ಲಾಯರ್ ಜಗದೀಶ್ ಹೆಚ್ಚಾಗಿ ವಿವಾದಗಳ ಕಾರಣಕ್ಕೆ ಸುದ್ದಿಯಾಗುವ ವ್ಯಕ್ತಿ. ಒಬ್ಬರಲ್ಲ ಒಬ್ಬರ ಬಗ್ಗೆ ಆಪಾದನೆ ಮಾಡುತ್ತಾ ಇರುವ ಲಾಯರ್ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಬಿಗ್ ಬಾಸ್ ಶೋಗೆ ಬಂದು ಅರ್ಧದಲ್ಲೇ ಶೋ ಇಂದ ಕಿಕ್ ಔಟ್ ಆಗಿದ್ದ ಜಗದೀಶ್ ನಂತರ ಜೀಕನ್ನಡ ವಾಹಿನಿಯ ಶೋಗೆ ಬಂದರು. ಅಲ್ಲಿಂದಲು ಹೊರಬಂದ ಜಗದೀಶ್ ಅವರು ಮತ್ತೆ ಕಲರ್ಸ್ ಕನ್ನಡದ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಪ್ರೊಮೋ ಶೂಟಿಂಗ್ ನಲ್ಲಿ ಸಹ ಕಾಣಿಸಿಕೊಂಡಿದ್ದರು. ಆದರೆ ಸಂಚಿಕೆಗಳು ಶುರುವಾಗುವ ಮೊದಲೇ ಜಗದೀಶ್ ಅವರು ಈ ಶೋ ಇಂದಲೂ ಹೊರಗಡೆ ಹೋಗಿದ್ದಾರೆ. ಪ್ರಸ್ತುತ ಪರಪ್ಪನ ಅಗ್ರಹಾರ ಜೈ*ಲಿನಲ್ಲಿ ಇದ್ದಾರೆ ಜಗದೀಶ್. ಅಷ್ಟಕ್ಕೂ ಆಗಿರೋದೇನು? ತಿಳಿಸುತ್ತೇವೆ ನೋಡಿ..
ಲಾಯರ್ ಜಗದೀಶ್ ಬಿಗ್ ಬಾಸ್ ಮನೆಗೆ ಬಂದಾಗ ಶುರುವಿನಲ್ಲಿ ಬಹಳ ಅಹಂಕಾರದಲ್ಲಿ ಇದ್ದರು, ತಪ್ಪುಗಳನ್ನ ಮಾಡಿದರು, ಎಲ್ಲರಿಂದಲು ನಿಂದನೆಗೆ ಒಳಗಾದರು. ಒಂದಷ್ಟು ಅವಾಂತರಗಳನ್ನು ಮಾಡಿಕೊಂಡರು. ಬಳಿಕ ಸುದೀಪ್ ಅವರು ಹೇಳಿದ ಮಾತುಗಳನ್ನು ಅರ್ಥ ಮಾಡಿಕೊಂಡು, ಉತ್ತಮವಾಗಿ ಆಡುವುದಕ್ಕೆ ಶುರು ಮಾಡಿದ್ದರು. ಹಂಸ ಅವರ ಜೊತೆಗೆ ಒಳ್ಳೇ ಎಂಟರ್ಟೈನ್ಮೆಂಟ್ ಕೊಡುವುದಕ್ಕೆ ಶುರು ಮಾಡಿದ್ದ ಜಗದೀಶ್ ಅವರು, ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣಕ್ಕೆ ಬಿಗ್ ಬಾಸ್ ಮನೆಯ ಒಳಗೆ ಗಲಾಟೆಗಳು ನಡೆದು, ಜಗದೀಶ್ ಹಾಗೂ ರಂಜಿತ್ ಇಬ್ಬರನ್ನು ಶೋ ಮಧ್ಯದಲ್ಲೇ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಬಿಗ್ ಬಾಸ್ ಶೋ ಇಂದ ಅಭಿಮಾನಿಗಳನ್ನು ಗಳಿಸಬೇಕು ಎಂದು ಬಂದಿದ್ದ ಜಗದೀಶ್ ಅವರು ಅರ್ಧಕ್ಕೆ ಹೊರ ಹೋಗಿದ್ದರು.

ಬಿಗ್ ಬಾಸ್ ಶೋ ಏನೋ ಈ ರೀತಿ ಆಗಿ ಹೋಯಿತು. ಆದರೆ ಜಗದೀಶ್ ಅವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಪ್ರೊಮೋ ಶೂಟ್ ನಲ್ಲಿ ಸಹ ಇದ್ದರು, ಬಿಗ್ ಬಾಸ್ ಮನೆಗೆ ಹೋಗಿ ಶೋ ಪ್ರಚಾರ ಕೂಡ ಮಾಡಿದ್ದರು ಜಗದೀಶ್. ಆದರೆ ಈ ಶೋ ಶೂಟಿಂಗ್ ಶುರುವಾಗೋ ವೇಳೆಗೆ ಜಗದೀಶ್ ಅವರು ಜೈ*ಲು ಪಾಲಾಗಿದ್ದಾರೆ. ಈ ಕಾರಣಕ್ಕೆ ಅವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಇಂದ ದೂರ ಉಳಿದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನು ಎಂದರೆ, ಕೊಡಿಗೆಹಳ್ಳಿಯಲ್ಲಿ ಅಣ್ಣಮ್ಮನ ಹಬ್ಬದ ವಿಚಾರವಾಗಿ ನಡೆದ ಜಗಳ ಇದು. ಜಗದೀಶ್ ಅವರ ಜಾಗದಲ್ಲಿ ಶಾಮಿಯಾನ ಹಾಕಿದ್ದರು ಎಂದು ಅದನ್ನು ತೆಗೆಯಬೇಕೆಂದು ಜಗದೀಶ್ ಅವರು ಪಟ್ಟು ಹಿಡಿದಾಗ, ಸ್ಥಳೀಯರು ಅವರ ವಿರುದ್ಧ ತಿರುಗಿ ಬಿದ್ದಿದ್ದರು.

ರಸ್ತೆಯಲ್ಲೇ ಜಗದೀಶ್ ಅವರನ್ನು ಥಳಿಸಿದ್ದರು. ಈ ಜಗಳ ಮಾರಾಮಾರಿಯಾಗಿ, ಜಗದೀಶ್ ಅವರ ವಿರುದ್ಧ ನೂರಾರು ಜನರು ತಿರುಗಿ ಬಿದ್ದಾಗ, ಜಗದೀಶ್ ಅವರ ಗನ್ ಮ್ಯಾನ್ ಫೈರಿಂಗ್ ಮಾಡಿದ್ದರು. ಇಷ್ಟೆಲ್ಲಾ ನಡೆದ ಕಾರಣಕ್ಕೆ ಜಗದೀಶ್, ಅವರ ಮಗ, ಕಾರ್ ಡ್ರೈವರ್ ಮತ್ತು ಗನ್ ಮ್ಯಾನ್ ಇದಿಷ್ಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರು ಈಗ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಕಾರಣಕ್ಕೆ ಜಗದೀಶ್ ಅವರು ಶೋ ಇಂದ ಹೊರಗಡೆ ಬಂದಿದ್ದು, ಮತ್ತೆ ಇವರು ಶೋಗೆ ಮರಳಿ ಬರುತ್ತಾರೆ ಎನ್ನುವ ನಿರೀಕ್ಷೆ ಅಂತೂ ಇಲ್ಲ ಎನ್ನಲಾಗಿದೆ. ಜಗದೀಶ್ ಅವರು ಈ ಕೇಸ್ ಇಂದ ಸಂಪೂರ್ಣವಾಗಿ ಹೊರಗಡೆ ಬರುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಸಹ ಗೊತ್ತಿಲ್ಲ. ಹಾಗಾಗಿ ಇವರನ್ನು ಬಿಟ್ಟು ಶೋ ಮುಂದುವರೆಸಲಾಗಿದೆ.

ಇನ್ನು ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಬಗ್ಗೆ ಹೇಳುವುದಾದರೆ ಕಲರ್ ಫುಲ್ ಹುಡುಗರು ಮತ್ತು ಹುಡುಗಿಯರ ಶೋ ಇದಾಗಿದ್ದು, ಬಿಗ್ ಬಾಸ್ ಶೋ ಇಂದ ಹನುಮಂತ, ಧನರಾಜ್, ರಜತ್, ಐಶ್ವರ್ಯ ಸಿಂಧೋಗಿ, ಶೋಭಾ ಶೆಟ್ಟಿ ಹಾಗೂ ಚೈತ್ರಾ ಕುಂದಾಪುರ ಇವರಿಷ್ಟು ಜನ ಶೋಗೆ ಬಂದಿದ್ದಾರೆ. ಇನ್ನು ಲ್ಯಾಗ್ ಮಂಜು, ಸೂರಜ್, ಪ್ರಶಾಂತ್, ಸ್ನೇಹಿತ್, ಪ್ರಿಯಾಂಕ ಸವದತ್ತಿ, ಕೋಳಿ ರಮ್ಯಾ ಸೇರಿದಂತೆ ಎಲ್ಲಾ ಯೂತ್ಸ್ ಗಳ ದಂಡು ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿದ್ದು ಮುಂದಿನ ದಿನಗಳಲ್ಲಿ ಈ ಶೋ ಯಾವ ರೀತಿಯಲ್ಲಿ ಮುಂದುವರೆದು ಜನರಿಗೆ ಮನರಂಜನೆ ಕೊಡತ್ತದೆ ಎಂದು ಕಾದು ನೋಡಬೇಕಿದೆ..