ನಟಿ ಐಶ್ವರ್ಯ ರೈ ಅವರು ವಿಶ್ವಸುಂದರಿ ಪಟ್ಟ ಗೆದ್ದ ಕರ್ನಾಟಕದ ಬೆಡಗಿ. ವಿಶ್ವದ ಅತ್ಯಂತ ಸುಂದರ ಮಹಿಳೆಯರ ಲಿಸ್ಟ್ ಗೆ ಐಶ್ವರ್ಯ ಸೇರುತ್ತಾರೆ. ಈಗಲೂ ಕೂಡ ಅಷ್ಟೇ ಸುಂದರವಾಗಿದ್ದರೆ ಐಶ್ವರ್ಯ ರೈ. ಆದರೆ ಕೆಲವು ದಿನಗಳಿಂದ ಇವರ ದಾಂಪತ್ಯ ಜೀವನದ ಬಗ್ಗೆ ಕೆಲವು ಸುದ್ದಿಗಳು ಹರಿದಾಡುತ್ತಿದೆ. ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರಿಂದ ವಿಚ್ಛೇದನ ಪಡೆಯುತ್ತಾರೆ ಎನ್ನಲಾಗುತ್ತಿದ್ದು, ಒಂದು ವೇಕೆ ವಿಚ್ಛೇದನ ಪಡೆದರೆ ಅವರಿಗೆ ಎಷ್ಟು ಜೀವನಾಂಶ ಕೊಡಬೇಕಾಗುತ್ತದೆ? ಪ್ರತಿ ತಿಂಗಳು ಅವರಿಗೆ ಎಷ್ಟು ಹಣ ಕೊಡಬೇಕಾಗುತ್ತದೆ ಗೊತ್ತಾ?
ಐಶ್ವರ್ಯ ರೈ ಅವರು ಹುಟ್ಟಿದ್ದು ಮಂಗಳೂರಿನಲ್ಲಿ ಆದರೂ ಇವರು ಬೆಳೆದದ್ದು ಉತ್ತರ ಭಾರತದಲ್ಲಿ. ಆದರೆ ಐಶ್ವರ್ಯ ರೈ ಅವರು ಮಂಗಳೂರಿನ ನಂಟನ್ನು ಬಿಟ್ಟಿಲ್ಲ. ಆಗಾಗ ಮಂಗಳೂರಿಗೆ ಬರುತ್ತಾರೆ. ಇನ್ನು ಐಶ್ವರ್ಯ ರೈ ಅವರು ಭಾರತ ಚಿತ್ರರಂಗದ ಖ್ಯಾತ ನಟನಾಗಿರುವ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದರು. ಈ ಜೋಡಿಯ ಮದುವೆ 2000ದಲ್ಲಿ ಬಗಳ ಜೋರಾಗಿ ನಡೆಯಿತು. ಭಾರತದ ಎಲ್ಲಾ ಸ್ಟಾರ್ ಕಲಾವಿದರು ಇವರ ಮದುವೆಗೆ ಆಗಮಿಸಿ ಶುಭ ಕೋರಿದ್ದರು. ಮದುವೆಯ ನಂತರ ಮಾಧ್ಯಮದವರಿಂದ ಕೂಡ ಇವರಿಗೆ ಒಳ್ಳೆಯ ಸಪೋರ್ಟ್ ಸಿಕ್ಕಿತ್ತು.

ಇನ್ನು ಐಶ್ವರ್ಯ ರೈ ಅವರು ದೊಡ್ಡ ಕುಟುಂಬದ ಸೊಸೆಯಾಗಿ, ಅಭಿಷೇಕ್ ಬಚ್ಚನ್ ಅವರ ಪತ್ನಿಯಾಗಿ ಉತ್ತಮವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಈ ಜೋಡಿಗೆ ಒಬ್ಬಳು ಮುದ್ದಾದ ಮಗಳಿದ್ದು, ಇವರ ಮಗಳ ಹೆಸರು ಆರಾಧ್ಯ ಬಚ್ಚನ್. ಆರಾಧ್ಯ ಈಗ ಟೀನೇಜ್ ಹುಡುಗಿ ಆಗಿದ್ದು, ತಾಯಿಯ ಜೊತೆಗೆ ಹಲವು ಬಾರಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ರೈ ಅವರು ಮಗಳಿಗೆ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ ಎನ್ನುವುದು ಹಲವು ಸಾರಿ ಆರಾಧ್ಯ ನಡವಳಿಕೆ ನೋಡಿದರೆ ಗೊತ್ತಾಗುತ್ತದೆ. ಇವರಿಬ್ಬರು ಉತ್ತಮವಾಗಿ ಜೀವನ ನಡೆಸುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು.
ಆದರೆ ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ವಿಷಯ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಐಶ್ವರ್ಯ ರೈ ಅವರು ಗಂಡನ ಮನೆಯಲ್ಲಿಲ್ಲ, ಮಗಳ ಜೊತೆಗೆ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ತಮ್ಮ ತಾಯಿಯ ಕುಟುಂಬದ ಜೊತೆಗೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಮಾಧ್ಯಮದಲ್ಲಿ ಈ ಬಗ್ಗೆ ಸುದ್ದಿ ಆಗುತ್ತಿದ್ದರೂ ಸಹ, ಈ ವಿಚಾರದ ಬಗ್ಗೆ ಐಶ್ವರ್ಯ ರೈ ಅವರಾಗಲಿ, ಅಭಿಷೇಕ್ ಬಚ್ಚನ್ ಅವರಾಗಲಿ ಅಥವಾ ಅವರ ಕುಟುಂಬದವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆದರೆ ಒಂದು ವೇಳೆ ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರಿಂದ ವಿಚ್ಛೇದನ ಪಡೆದರೆ ಅವರಿಗೆ ಎಷ್ಟು ಜೀವನಾಂಶ ನೀಡಬೇಕು ಎಂದು ನೋಡುವುದಾದರೆ, ಅಭಿಷೇಕ್ ಅವರ ಒಟ್ಟು ಆಸ್ತಿ 280 ಕೋಟಿ ಎನ್ನಲಾಗಿದ್ದು, ಪ್ರತಿ ತಿಂಗಳು 1.8 ಕೋಟಿ ಸಂಪಾದನೆ ಮಾಡುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಗಳಿಕೆಯಲ್ಲಿ 25% ಜೀವನಾಂಧ ಕೊಡಬೇಕು. ಈ ರೀತಿಯಲ್ಲಿ ನೋಡುವುದಾದರೆ, ಐಶ್ವರ್ಯ ರೈ ಅವರಿಗೆ ಪ್ರತಿ ತಿಂಗಳು 45 ಲಕ್ಷ ರೂಪಾಯಿ ಜೀವನಾಂಶ ಕೊಡಬೇಕಾಗುತ್ತದೆ. ಇದೆಲ್ಲವೂ ಒಂದು ಸುದ್ದಿ ಮಾತ್ರವೇ ಆಗಿದ್ದು, ಕುಟುಂಬದವರಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ.