲಿ ಅನೇಕ ಸ್ಟಾರ್ಗಳು ಇನ್ನು ಮದುವೆಯಾಗದೆ ಸಿಂಗಲ್ ಆಗಿದ್ದಾರೆ. ಆದರೆ ಅವರ ಮದುವೆಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅಮೀಶಾ ಪಟೇಲ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ ಇತ್ತೀಚೆಗೆ ಅಮೀಶಾ ಉದ್ಯಮಿಯೊಬ್ಬರ ಜೊತೆ ಗುಟ್ಟಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ನಾವು ಹೇಳುತ್ತಿಲ್ಲ. ಆದರೆ ಅವರ ವೈರಲ್ ಫೋಟೋವನ್ನು ನೋಡಿದ ಅಭಿಮಾನಿಗಳು ಹೀಗೆ ಹೇಳುತ್ತಿದ್ದಾರೆ. ಅಮೀಶಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಉದ್ಯಮಿ ನಿರ್ವಾನ್ ಬಿರ್ಲಾ ಅವರೊಂದಿಗೆ ಕ್ಲೋಸ್ ಆಗಿರುವುದನ್ನು ಕಾಣಬಹುದು. ಇವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಅಭಿಮಾನಿಗಳು ಲವ್ ಮಾಡುತ್ತಿರಬಹುದು ಎಂದು ಊಹಿಸಲು ಪ್ರಾರಂಭಿಸಿದ್ದಾರೆ.

ಫೋಟೋವನ್ನು ಹಂಚಿಕೊಂಡ ಅಮೀಶಾ
ಅಮೀಶಾ ಪಟೇಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮಿಲಿಯನೇರ್ ಉದ್ಯಮಿ ನಿರ್ವಾನ್ ಬಿರ್ಲಾ ಅವರೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು. ಸದ್ಯ ಅಮೀಶಾ ತುಂಬಾ ಫ್ರೆಂಡ್ಲಿಯಾಗಿ ಕಾಣಿಸಿಕೊಂಡಿರುವುದನ್ನು ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಈ ಫೋಟೋವನ್ನು ಹಂಚಿಕೊಳ್ಳುವಾಗ ಅಮೀಶಾ, ‘ದುಬೈನಲ್ಲಿ ನನ್ನ ಆತ್ಮೀಯ ಸ್ನೇಹಿತ @ ನಿರ್ವಾನ್ಬಿರ್ಲಾ ಅವರೊಂದಿಗೆ ಅದ್ಭುತ ಸಂಜೆ’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಶೀರ್ಷಿಕೆಯ ಜೊತೆಗೆ ಅವರು ಅನೇಕ ಕೆಂಪು ಹೃದಯದ ಇಮೋಜಿಯನ್ನು ಹಾಕಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು…
ಅಮೀಶಾ ಪಟೇಲ್ ಅವರ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ತಕ್ಷಣ, ಇದು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಲು ಪ್ರಾರಂಭಿಸಿತು. ಇದು ಅವರ ಮತ್ತು ನಿರ್ವಾಣ್ ಅವರ ಡೇಟಿಂಗ್ ಕುರಿತಾಗಿ ಸುದ್ದಿಯಾಗಲಾರಂಭಿಸಿತು. ಸೋಷಿಯಲ್ ಮೀಡಿಯಾ ಬಳಕೆದಾರರು ನಟಿಯ ಫೋಟೋ ನೋಡಿ ಕಾಮೆಂಟ್ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಕೆಲವು ಬಳಕೆದಾರರು ಅವರಿಬ್ಬರ ಫೋಟೋಗೆ ‘ಜೋಡಿ ಚೆನ್ನಾಗಿದೆ’ ಎಂದು ಕಾಮೆಂಟ್ ಮಾಡಿದರೆ, ಮತ್ತೋರ್ವ ಬಳಕೆದಾರರು, ‘ಸುಂದರ ಜೋಡಿ’ ಎಂದು ಬರೆದಿದ್ದಾರೆ. ‘ನೀವು ನಿಜವಾಗಿಯೂ ತುಂಬಾ ಬ್ಯೂಟಿಫುಲ್ ಕಪಲ್ಸ್… ‘ಅಂತಿಮವಾಗಿ ನಿಮ್ಮ ಆತ್ಮ ಸಂಗಾತಿಯನ್ನು ಕಂಡುಕೊಂಡಿದ್ದೀರಿ ಎಂದು ನನಗೆ ಸಂತೋಷವಾಗಿದೆ” ಎಂದೆಲ್ಲಾ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ನಿರ್ವಾನ್ ಬಿರ್ಲಾ ಯಾರು?
ಅಮೀಶಾ ಪಟೇಲ್ ಅವರ ಈ ಪೋಸ್ಟ್ಗೆ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಆದರೆ ಅಭಿಮಾನಿಗಳ ಯಾವುದೇ ಪ್ರಶ್ನೆಗಳಿಗೆ ಅವರು ಇನ್ನೂ ಉತ್ತರಿಸಿಲ್ಲ. ಅಮೀಶಾ ಪಟೇಲ್ಗಿಂತ ಸುಮಾರು 19 ವರ್ಷ ಕಿರಿಯ ನಿರ್ವಾಣ್, ಯಶೋವರ್ಧನ್ ಬಿರ್ಲಾ ಮತ್ತು ಅವಂತಿ ಬಿರ್ಲಾ ಅವರ ಮಗ. ಇವರು ಉದ್ಯಮಿ ಮತ್ತು ಗಾಯಕನಾಗಿರುವುದಲ್ಲದೆ, ಬಿರ್ಲಾ ಓಪನ್ ಮೈಂಡ್ಸ್ ಮತ್ತು ಬಿರ್ಲಾ ಬ್ರೈನಿಯಾಕ್ಸ್ ಸಂಸ್ಥಾಪಕರೂ ಆಗಿದ್ದಾರೆ.
ಇನ್ನು ಅಮೀಶಾ ಪಟೇಲ್ ಬಗ್ಗೆ ಹೇಳುವುದಾದರೆ ಅವರು ಬಹಳ ಸಮಯದ ನಂತರ ‘ಗದರ್ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು 2001 ರ ‘ಗದರ್’ ಚಿತ್ರದ ಮುಂದುವರಿದ ಭಾಗವಾಗಿದೆ, ಇದು 2023 ರಲ್ಲಿ ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತು. ಮಾಧ್ಯಮ ವರದಿಗಳನ್ನು ನಂಬುವುದಾದರೆ, ತಯಾರಕರು ‘ಗದರ್ 3’ ಅನ್ನು ಸಹ ಮಾಡುವುದಾಗಿ ಘೋಷಿಸಿದ್ದಾರೆ. ಅಭಿಮಾನಿಗಳು ತಾರಾ ಸಿಂಗ್ ಮತ್ತು ಸಕೀನಾ ಜೋಡಿಯನ್ನು ಮತ್ತೆ ಚಲನಚಿತ್ರ ಪರದೆಯ ಮೇಲೆ ನೋಡಬಹುದು. ಆದರೆ, ಅಮೀಶಾ ಸಂದರ್ಶನವೊಂದರಲ್ಲಿ, ತೆರೆಯ ಮೇಲೆ ಸಾಕಷ್ಟು ಸಮಯ ನೀಡಿದರೆ ಮಾತ್ರ ಚಿತ್ರದ ಭಾಗವಾಗುತ್ತೇನೆ ಎಂದು ಹೇಳಿದ್ದರು.