ಐ ಸಿ ಸಿ ಏಕದಿನ ವಿಶ್ವಕಪ್ 2023 ಭಾರತದಲ್ಲಿ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ, ನವೆಂಬರ್ 19 ರಂದು ಫೈನಲ್ ಪಂದ್ಯದೊಂದಿಗೆ ವಿಶ್ವಕಪ್ ಮುಕ್ತಾಯಗೊಳ್ಳಲಿದೆ, ಈ ಬಾರಿಯ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಹಾಟ್ ಫೇವರೆಟ್ ಆಗಿ ಕಣಕ್ಕೆ ಇಳಿಯಲಿದೆ, ಅದಕ್ಕೆ ಮುಖ್ಯ ಕಾರಣ ತವರು ನೆಲದಲ್ಲಿ ಆಡುವುದು. 2011 ರಲ್ಲಿ ಭಾರತ ತಂಡ ವಿಶ್ವಕಪ್ ಆತಿಥ್ಯ ವಹಿಸಿದ್ದಾಗ ಭಾರತ ತಂಡ ಚಾಂಪಿಯನ್ ಆಗಿತ್ತು, ಆದರೆ ಈ ಬಾರಿ ಭಾರತ ವಿಶ್ವಕಪ್ ಗೆಲ್ಲುವ ಸಾಧ್ಯತೆ ಇಲ್ಲ, ಎಂದು ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಗ್ಲೇನ್ ಮೆಗ್ರಾತ್ ಯವರು ಹೇಳಿದ್ದಾರೆ.

ತವರಿನಲ್ಲಿ ವಿಶ್ವಕಪ್ ಆಡುತ್ತಿದ್ದರೂ ಭಾರತಕ್ಕೆ ಈ ಬಾರಿ ವಿಜೆತರಾಗುವ ಅವಕಾಶ ಇಲ್ಲ’ ಎಂದು ಆಸ್ಟ್ರೇಲಿಯನ್ ಲೆಜೆಂಡ್ ಹೇಳಿದ್ದಾರೆ, 2023 ರ ಏಕದಿನ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಭಾರತಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚಿದೆ’ ಎಂದು ಹೇಳಿದ್ದಾರೆ, ಅದಕ್ಕೆ ಕಾರಣಗಳನ್ನು ಸಹ ತಿಳಿಸಿದ್ದಾರೆ, ಪಾಕಿಸ್ತಾನದಲ್ಲಿ ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಗಳು ಮತ್ತು ಬೌಲರ್ ಗಳು ಇದ್ದಾರೆ, ಆದರೆ ಅವರು ಫೀಲ್ಡಿಂಗ್ ನಲ್ಲಿ ಸುಧಾರಿಸಿದರೆ ಪಾಕಿಸ್ತಾನ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಈಗ ವಿದೇಶಿ ತಂಡಗಳು ಮೊದಲಿನಂತೆ ಭಾರತದ ಪ್ರವಾಸಕ್ಕೆ ಹೆದರುತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ, ಐ ಪಿ ಎಲ್ ನಿಂದಾಗಿ ವಿದೇಶಿ ಆಟಗಾರರು ಭಾರತದ ಆಟಗಾರರ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿದ್ದಾರೆ’ ಎಂದು ಗ್ಲೇನ್ ಮೆಗ್ರಾತ್ ರವರು ಹೇಳಿದ್ದಾರೆ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳೀಗೂ ವಿಶ್ವಕಪ್ ಗೆಲ್ಲುವ ಅವಕಾಶವಿದೆ ಎಂದು ಹೇಳಿರುವ ಅವರು ಅವರ ದೃಷ್ಟಿಯಿಂದ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಹಾಟ್ ಫೇವರೆಟ್ ಆಗಿದ್ದು ಸೆಮಿ ಫೈನಲ್ ತಲುಪಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ.
ಆದರೆ ಟೀಂ ಇಂಡಿಯಾಕ್ಕಿಂತ ಪಾಕಿಸ್ತಾನಕ್ಕೆ ಈ ಬಾರಿಯ ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚಿದೆ’ ಎಂದು ಹೇಳಿದ್ದಾರೆ, ಇನ್ನು ಏಕದಿನ ವಿಶ್ವಕಪ್ ಒಟ್ಟು 10 ಸ್ಥಳಗಳಲ್ಲಿ ನಡೆಯಲಿದೆ, ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹೈದರಾಬಾದ್ ನಲ್ಲಿ ಅಕ್ಟೋಬರ್ 14ರಂದು ನಡೆಯಲಿದೆ, ಗ್ಲೇನ್ ಮೆಗ್ರಾತ್ ರವರು ನುಡಿದಿರುವ ಭವಿಷ್ಯದ ಪ್ರಕಾರ ಈ ಬಾರಿಯ ವಿಶ್ವಕಪ್ ಪಾಕಿಸ್ತಾನ ಗೆಲ್ಲತ್ತೋ ಅಥವಾ ಭಾರತ ಗೆಲ್ಲತ್ತೋ ಎಂಬುದನ್ನು ನೋಡಬೇಕಾಗಿದೆ.