ಪುನೀತ್ ನಿಧನರಾಗಿ ಒಂದು ವರ್ಷ ಕಳೆದಿದೆ. ನಿನ್ನೆ ಪುನೀತ್ ಸಮಾಧಿಗೆ ಕುಟುಂಬಸ್ಥರು ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಅಶ್ವಿನಿ ರಾಜಕುಮಾರ್ ಜೊತೆ ಮಗಳು ವಂದಿತಾ ಬಂದು ಕಣ್ಣೀರಿಟ್ಟರು. ತಂದೆಗೆ ನೆಚ್ಚಿನ ಆಹಾರ ನೇವಿದೈ ಇಟ್ಟರು. ಆದರೆ ಅಲ್ಲಿ ಮಗಳು ಧೃತಿ ಅಲ್ಲಿ ಇರಲಿಲ್ಲ. ಆದರೆ ಧೃತಿ ತಂದೆಯ ದಿನದ ನೆನಪಿಗೆ ಯಾವ ಕೆಲಸ ಮಾಡಿದ್ದಾರೆ ಗೊತ್ತೆ? ನನ್ನ ಮಕ್ಕಳು ನನ್ನ ಸಿನಿಮಾವನ್ನು ಅಷ್ಟಾಗಿ ನೋಡಲ್ಲ. ಆದರೆ ಈ ಸಿನಿಮಾ ವೈಲ್ಡ್ ಲೈಫ್ಗೆ ಸಂಬಂಧಿಸಿದ್ದು. ಹೀಗಾಗಿ ನನ್ನ ಮಕ್ಕಳು ಈ ಚಿತ್ರ ನೋಡ್ತಾರೆ ಅಂತ ಅಪ್ಪು, ಅಮೋಘ ಬಳಿ ಹೆಳಿದ್ರಂತೆ. ಗಂಧದ ಗುಡಿ ಸಿನಿಮಾವನ್ನು ಪುತ್ರಿ ಧೃತಿ ಮತ್ತು ವಂದಿತಾ ನೋಡುತ್ತಾರೆಂದು ಅಪ್ಪು ನಿರ್ದೇಶಕ ಅಮೋಘವರ್ಷಗೆ ಹೇಳಿದ್ದರಂತೆ. ಗಂಧದಗುಡಿ ಚಿತ್ರದಲ್ಲಿ ಪುನೀತ್ ಒಂದು ಮಾತು ಹೇಳ್ತಾರೆ. ಮನೆಗೆ ವಾಪಸ್ ಹೋಗ್ತೀವಿ ತಾನೆ. ಮನೆಯಲ್ಲಿ ಹೆಂಡ್ತಿ, ಮಕ್ಕಳು ಕಾಯ್ತಾ ಇದ್ದಾರೆ ಅಂತ. ಆ ಮಾತು ಈಗ ಮತ್ತೆ ಮತ್ತೆ ನೆನಪಾಗುತ್ತೆ.

ಗಂಧದದುಡಿ ಸಿನಿಮಾವನ್ನು ನೋಡಿದ ಪುನೀತ್ ಅವರ ಮಗಳು ಧ್ರುತಿ ಅಪ್ಪ ನೆನಪಿಗೆ ಅಪ್ಪನ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾಳೆ. ಧೃತಿ ಚಿಕ್ಕವಳಾಗಿದ್ದಾಗ ತೆಗೆದ ಫೋಟೋ. ಫೋಟೋ ನೋಡಿದ್ದರೆ ಧೃತಿ 1 ಅಥವಾ 2 ವರ್ಷ ಮಗು ಇರಬಹುದು ಇದಕ್ಕೆ ವೈಟ್ ಬಣ್ಣ ಹಾರ್ಟ್ ಹಾಕಿದ್ದಾರೆ. ಅಪ್ಪು ಪುಣ್ಯ ಸ್ಮರಣೆ ದಿನ ಗಂಧದ ಗುಡಿ ಸಿನಿಮಾ ವೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಗಂಧದ ಗುಡಿ ಟೈಟಲ್ ಫೋಟೋ ಹಂಚಿಕೊಂಡಿದ್ದರು. ತಾವು ಗಂಧದಗುಡಿ ಸಿನಿಮಾ ನೋಡಿರುವುದಾಗಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
ಮತ್ತೊಮ್ಮೆ ತೆರೆ ಮೇಲೆ ಕೊನೆಯದಾಗಿ ತಂದೆಯ ದರ್ಶನ ಮಾಡಿ ಖುಷಿ ಪಟ್ಟಿದ್ದಾರೆ. ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಡಾ ಪುನೀತ್ ರಾಜ್ಕುಮಾರ್ ಅಭಿನಯಿಸಿರುವ ಗಂಧದ ಗುಡಿ ಸಿನಿಮಾ ಅಕ್ಟೋಬರ್ 28ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. 29ರಂದು ಅಪ್ಪು ಅಗಲಿ ಒಂದು ವರ್ಷ ಕಳೆದಿದೆ, ವಿಶ್ವಾದ್ಯಂತ ಅಪ್ಪು ಪುಣ್ಯಸ್ಮರಣೆ ಮಾಡಿ ಅನ್ನದಾನ, ನೇತ್ರದಾನ ಮತ್ತು ರಕ್ತ ದಾನ ಮಾಡಿದ್ದಾರೆ.