ಭಾರತದ ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ಗಾಗಿ ಭಾರತ ತಂಡ ಪ್ರಕಟವಾಗಲು ಕಾಯುತ್ತಾ ಇದ್ದರು , ಸೆಲೆಕ್ಟರ್ಸ್, ಬಿ.ಸಿ.ಸಿ.ಐ ಕೋಚ್ ಹಾಗೂ ನಾಯಕ ಎಲ್ಲರೂ ಸೇರಿ ಟೀಂ ಇಂಡಿಯಾವನ್ನು ಸೆಲೆಕ್ಟ್ ಮಾಡುತ್ತಾ ಇದ್ದಾರೆ, ಪಿ ಟಿ ಐ ಮೂಲಗಳಿಂದ ಇಪ್ಪತ್ತು ಆಟಗಾರರ ಕೋರ್ ಗ್ರೂಪ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ, ಈ ಇಪ್ಪತ್ತು ಆಟಗಾರರಲ್ಲೇ ಹದಿನೈದು ಪ್ರಮುಖ ಆಟಗಾರರನ್ನು ವಿಶ್ವಕಪ್ ಗಾಗಿ ಆಯ್ಕೆ ಮಾಡಲಾಗುತ್ತದೆ.

ಈಗ ಬಂದಿರುವ ಇಪ್ಪತ್ತು ಆಟಗಾರರ ಹೆಸರುಗಳನ್ನು ಹೇಳುವುದಾದರೆ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ , ಶ್ರೇಯಶ್ ಅಯ್ಯರ್, ಕೆ. ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರಿತ್ ಬೂಮ್ರ, ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಸಂಜು ಸ್ಯಾಮ್ ಸನ್, ಶಾರ್ದೂಲ್ ಠಾಕೂರ್, ಜಯದೇವ್ ಉನತ್ ಕತ್, ಮುಖೇಶ್ ಕುಮಾರ್ ಹಾಗೂ ಚಹಲ್.

ಈ ಟೀಂ ರಿವಿಲ್ ಆಗಿರುವುದು ಪಿ ಟಿ ಐ ನ ಜರ್ನಲಿಸ್ಟ್ ರವರಿಂದ. ಇವರು ರಿವಿಲ್ ಮಾಡುತ್ತಿದ್ದಾರೆ ಎಂದರೆ ಅವರು ಬಿ ಸಿ ಸಿ ಐ ಅವರ ಹತ್ತಿರದ ಮೂಲಗಳಿಂದ ವಿಷಯವನ್ನು ಕಲೆಕ್ಟ್ ಮಾಡಿರುತ್ತಾರೆ, ಈ ಇಪ್ಪತ್ತು ಹೆಸರುಗಳನ್ನು ಆಯ್ಕೆ ಮಾಡಿರುವುದು ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ಬಿ ಸಿ ಸಿ ಐ ನ ಆಯ್ಕೆಗಾರರಾದಂತಹ ಅಜಿತ್ ಅಗರ್ಕರ್ ಹಾಗೂ ಟೀಂ . ಈ ಟೀಂ ಅನ್ನು ನೋಡುವುದಾದರೆ ಭಾರತದ ವೇಗದ ಬೌಲರ್ ಇಮ್ರಾನ್ ಮಲ್ಲಿಕ್ ನನ್ನು ಮಿಸ್ ಮಾಡಲಾಗಿದೆ, ಇದರಿಂದ ತುಂಬಾ ಪ್ರಶ್ನೆಗಳು ಏಳುತ್ತವೆ.

ಎಡಗೈ ವೇಗಿ ಹರ್ಷ ದೀಪ್ ಸಿಂಗ್ ಅನ್ನು ಕೂಡ ಮಿಸ್ ಮಾಡಲಾಗಿದೆ, ಮಿಕ್ಕ ಆಲ್ಮೋಸ್ಟ್ ಟೀಂ ಪ್ಲೇಯರ್ಸ್ ಎಲ್ಲರೂ ಅಂದುಕೊಂಡಂತೆ ಇದ್ದಾರೆ, ಆದರೆ ಕೆಲವು ಪ್ಲೇಯರ್ ಗಳ ಮೇಲೆ ಮಾತ್ರ ಸಂಶಯವಿದೆ, ಇದರಲ್ಲಿ ಶ್ರೇಯಶ್ ಅಯ್ಯರ್ ಹಾಗೂ ಕೆ.ಎಲ್ ರಾಹುಲ್ ಇ ಎನ್ ಸಿ ಎ ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ, ಅವರು 100% ಫಿಟ್ ಆಗಿದ್ದಿರಾ? ಎಂಬುದು ಇನ್ನೂ ಕ್ಲೇರಿಟಿ ಸಿಕ್ಕಿಲ್ಲ, ಕೊನೆಯ ಕ್ಷಣದಲ್ಲಿ ಅವರಿಬ್ಬರ ಬದಲು ಬೇರೆ ಬದಲಿ ಆಟಗಾರರನ್ನು ಆಯ್ಕೆ ಮಾಡಬಹುದು.

ಈಗ ವೆಸ್ಟ್ ಇಂಡೀಸ್ ನಲ್ಲಿ ಟಿ 20 ಸರಣಿ ನಡೆಯುತ್ತಿದೆ, ಇದಾದ ನಂತರ ಐರ್ಲ್ಯಾಂಡ್ ಜೊತೆಗೆ ಟಿ20 ಸರಣಿ ನಡೆಯಲಿದೆ, ಅದರ ನಂತರ ಏಷ್ಯಾ ಕಪ್ ನಡೆಯಲಿದೆ, ಅದರ ನಂತರ ಆಸ್ಟ್ರೇಲಿಯಾ ವಿರುದ್ಧ ಮೂರು ಏಕ ದಿನ ಪಂದ್ಯಗಳ ಸರಣಿ ನಡೆಯಲಿದೆ, ಇಷ್ಟೆಲ್ಲಾ ಸರಣಿಗಳು ಇರುವಾಗ, ಇನ್ನೂ ಟೀಂ ನಲ್ಲಿ ಬದಲಾವಣೆ ಕಾಣಬಹುದು ಅಂತ ಅನಿಸುತ್ತದೆ.
ಈ ತಂಡದಲ್ಲಿ ಜಯದೇವ್ ಉನತ್ ಕತ್ ಹಾಗೂ ಮುಖೇಶ್ ಕುಮಾರ್, ಹೇಗೆ ಸೆಲೆಕ್ಟ್ ಆಗಿದ್ದಾರೆ ಎಂಬುವುದೇ ಅರ್ಥವಾಗುತ್ತಿಲ್ಲ, ಅವರು ಕೂಡ ಇನ್ನೂ ಅದ್ಭುತ ಪ್ರದರ್ಶನವನ್ನು ನೀಡಿಲ್ಲ, ತಿಲಕ್ ವರ್ಮಾರನ್ನು ಕೂಡ ಈ ಟೀಂ ನಲ್ಲಿ ಸೇರಿಸಬಹುದಿತ್ತು, ಅಂತ ಅನಿಸುತ್ತದೆ. ಏನೇ ಆದರೂ ಕೊನೆಗೆ ಈ ಇಪ್ಪತ್ತರಲ್ಲಿ, ಹದಿನೈದು ಆಟಗಾರರನ್ನು ಮಾತ್ರ ಭಾರತದ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗುವುದು.