ಅಘೋರಿಗಳು ನಶೆಗಾಗಿ ಪರ್ವತಗಳ ಮೇಲೆ, ಹಿಮಾಲಯದ ಮೇಲೆ ಕುಳಿತು ಬಂಗಿ ಎಳೆಯವುದನ್ನು ನಾವೆಲ್ಲ ಕಂಡಿರುತ್ತೇವೆ. ಆದರೆ ದೇವಸ್ಥಾನದ ಅರ್ಚಕನೊಬ್ಬ ನಶೆಗಾಗಿಯೋ, ತೃಶೆಗಾಗಿಯೋ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುವುದನ್ನು ಕಂಡಿದ್ದೀರಾ?. ಇಂತಹದ್ದೊಂದು ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗಾಂಜಾ ಸೇವಿಸಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಅರ್ಚಕನನ್ನು ಅಂತಿಮವಾಗಿ ಸಾರ್ವಜನಿಕರು ಕೈ-ಕಾಲು ಹಿಡಿದು ಹೊರ ದಬ್ಬಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಲ್ಲಿನ ದೃವಸ್ಥಾನವೊಂದರ ಅರ್ಚಕ ಗಾಂಜಾ ಸೇವಿಸಿ ಹೆಂಡ ಕುಡಿದ ಮಂಗನಂತೆ ಆಡುತ್ತಿದ್ದ.ಇಷ್ಟೇ ಅಲ್ಲದೆ ದೇವಸ್ಥಾನಕ್ಕೆ ಬಂದ ಯುವತಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅರ್ಚಕನ ಈ ಅವಾಂತರ ಕಂಡು ಅಲ್ಲೇ ಇದ್ದ ಯುವಕರ ಗುಂಪು ಕೆಂಡಾಮಂಡಲವಾಗಿದೆ. ಕೊನೆಗೆ ಯುವಕರೆಲ್ಲ ಸೇರಿ ಪೋಲಿ ಅರ್ಚಕನಿಗೆ ಮಂಗಳಾರತಿ ಮಾಡಿದ್ದಾರೆ.
ಅಸಭ್ಯವಾಗಿ ವರ್ತಿಸಿದ ಅರ್ಚಕನ ಕೈ-ಕಾಲು ಹಿಡಿಡು ಹೊರ ದಬ್ಬಿದ ಯುವಕರು, ‘ಗಾಂಜಾ ಸೇವಿಸಿ ದೇವಸ್ಥಾನಕ್ಕೆ ಬರ್ತೀಯ, ಯುವತಿ ಜೊತೆ ಕೆಟ್ಟದಾಗಿ ನಡೆದುಕೋಳ್ತಿಯಾ. ಮತ್ತೊಮ್ಮೆ ದೇವಸ್ಥಾನದಲ್ಲಿ ಕಾಣಿಸಿಕೊಂಡರೆ ಸುಮ್ಮನೆ ಬಿಡೋದಿಲ್ಲ ಅಂತ’ ಹೊರ ದಬ್ಬಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಚಡಾ ಸ್ವಾಮೀಜಿಯ ನಡವಳಿಕೆ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ.