ಕನ್ನಡದ ಎವರ್ ಗ್ರೀನ್ ಹೀರೋಯಿನ್ ಆಗಿ ಹೆಸರು ಮಾಡಿರುವವರು ನಟಿ ಸುಧಾರಾಣಿ. ಇವರು ಸುಮಾರು 38 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಸುಧಾರಾಣಿ ಅವರು ಇಂದಿಗೂ ಚಿತ್ರರಂಗದಲ್ಲಿ ಆಕ್ಟಿವ್, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಇದ್ದಾರೆ. ಸುಧಾರಾಣಿ ಅವರು ವೃತ್ತಿಯಲ್ಲಿ ಹೆಸರು ಮಾಡಿರುವ ಹಾಗೆ ವೈಯಕ್ತಿಕ ಜೀವನದಲ್ಲಿ ಸಹ ಈಗ ಸಾರ್ಥಕತೆಯ ಸಂತೋಷದಲ್ಲಿದ್ದಾರೆ. ಅವರ ಮಗಳು ನಿಧಿ ಈಗ ವೃತ್ತಿ ಶುರು ಮಾಡಿದ್ದು, ನಿಧಿ ಅವರ ವೃತ್ತಿಯ ಬಗ್ಗೆ ಸಂತೋಷದಿಂದ ಪೋಸ್ಟ್ ಮಾಡಿದ್ದಾರೆ.
ಕೆಲವು ವರ್ಷಗಳ ಹಿಂದಿನಿಂದಲೂ ಸುಧಾರಾಣಿ ಅವರ ಮಗಳು ನಿಧಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಅಮ್ಮನ ಹಾಗೆ ಹೀರೋಯಿನ್ ಆಗ್ತಾರೆ ಎಂದು ಹೇಳಲಾಗಿತ್ತು, ಕೆಲವು ಗಾಸಿಪ್ ಗಳು ಸಹ ಕೇಳಿಬಂದಿತ್ತು. ಆದರೆ ಸುಧಾರಾಣಿ ಅವರು ಮಗಳಿಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇಲ್ಲ ಎಂದೇ ಹೇಳುತ್ತಾ ಬಂದಿದ್ದರು, ಆದರೂ ಕೂಡ ಎಲ್ಲೋ ಒಂದು ಕಡೆ ಇವರ ಮಗಳು ಚಿತ್ರರಂಗಕ್ಕೆ ಬರಬಹುದು ಎಂದು ಹೇಳಲಾಗಿತ್ತು. ಆದರೆ ಅದೆಲ್ಲವೂ ಈಗ ಸುಳ್ಳಾಗಿದೆ. ಸುಧಾರಾಣಿ ಅವರ ಮಗಳು ಲಾ ಓದುತ್ತಿದ್ದರು, ಇದೀಗ ಅವರ ಓದು ಮುಗಿದಿದ್ದು, ಹೈಕೋರ್ಟ್ ನಲ್ಲಿ ಲಾಯರ್ ಆಗಿ ಅಪಾಯಿಂಟ್ ಆಗಿದ್ದಾರೆ.

ಮಗಳ ಈ ಸಾಧನೆಯ ಬಗ್ಗೆ ಸುಧಾರಾಣಿ ಅವರು ಒಬ್ಬ ತಾಯಿಯಾಗಿ ಹೆಮ್ಮೆಯಿಂದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಾವುದೇ ತಾಯಿಗೆ ಆದರೂ ಮಕ್ಕಳು ಈ ಒಂದು ಹಂತ ತಲುಪಿದಾಗ ಹೆಮ್ಮೆ ಮತ್ತು ಸಂತೋಷ ಎಲ್ಲವೂ ಹೆಚ್ಚಾಗಿಯೇ ಇರುತ್ತದೆ. ಅದೇ ಸಂತೋಷದಲ್ಲಿ ಇವರು ಇದ್ದಾರೆ. ಇನ್ನು ಸುಧಾರಾಣಿ ಅವರ ಮಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ಹಾಗೂ ಶುಭಾಶಯ ಎರಡು ಸಹ ಸಿಗುತ್ತಿದೆ. ನಿಧಿ ಅವರು ತಮ್ಮದೇ ಆದ ದಾರಿಯಲ್ಲಿ ಸಾಗುತ್ತಿದ್ದು, ಲಾಯರ್ ಆಗಿ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಕಡೆಗೆ ಹೆಜ್ಜೆ ಇಟ್ಟಿದ್ದಾರೆ.
ಇದು ನಿಜಕ್ಕೂ ಒಳ್ಳೆಯ ವಿಚಾರ, ಆಕೆಯ ತಾಯಿ ಒಬ್ಬ ನಟಿ ಎಂದ ಮಾತ್ರಕ್ಕೆ ಮಗಳು ಕೂಡ ನಟಿಯೇ ಆಗಬೇಕು, ಸಿನಿಮಾದಲ್ಲಿ ನಟಿಸಬೇಕು ಎನ್ನುವುದನ್ನು ನಿಧಿ ಅವರು ಮುರಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ನಿರ್ಧಾರಕ್ಕೆ ನೆಟ್ಟಿಗರು ಸಂತೋಷಪಟ್ಟಿದ್ದಾರೆ ಹಾಗೂ ಹೊಗಳಿಕೆಯ ಸುರಿಮಳೆ ಸುರಿದಿದ್ದಾರೆ. ಇನ್ನು ನಿಧಿ ಅವರು ಓದುವುದರಲ್ಲಿ ಮುಂಚೂಣಿ. ಶಾಲೆಯಲ್ಲಿ, ಕಾಲೇಜಿನಲ್ಲಿ ಟಾಪರ್ ಆಗಿದ್ದರು. ಈಗ ಲಾ ಮುಗಿಸಿ, ಲಾಯರ್ ಆಗಿದ್ದಾರೆ. ಅಮ್ಮ ಒಂದು ರೀತಿ ಸಾಧನೆ ಮಾಡಿದರೆ, ಮಗಳು ಇನ್ನೊಂದು ರೀತಿ ಸಾಧನೆ ಮಾಡಿದ್ದಾರೆ..

ಇನ್ನು ಅಮ್ಮ ಮಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಸುಧಾರಾಣಿ ಅವರು ಮಗಳ ಜೊತೆಗೆ ಆಗಾಗ ಡ್ಯಾನ್ಸ್ ಮಾಡುವ ರೀಲ್ಸ್ ಗಳನ್ನು ಶೇರ್ ಮಾಡುತ್ತಾರೆ. ಮಗಳ ಜೊತೆಗೆ ಹೊರಗಡೆ ಹೋಗುವ ರೀಲ್ಸ್ ಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ. ಇದೆಲ್ಲವೂ ವೈರಲ್ ಆಗುತ್ತದೆ. ಇನ್ನು ಸುಧಾರಾಣಿ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ತುಳಸಿ ಪಾತ್ರ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಹಾಗೆಯೇ ಸಿನಿಮಾಗಳಲ್ಲಿ ಕೂಡ ನಟಿಸುತ್ತಾ ಬ್ಯುಸಿ ಆಗಿದ್ದಾರೆ.