ಭಾವನಾ ಬೆಳಗೆರೆ ಅವರು ಖ್ಯಾತ ಬರಹಗಾರ, ಹಾಯ್ ಬೆಂಗಳೂರು ಸಂಸ್ಥಾಪಕ ರವಿ ಬೆಳಗೆರೆ ಅವರ ಮಗಳು. ಖ್ಯಾತ ನಟ ಶ್ರೀನಗರ ಕಿಟ್ಟಿ ಅವರ ಪತ್ನಿ. ಇವರು ಸಹ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವವರು. ತಂದೆ ತೀರಿಹೋದ ನಂತರ ಹಾಯ್ ಬೆಂಗಳೂರು ಇವರ ಅಸ್ತಿತ್ವದಲ್ಲಿದೆ, ಇವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಇಂಥ ಭಾವನಾ ಬೆಳಗೆರೆ ಅವರು ಇತ್ತೀಚೆಗೆ ಮಾಡಿರುವ ಫೇಸ್ ಬುಕ್ ಪೋಸ್ಟ್ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ತಾವು ಸಿಗರೇಟ್ ಬಿಡುವುದಕ್ಕೆ ಕಷ್ಟ ಪಡುತ್ತಿರುವುದಾಗಿಯು ಹೇಳಿಕೊಂಡಿದ್ದಾರೆ. ಆದರೆ ತಕ್ಷಣವೇ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಹೌದು, ಭಾವನಾ ಬೆಳಗೆರೆ ಅವರು ಸಿಕ್ಕಾಪಟ್ಟೆ ಆಕ್ಟಿವ್, ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಾಯ್ ಬೆಂಗಳೂರು ಬಗ್ಗೆ ಮಾಹಿತಿ, ತಮ್ಮ ಬರಹದ ಬಗ್ಗೆ, ಕುಟುಂಬದ ಬಗ್ಗೆ ಹಾಗೂ ಇನ್ನು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ನಿನ್ನೆ ರಾತ್ರಿ ಸಹ ಅದೇ ರೀತಿ ಗಂಡನ ಬಗ್ಗೆ ಒಂದು ಪೋಸ್ಟ್ ಮಾಡಿದ್ದರು, ಜೊತೆಗೆ ತಾವು ಸಿಗರೇಟ್ ಬಿಡುವುದಕ್ಕೆ ನಾನಾ ಶ್ರಮ ಪಡುತ್ತಿರುವುದಾಗಿಯೂ ಹೇಳಿಕೊಂಡಿದ್ದರು, ಆದರೆ ಆ ಪೋಸ್ಟ್ ನಲ್ಲಿದ್ದ ಬರಹದಲ್ಲಿ ಕೆಲವು ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದ ಕಾರಣ ಡಿಲೀಟ್ ಮಾಡಿದ್ದಾರೆ.

“ಪ್ರೀತಿ ಅಮರ ಮಧುರ ಅಂದವನು ಕೆಲದಲ್ಲಿ busy, ಒಂದು ಬನೀನ್ ಹಾಕೊಂಡು ನಿಮ್ಮ ಪ್ರೀತಿಗೆ ಬೇಡುತ್ತಿದ್ದಾನೆ, ಅವನಿಗೆ ಹಂಗಿಲ್ಲ, ಆಹಾರವತು ದೂತದ ಮಾತು, ರವಿ ಬೆಳಗೆರೆಯಾಗಿ ಸನ್ಮಾನ ಅವಮಾನ ಬೇಕಷ್ಟು ಆಗಿದೆ, ಆಗುತ್ತಲೇ ಇರುತ್ತದೆ ಪ್ರೀತಿಯ ಕೋರಿಕೆ ನಾನು ಒಬ್ಬ ತಾಯಿಯ ಮಗಳು,, ಜೊತೆಗೆ ನಾನೇ ತಾಯಿ.. ಹೌದು ನಾನು ಸಿಗರೇಟು ಸೇಡುತ್ತೇನೆ, ಬಿಡಲು ನಾನಾ ಶ್ರಮ ಪಡುತ್ತಿದ್ದೇನ,, ಅದು ಚಟ ಮಾತ್ರ ನನ್ನ ಜೀವನದ ಸರ್ಟಿಫಿಕೇಟ್ ಅಲ್ಲ ನಿಮ್ಮ ಭಾವನಾ ಬೆಳಗೆರೆ..” ಎಂದು ಭಾವನಾ ಅವರು ಬರೆದುಕೊಂಡಿದ್ದರು. ಹಾಗೆಯೇ ಗಂಡನ ಜೊತೆಗೆ ಕೆಲವು ಫೋಟೋಸ್ ಕೂಡ ಶೇರ್ ಮಾಡಿಕೊಂಡಿದ್ದರು. ಆದರೆ ಈ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಮೊಬೈಲ್ ನಲ್ಲಿ ಟೈಪ್ ಮಾಡುವಾಗ ತಮ್ಮ ಬರಹದಲ್ಲಿ ಆದ ತಪ್ಪಿನ ಬಗ್ಗೆ ವಿವರಿಸಿ ಮತ್ತೊಂದು ಪೋಸ್ಟ್ ಸಹ ಮಾಡಿದ್ದಾರೆ. “ಹಾಳಾದ್ದು ಈ ಬರಿ ಬೇಕಾದರೆ ಅಷ್ಟಾಗಿ ತಪ್ಪುಗಳಾಗಲ್ಲ. ಆದರೆ ಟೈಪಿಸಬೇಕಾದರೆ, ಅದರಲ್ಲೂ ಈ ಮೊಬೈಲ್ನಲ್ಲಿ ಟೈಪಿಸಬೇಕಾದರೆ ಅದೆಷ್ಟು ತಪ್ಪುಗಳು? Type ಮಾಡಬೇಕಾದರೆ ತಪ್ಪುಗಳಾಗೋದು ಸಹಜ. ಇಷ್ಟಕ್ಕೂ ನಾನು ಅಕ್ಷರ ಕಲಿತಿದ್ದೇ ಅಪ್ಪನಿಂದ. ಅಫ್ಕೊರ್ಸ್ ಅವರು ಅಕ್ಷರ ಬ್ರಹ್ಮನೆ. ನಾನು ಮಾಡಿದ ಟೈಪಿಂಗ್ನಲ್ಲಿ ತಪ್ಪುಗಳನ್ನು ತೋರಿಸಿಕೊಟ್ಟ ಎಲ್ಲಾ ಓದುಗ ದೊರೆಗಳಿಗೂ ನನ್ನ ಪ್ರೀತಿಯ ನಮಸ್ಕಾರ. ಮುಂದೆಯೂ ನನ್ನಿಂದ ತಪ್ಪುಗಳಾದಾಗ ಇದೆ ರೀತಿ ತಿದ್ದಿ. ಹಾಗೆ ನನ್ನ ತಪ್ಪು ತಿದ್ದಲು ಬರಬೇಕಾದರೆ ಒಂದು ಪ್ಯಾಕ್ ಸಿಗರೇಟ್ ತನ್ನಿ..
ಜೊತೆಗೊಂದು ಬೆಂಕಿ ಪೊಟ್ಟಣ ತರೋದು ಮರಿ ಬೇಡಿ. ಅಂದ ಹಾಗೆ ಮೇಲಿನ ಚಿತ್ರಗಳು ಪ್ರತಿ ಸಂಚಿಕೆಗೆ ನಾನೇ ಬರೆದು ಕೊಡುವ ಕೈ ಬರಹ.. ಇದು ಹೇಗಿದೆ ನೋಡಿ ಹೇಳಿ…” ಎಂದು ಬರೆಯುವುದರ ಜೊತೆಗೆ ತಮ್ಮ ಬರಹದಲ್ಲಿ ಇರುವ ಲೇಖನಗಳನ್ನು ಹಂಚಿಕೊಂಡಿದ್ದಾರೆ. ಭಾವನಾ ಅವರ ಈ ಪೋಸ್ಟ್ ಗೆ ಕೆಲವರು ಪಾಸಿಟಿವ್ ಆಗಿ ಕಾಮೆಂಟ್ ಬರೆಯುತ್ತಿದ್ದರೆ, ಇನ್ನು ಕೆಲವರು ಬಯ್ಯುತ್ತಿದ್ದಾರೆ. ತಂದೆಯಂತೆಯೇ ಮಗಳು ಎಂದು ಹೇಳುವವರಿದ್ದಾರೆ. ಒಟ್ಟಿನಲ್ಲಿ ಭಾವನಾ ಬೆಳಗೆರೆ ಅವರು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುವುದಂತೂ ನಿಜ. ಹಾಯ್ ಬೆಂಗಳೂರಿಗೆ ಇನ್ನಷ್ಟು ಜನಪ್ರಿಯತೆ ಸಿಗುತ್ತಿದೆ.