ಕೆಲವೊಮ್ಮೆ ಸಿನಿಮಾಗಳಲ್ಲಿ ನಡೆಯುವ ಅದೇ ಘಟನೆ ನಿಜ ಜೀವನದಲ್ಲಿ ಮರುಕಳಿಸಿದೆ. ಸಿನಿಮಾ ಕಾಲ್ಪನಿಕ, ಅಲ್ಲಿನ ಪಾತ್ರಗಳು ಸನ್ನಿವೇಶಗಳು ಎಲ್ಲವೂ ಕಥೆ ಬರೆಯುವವರ ಮನಸ್ಸಲ್ಲಿ ಮೂಡುವುದು, ಅದನ್ನು ಒಬ್ಬ ನಿರ್ದೇಶಕ ಚಿತ್ರೀಕರಿಸುತ್ತಾರೆ ಎನ್ನುವುದು ಸತ್ಯ. ಸಿನಿಮಾಗಳಲ್ಲಿ ಇದೆಲ್ಲವೂ ನಡೆಯುವುದು ಒಂದು ಕಡೆಯಾದರೆ, ಕೆಲವೊಮ್ಮೆ ನಿಜ ಜೀವನದಲ್ಲಿ ಇಂಥ ಘಟನೆಗಳು ನಡೆದುಬಿಡಬಹುದು. ಸಿನಿಮಾಗಳಲ್ಲಿ ತೋರಿಸುವುದು ನಿಜ ಜೀವನಕ್ಕೆ ಹತ್ತಿರ ಇರುವಂಥ ಅಥವಾ ನಿಜ ಜೀವನದಿಂದ ಪ್ರೇರಣೆ ತೆಗೆದುಕೊಂಡಂಥ ಘಟನೆಗಳನ್ನೇ, ಅದೇ ರೀತಿ ಪಾಕಿಸ್ತಾನದಲ್ಲಿ ಒಂದು ಘಟನೆ ನಡೆದಿದ್ದು, ಅಪ್ಪು ಅವರ ಸಿನಿಮಾ ಕಥೆಯನ್ನು ಈ ಘಟನೆ ನೆನಪಿಗೆ ತರುತ್ತಿದೆ. ಅಷ್ಟಕ್ಕೂ ಏನಿದು ಘಟನೆ ಎಂದು ನೋಡುವುದಾದರೆ.. ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿರುವ ಒಬ್ಬ ಒಬ್ಬ ಡಾಕ್ಟರ್ ಜೀವನದಲ್ಲಿ ನಡೆದಿರುವ ಕಥೆ ಇದು.

ಹೌದು, ಇಸ್ಲಾಮಾಬಾದ್ ನಲ್ಲಿ ಚೆನ್ನಾಗಿ ಓದಿ ಡಾಕ್ಟರ್ ಆಗಿದ್ದ ಮಹಿಳೆಯೊಬ್ಬರು ಒಬ್ಬ ಬ್ಯುಸಿನೆಸ್ ಮ್ಯಾನ್ ಅನ್ನು ಪ್ರೀತಿಸಿ ಮದುವೆಯಾದರು. ಆತನನ್ನು ಆಕೆ ಪ್ರೀತಿಸಿ ಮದುವೆ ಆಗಿದ್ದಕ್ಕೆ ಮುಖ್ಯ ಕಾರಣ ಆ ವ್ಯಕ್ತಿ ಚೆನ್ನಾಗಿದ್ದ ಸ್ಥಿತಿವಂತನು ಆಗಿದ್ದ, ಎಲ್ಲರೂ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದರು. ಅವರ ಬಳಿ ದೊಡ್ಡ ಮನೆ ಇತ್ತು, ಈ ಎಲ್ಲಾ ಕಾರಣಕ್ಕೆ ಆ ಡಾಕ್ಟರ್ ಗೆ ಈ ಉದ್ಯಮಿಯನ್ನು ಕಂಡ್ರೆ ಪ್ರೀತಿ ಉಂಟಾಗಿ ಆತನನ್ನು ಪ್ರೀತಿಸುವುದಕ್ಕೆ ಶುರು ಮಾಡಿದರು. ಎರಡು ಮನೆಯವರು ಕೂಡ ಒಪ್ಪಿ ಈ ಮದುವೆಯನ್ನು ಮಾಡಿದರು. ಮದುವೆ ನಡೆದಾಗ, ಮದುವೆ ನಡೆದ ಕೆಲವು ದಿನಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಬಳಿಕ ಎಲ್ಲರ ನಿಜ ಸ್ವರೂಪ ಒಂದೊಂದಾಗಿ ಬಯಲಾಯಿತು. ಅಸಲಿಗೆ ಆ ವ್ಯಕ್ತಿ ಉದ್ಯಮಿಯೇ ಆಗಿರಲಿಲ್ಲ ಎನ್ನುವ ವಿಚಾರ ಆಕೆಗೆ ಕ್ಲಿಯರ್ ಆಗಿ ಗೊತ್ತಾಯಿತು.

ನೋಡೋದಕ್ಕೆ ಶ್ರೀಮಂತರ ಹಾಗಿದ್ದಾರೆ, ದೊಡ್ಡ ಮನೆ ಇದೆ, ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತ್ತಾರೆ. ಆದರೆ ನಿಜಕ್ಕೂ ಅವರು ಉದ್ಯಮಿಗಳೇ ಅಲ್ಲ, ಅವರು ಮಾಡುವ ಕೆಲಸ ಭಿಕ್ಷೆ ಎತ್ತುವುದು ಎಂದು ತಿಳಿದುಬಂದಿದೆ. ಹೌದು, ಈ ವಿಚಾರದ ಬಗ್ಗೆ ಆಕೆಗೆ ಅನುಮಾನ ಬಂದು, ಆಕೆ ಅವರುಗಳ ಕಾರ್ ಫಾಲೋ ಮಾಡಿಕೊಂಡು ಹೋಗಿದ್ದಾಳೆ, ನಂತರ ಅವರು ಕಾರ್ ಇಂದ ಇಳಿದು, ಭಿಕ್ಷುಕರ ಹಾಗೆ ವೇಷಭೂಷಣ ಬದಲಾಯಿಸಿಕೊಂಡು, ಭಿಕ್ಷೆ ಬೇಡುತ್ತಿರುವುದನ್ನು ಕಂಡು ಶಾಕ್ ಆಗಿದ್ದಾಳೆ. ಅವರ ಕುಟುಂಬದ ಬಗ್ಗೆ ಆಕೆಗೆ ಎಲ್ಲಾ ಸತ್ಯವು ಗೊತ್ತಾದ ನಂತರ, ಗಂಡನ ಮನೆಯನ್ನು ಬಿಟ್ಟು, ತಂದೆ ತಾಯಿ ಮನೆಗೆ ವಾಪಸ್ ಹೋಗಿದ್ದಾಳೆ. ಈ ವಿಚಾರ ವೈರಲ್ ಆದ ನಂತರ 2 ವರ್ಷಗಳ ಹಿಂದೆ ಆಕೆಯ ಇಂಟರ್ವ್ಯೂ ಮಾಡಲಾಗಿತ್ತು. ಅದರಲ್ಲಿ ಆಕೆ ಕೆಲವು ಆಸಕ್ತಿಕರ ವಿಚಾರಗಳನ್ನು ರಿವೀಲ್ ಮಾಡಿದ್ದರು.

ಆಕೆಗೆ ಡೌಟ್ ಬಂದು, ಮನೆಯ ಬೇಸ್ಮೆಂಟ್ ಗೆ ಹೋಗಿ ಚೆಕ್ ಮಾಡಿ ನೋಡಿದಾಗ, ಭಿಕ್ಷುಕರ ಹಾಗೆ ಹರಿದಿದ್ದ ಬಟ್ಟೆಗಳು, ಭಿಕ್ಷುಕರ ಹಾಗೆ ರೆಡಿ ಆಗಲು ಬೇಕಾದ ವಸ್ತುಗಳು ಇದೆಲ್ಲವೂ ಕೂಡ ಜೊತೆಯಲ್ಲೇ ಇತ್ತಂತೆ. ಇದನ್ನೆಲ್ಲಾ ನೋಡಿ ಆಕೆ ಶಾಕ್ ಆಗಿದ್ದರಂತೆ. 2 ವರ್ಷಗಳ ಬಳಿಕ ಆಕೆಯ ಸಂದರ್ಶನ ಮತ್ತು ಈ ಘಟನೆ ಎರಡು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಕೇಳಿದರೆ ನಿಮಗೆ ಇಂಥ ಸನ್ನಿವೇಶ ಯಾವ ಸಿನಿಮಾದಲ್ಲಿ ಇದೆ ಎನ್ನುವುದು ಗೊತ್ತಾಗುತ್ತದೆ. ಹೌದು, ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಟಿಸಿರುವ ಮಿಲನಾ ಸಿನಿಮಾದಲ್ಲಿ ಈ ಥರದ ಕಾಮಿಡಿ ಟ್ರ್ಯಾಕ್ ಇದೆ. ಇದರಲ್ಲಿ ರಂಗಾಯಣ ರಘು ಅವರು ಮತ್ತು ಸಿಹಿ ಕಹಿ ಚಂದ್ರು ಅವರು ಈ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಿನಿಮಾದಲ್ಲಿ ಬರುವ ಸೆಪರೇಟ್ ಟ್ರ್ಯಾಕ್ ಆಗಿದೆ.

ಪುನೀತ್ ಅವರು ಇರುವ ಅದೇ ಅಪಾರ್ಟ್ಮೆಂಟ್ ನ ಮ್ಯಾನೇಜರ್ ಆಗಿರುತ್ತಾರೆ ಸಿಹಿ ಕಹಿ ಚಂದ್ರು ಅವರು. ರಂಗಾಯಣ ರಘು ಅವರು ತಾವು ಒಬ್ಬ ಉದ್ಯಮಿ, ಬಿಬಿ ಗ್ರೂಪ್ ಕಂಪನಿಯ ಓನರ್ ಎಂದು ಹೇಳಿ ಸಿಹಿ ಕಹಿ ಚಂದ್ರು ಅವರಿಂದ ದೊಡ್ಡ ಫ್ಲ್ಯಾಟ್ ಪಡೆದುಕೊಳ್ಳುತ್ತಾರೆ. ಆದರೆ ಅಸಲಿಗೆ ರಂಗಾಯಣ ರಘು ಅವರು ಭಿಕ್ಷುಕರಾಗಿರುತ್ತಾರೆ, ಒಂದಷ್ಟು ಸಮಯ ಚಂದ್ರು ಅವರಿಗೆ ಈ ವಿಷಯ ಗೊತ್ತಾಗಿರುವುದಿಲ್ಲ. ನಂತರ ಗೊತ್ತಾಗುತ್ತದೆ, ಅವರನ್ನು ಫಾಲೋ ಮಾಡಿಕೊಂಡು ಹೋದಾಗ, ರಂಗಾಯಣ ರಘು ಅವರು ಮಾತ್ರವಲ್ಲ ಅವರ ಹೆಂಡತಿ ಮತ್ತು ಮಗ ಕೂಡ ಇದೇ ಕೆಲಸ ಮಾಡೋದು, ಬಿಬಿ ಗ್ರೂಪ್ ಎಂದರೆ ಭವತಿ ಭಿಕ್ಷಾಂದೇಹಿ ಗ್ರೂಪ್ ಎಂದು ಗೊತ್ತಾಗುತ್ತದೆ. ಕೊನೆಗೆ ಅವರನ್ನು ಫ್ಲ್ಯಾಟ್ ಇಂದ ಹೊರ ಕಳಿಸಲು ಏನೆಲ್ಲಾ ಸಾಹಸ ಮಾಡಲಾಗುತ್ತದೆ ಎನ್ನುವುದು ಈ ಕಾಮಿಡಿ ಟ್ರ್ಯಾಕ್ ನ ಉದ್ದೇಶ.
ಇದೆಲ್ಲವು ನೋಡುವುದಕ್ಕೆ ಬಹಳ ತಮಾಷೆಯಾಗಿ ಕಾಣಿಸುತ್ತದೆ. ಸಿನಿಮಾದಲ್ಲಿ ಈ ಟ್ರ್ಯಾಕ್ ಕೂಡ ಜನರಿಗೆ ಸಖತ್ ಮನರಂಜನೆ ಕೊಟ್ಟಿತ್ತು. ಆದರೆ ಇಂಥದ್ದೇ ಘಟನೆ ನಿಜ ಜೀವನದಲ್ಲಿ ಕೂಡ ನಡೆಯುತ್ತದೆ ಎಂದು ಯಾರು ಕೂಡ ಊಹಿಸುವುದಕ್ಕೆ ಸಾಧ್ಯವಿಲ್ಲ. ಈ ಘಟನೆ ಮತ್ತು ಪಾಕಿಸ್ತಾನದಲ್ಲಿ ನಡೆದ ಘಟನೆಯ ತೀವ್ರತೆ ಬೇರೆ ಬೇರೆ ಇರಬಹುದು ಆದರೆ ನಡೆದಿರುವುದು ಒಂದೇ ರೀತಿಯ ಘಟನೆ ಎನ್ನುವುದಂತೂ ಸತ್ಯ. ಕೆಲವೊಮ್ಮೆ ಕಾಲ್ಪನಿಕವಾಗಿ ಬರೆಯುವ ಕಥೆಗಳು ಕೂಡ ನಿಜ ಆಗಿಬಿಡಬಹುದು ಅಥವಾ ಅದಕ್ಕೆ ಸರಿ ಹೊಂದುವ ಹಾಗೆ ಕೆಲವು ಘಟನೆಗಳು ಕೂಡ ನಡೆದು ಹೋಗಬಹುದು. ಒಟ್ಟಿನಲ್ಲಿ ಈ ಒಂದು ಘಟನೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ನಡೆದಿರುವ ಘಟನೆ ಆಗಿದ್ದರೂ ಸಹ ನಾವು ಎಲ್ಲಾ ಕಡೆ ನಮ್ಮ ಎಚ್ಚರಿಕೆಯಲ್ಲಿ ನಾವು ಇರುವುದು ಉತ್ತಮ ಎಂದರೆ ತಪ್ಪಲ್ಲ.

ಈ ಘಟನೆಯ ಮೂಲಕ ನಾವು ತಿಳಿದುಕೊಳ್ಳಬೇಕಿರುವ ವಿಚಾರ ಏನು ಎಂದರೆ, ಈ ಘಟನೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಏಕೆಂದರೆ ಹೆಣ್ಣುಮಕ್ಕಳನ್ನು ಸುಲಭವಾಗಿ ನಂಬಿಸಿ ಮೋಸ ಮಾಡುವಂಥ ಜನರು ಇರುತ್ತಾರೆ. ಹಾಗಾಗಿ ಜನರು ಬಹಳ ಹುಷಾರಾಗಿ ಇರಬೇಕು. ಇಂಥ ಕುಟುಂಬಗಳು ಹೆಣ್ಣುಮಕ್ಕಳಿಗೆ ತಾವು ಸಭ್ಯಸ್ಥರು ಎಂದು ಆಸೆ ತೋರಿಸಿ, ಮದುವೆ ಮಾಡಿಕೊಂಡು ಅವರ ಜೀವನವನ್ನೇ ಹಾಳು ಮಾಡಿಬಿಡುತ್ತಾರೆ. ಹಾಗಾಗಿ ಹೆಣ್ಣುಮಕ್ಕಳು ಬಹಳ ಹುಷಾರಾಗಿ ಇರಬೇಕು. ಈ ಘಟನೆಯನ್ನು ನೋಡಿ ನಮಗೆ ತಮಾಷೆ ಅನ್ನಿಸಬಹುದು. ಆದರೆ ನಿಜಕ್ಕೂ ನಾವು ಬಹಳ ಹುಷಾರಾಗಿ ಇರಬೇಕು. ಎಲ್ಲಾ ಹೆಣ್ಣುಮಕ್ಕಳು ಈ ಘಟನೆಯನ್ನು ಒಂದು ಪಾಠದ ಹಾಗೆ ತೆಗೆದುಕೊಳ್ಳುಬೇಕು.