ರಿಯಾ ಚಕ್ರವರ್ತಿ ದೀರ್ಘಕಾಲದವರೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಈಗ ತನ್ನ ಪಾಡ್ ಕಾಸ್ಟ್ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದರಲ್ಲಿ ಇದುವರೆಗೆ ಅನೇಕ ಪ್ರಸಿದ್ಧ ಮತ್ತು ದೊಡ್ಡ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಸುಷ್ಮಿತಾ ಸೇನ್, ಫರಾನ್ ಅಖ್ತರ್, ಶಿಬಾನಿ ದಾಂಡೇಕರ್ ಮತ್ತು ಅಮೀರ್ ಖಾನ್ ಅವರಂತಹ ತಾರೆಯರು ಸಹ ರಿಯಾ ಅವರ ಶೋನಲ್ಲಿ ಭಾಗವಹಿಸಿದ್ದಾರೆ. ಅವರೊಂದಿಗೆ ರಿಯಾ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ. ಈಗ ಯೋ ಯೋ ಹನಿ ಸಿಂಗ್ ಇವರ ಪಾಡ್ ಕಾಸ್ಟ್ ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ಸಮಯದಲ್ಲಿ ರಿಯಾ ಜೈಲಿನಲ್ಲಿ ಕಳೆದ ದಿನಗಳು ಮತ್ತು ಮಾನಸಿಕ ಆರೋಗ್ಯದ ಕುರಿತು ಸಹ ಚರ್ಚಿಸಿದ್ದಾರೆ.
ರಿಯಾ ಚಕ್ರವರ್ತಿ ಪಾಡ್ ಕಾಸ್ಟ್ ನಲ್ಲಿ ಹನಿ ಸಿಂಗ್
ವಾಸ್ತವವಾಗಿ, ಹನಿ ಸಿಂಗ್ ಸಹ ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿದ್ದರು. ಆದರೆ, ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅಂದಹಾಗೆ ಪಾಡ್ ಕಾಸ್ಟ್ನಲ್ಲಿ, ರಿಯಾ ಚಕ್ರವರ್ತಿ ಹನಿ ಸಿಂಗ್ ಅವರೊಂದಿಗೆ ಮಾನಸಿಕ ಆರೋಗ್ಯ ಮತ್ತು ಬೈಪೋಲಾರ್ ಡಿಸಾರ್ಡರ್ ಕುರಿತು ಮಾತನಾಡುತ್ತಾ, ‘ನಾನು ಈ ಕಾಯಿಲೆಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ನಾನು ಜೈಲಿನಲ್ಲಿದ್ದಾಗಲೂ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದೆʼ ಎಂದು ತಿಳಿಸಿದ್ದಾರೆ.

ಬೈಪೋಲಾರ್ ಡಿಸಾರ್ಡರ್ ಅನ್ನು ಅರ್ಥಮಾಡಿಕೊಳ್ಳದ ಜನರು
ರಿಯಾ ಚಕ್ರವರ್ತಿ ಹೇಳುವ ಪ್ರಕಾರ “ಬೈಪೋಲಾರ್ ಡಿಸಾರ್ಡರ್ ಅನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಅವರು ಹುಚ್ಚರಾಗಿದ್ದಾರೆ ಎಂದು ಜನರು ಭಾವಿಸುತ್ತಾರೆ ಅಥವಾ ಅವರ ಬಗ್ಗೆ ಮೇಲ್ನೋಟಕ್ಕೆ ಏನಾದರೂ ಇರಬಹುದು ಎಂದು ಹೇಳುತ್ತಾರೆ. ಆದರೆ, ನಾನು ಜೈಲಿನಲ್ಲಿದ್ದಾಗ, ಅಲ್ಲಿ ಒಂದು ವಿಷಯ ಗಮನಕ್ಕೆ ಬಂದಿತು. ಅದು ಸೂಸೈಡ್ ವಾಚ್. ಅಂದರೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಜನರ ಬಗ್ಗೆ ನಿಗಾ ಇಡಲಾಗುತ್ತದೆ. ಮಧ್ಯಮ ಅಥವಾ ಸೂಕ್ಷ್ಮ ಪ್ರಕರಣಗಳಲ್ಲಿ ಭಾಗಿಯಾಗಿರುವ ಜನರಿಗೆ ಹೀಗನಿಸುತ್ತದೆ. ಆದರೆ ಅವರನ್ನು ವಾಚ್ ಮಾಡುವುದರಿಂದ ಅವರು ಅಸಮಾಧಾನಗೊಳ್ಳುವುದಿಲ್ಲ ಮತ್ತು ಯಾವುದೇ ತಪ್ಪು ಹೆಜ್ಜೆ ಇಡುವುದಿಲ್ಲ”
ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ
“ನಾನು ಅಲ್ಲಿ ಏಕಾಂತ ಬಂಧನಲ್ಲಿದ್ದೆ, ಹಾಗಾಗಿ ನನ್ನನ್ನು ಗಮನಿಸುತ್ತಿದ್ದ ಇಬ್ಬರು ಮಹಿಳೆಯರೊಂದಿಗೆ ಮಾತ್ರ ಮಾತನಾಡಲು ಸಾಧ್ಯವಾಯಿತು. ಆ ದಿನಗಳಲ್ಲಿ, ನಾನು ಅವರಿಬ್ಬರೊಂದಿಗೆ ಮಾನಸಿಕ ಆರೋಗ್ಯದ ಬಗ್ಗೆ ಸಾಕಷ್ಟು ಮಾತನಾಡಿದೆ. ಆ 15 ದಿನಗಳ ಕಾಲ ನಾನು ಮಾನಸಿಕ ಆರೋಗ್ಯದ ಬಗ್ಗೆ ಮಾತ್ರ ಮಾತನಾಡಿದೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಅರ್ಥಮಾಡಿಕೊಂಡೆ. ನನ್ನ ಜೀವನದಲ್ಲಿ ನಡೆಯುತ್ತಿರುವ ಎಲ್ಲದರ ಬಗ್ಗೆ ಯೋಚಿಸಿದೆ. ಒಬ್ಬ ಮಹಿಳೆ ತನ್ನ ಪತಿ ಬೈಪೋಲಾರ್ ಡಿಸಾರ್ಡರ್ನಿಂದ ಹೋರಾಡುತ್ತಿದ್ದಾರೆ ಎಂದು ಹೇಳಿದರು. ನಾನು ಜೈಲಿನಲ್ಲಿ ಉಳಿದುಕೊಂಡು ಒಬ್ಬರ ಜೀವವನ್ನು ಉಳಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ, ಅದು ನನಗೆ ದೊಡ್ಡ ವಿಷಯವಾಗಿದೆ. ಈ ರೋಗವನ್ನು ಅರ್ಥಮಾಡಿಕೊಳ್ಳುವುದು ಮತ್ತು ತಿಳಿದುಕೊಳ್ಳುವುದು ಬಹಳ ಮುಖ್ಯ” ಎಂದಿದ್ದಾರೆ.