ನಿನ್ನೆ ನಡೆದ ಐರ್ಲ್ಯಾಂಡ್ v/s ಇಂಡಿಯಾ ಮೊದಲ ಟಿ20 ಯಲ್ಲಿ ಐರ್ಲ್ಯಾಂಡ್ 140 ರನ್ಸ್ ಟಾರ್ಗೆಟ್ ಅನ್ನು ಭಾರತಕ್ಕೆ ನೀಡಿತ್ತು. ಅವರು ಇಪ್ಪತ್ತು ಓವರ್ ಗಳಲ್ಲಿ 139 ಕ್ಕೆ 7 ವಿಕೆಟ್ ಕಳೆದುಕೊಂಡರು. ನಂತರ ಭಾರತ ಚೇಸ್ ಮಾಡುತ್ತಾ 47ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡರು 6.5 ಓವರ್ ಕಂಪ್ಲೀಟ್ ಆಗಿತ್ತು. ಅಷ್ಟರಲ್ಲಿ ಮಳೆ ಬಂದು ಮ್ಯಾಚ್ ರದ್ದಾಯಿತು. ಇದರ ಮೂಲಕ ಭಾರತ ಡಿ ಎಲ್ ಎಸ್ ಮೆಥಡ್ ನಿಂದ ಎರಡು ರನ್ ಗಳಿಂದ ಈ ಪಂದ್ಯವನ್ನು ಗೆದ್ದಿತ್ತು.

ಈಗ ನಾವು ಈ ಪಂದ್ಯದಲ್ಲಿ ಮೂರು ಮ್ಯಾಚ್ ವಿನ್ನರ್ ಗಳನ್ನು ಹೇಳಲಿದ್ದೇವೆ. ಹಾಗೂ ಇಬ್ಬರು ಕೆಟ್ಟ ಪ್ರದರ್ಶನ ವನ್ನು ನೀಡಿದವರ ಬಗ್ಗೆ ತಿಳಿಸುತ್ತೇವೆ. ಮೊದಲನೆಯದಾಗಿ ನಾಯಕ ಜಸ್ಪ್ರಿತ್ ಬೂಮ್ರ.ಅವರು ತುಂಬಾ ದಿನಗಳ ನಂತರ ಇಂಜುರಿಯಿಂದ ವಾಪಸ್ ಬಂದಮೇಲೆ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಬರೀ ನಾಲ್ಕು ಓವರ್ ಗಳಲ್ಲಿ 6 ಎಕನಾಮಿ ರೇಟ್ ನಂತೆ 24 ರನ್ ಮಾತ್ರ ನೀಡಿದ್ದಾರೆ.

ಜೊತೆಗೆ ಮೊದಲನೇ ಓವರ್ ನಲ್ಲಿ ಎರಡು ವಿಕೆಟ್ ಗಳನ್ನು ಗಳಿಸಿದ್ದಾರೆ. ಜೊತೆಗೆ ಬೂಮ್ರಾ ಗೆ ಮ್ಯಾನ್ ಆಫ್ ದ ಮ್ಯಾಚ್ ಕೂಡ ಕೊಡಲಾಯಿತು. ಎರಡನೇ ಪ್ಲೇಯರ್ ಆಗಿ ಯಶಸ್ವಿ ಜೈಸ್ವಾಲ್. ಇವರು 23 ಬಾಲ್ ಗಳಲ್ಲಿ 24 ರನ್ ಗಳಿಸಿದರು, ಜೊತೆಗೆ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಕೂಡ ಗಳಿಸಿದರು. ಅದಕ್ಕಾಗಿಯೇ ಭಾರತ ಎರಡು ರನ್ ಗಳ ಅಂತರದಿಂದ ಡಿ ಎಲ್ ಎಸ್ ಮೆಥಡ್ ನಿಂದ ಪಂದ್ಯ ಗೆದ್ದಿತ್ತು ಎಂದು ಹೇಳಬಹುದು.

ನಂತರ ಮೂರನೇ ಪ್ಲೇಯರ್ ರವಿ ಬಿಶ್ನೋಯ್ . ಇವರು ಬರೀ 5.75 ರ ಎಕನಾಮಿ ರೇಟ್ ನಲ್ಲಿ ನಾಲ್ಕು ಓವರ್ ಗಳಲ್ಲಿ 23 ರನ್ ಮಾತ್ರ ಕೊಟ್ಟಿದ್ದಾರೆ ಜೊತೆಗೆ ಎರಡು ವಿಕೆಟ್ ಗಳನ್ನು ಪಡೆದುಕೊಂಡರು. ಇವರು ಕೂಡ ಒಂದು ಅದ್ಭುತ ಪ್ರದರ್ಶನವನ್ನು ನೀಡಿದ್ದರು ಎಂದು ಹೇಳಬಹುದು. ನಂತ್ರ ಪ್ರಸಿದ್ಧ ಕೃಷ್ಣ ಇವರು ಚೊಚ್ಚಲ ಟಿ ಟ್ವೆಂಟಿ ಪಂದ್ಯದಲ್ಲಿ 8 ರ ಎಕನಾಮಿ ರೇಟ್ ನಲ್ಲಿ ನಾಲ್ಕು ಓವರ್ ಗಳಲ್ಲಿ 32 ರನ್ ಕೊಟ್ಟಿದ್ದಾರೆ, ಜೊತೆಗೆ ಎರಡು ವಿಕೆಟ್ ಗಳನ್ನು ಪಡೆದುಕೊಂಡರು. ಇವರು ಒಂದು ಅದ್ಭುತ ಪ್ರದರ್ಶನವನ್ನು ನೀಡಿದ್ದರು ಆದರೆ ದುಬಾರಿಯಾದರು ಎಂದು ಹೇಳಬಹುದು.
ನಂತರ ಈ ಮ್ಯಾಚ್ ನಲ್ಲಿ ಫೇಲ್ ಆದ ಪ್ಲೇಯರ್ ಎಂದರೆ ಮೊದಲನೆಯದಾಗಿ ತಿಲಕ್ ವರ್ಮಾ. ಇವರು ವೆಸ್ಟ್ ಇಂಡೀಸ್ ಸರಣಿಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದರು ಎಂದು ನಿಮಗೆ ಗೊತ್ತು. ಇಲ್ಲೂ ಕೂಡ ಅಭಿಮಾನಿಗಳು ಅದನ್ನೇ ಬಯಸಿದರು. ಆದರೆ ಮೊದಲನೇ ಬಾಲ್ ನಲ್ಲಿ ತಿಲಕ್ ವರ್ಮಾ ಔಟಾಗಿದ್ದರು. ಆದರೂ ಕೂಡ ಇವರು ಏಷ್ಯಾ ಕಪ್ ರೇಸ್ ನಲ್ಲಿ ಇನ್ನೂ ಕೂಡ ಇದ್ದಾರೆ. ಮುಂದಿನ ಎರಡು ಟಿ20 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಬಹುದು ಎಂದು ಭಾವಿಸಬಹುದು.
ಮುಂದಿನ ಪ್ಲೇಯರ್ ಹರ್ಷ ದೀಪ್ ಸಿಂಗ್. ಇವರು 8.75 ಎಕನಾಮಿ ರೇಟ್ ನಲ್ಲಿ ನಾಲ್ಕು ಓವರ್ ಗಳಲ್ಲಿ 35 ರನ್ ಹೊಡಿಸಿಕೊಂಡರು. ಜೊತೆಗೆ ಬರೀ ಒಂದು ವಿಕೆಟ್ ಮಾತ್ರ ಕಿತ್ತರು. ಜೊತೆಗೆ ಇವರ ಸಮಸ್ಯೆ ಏನೆಂದರೆ ಡೆತ್ ಓವರ್ ಗಳಲ್ಲಿ ತುಂಬಾ ರನ್ ಅನ್ನು ನೀಡುತ್ತಿದ್ದಾರೆ. ಒಳ್ಳೆಯ ಸ್ವಿಂಗ್ ಬೌಲಿಂಗ್ ಕೂಡ ಮಾಡುತ್ತಾರೆ. ಆದರೆ ಇವರ ಸಮಸ್ಯೆ ಇರುವುದು 20ನೇಯ ಓವರ್ ನಲ್ಲಿ. ಇವರು ಕೂಡ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸಬಹುದು.