ಬಿಗ್ ಬಾಸ್ ಕನ್ನಡ 11ರಲ್ಲಿ ಕಳೆದ ಭಾನುವಾರ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿರುವುದು ಹಂಸ ಅವರು. ಬೆಣ್ಣೆ ಶಾಂತಮ್ಮ ಎಂದೇ ಇವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಹಂಸ ಅವರು ತುಂಬಾ ದಿವಸ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎನ್ನುವುದು ಹಲವರ ಪ್ರಿಡಿಕ್ಷನ್ ಆಗಿತ್ತು, ಆದರೆ ಅದೆಲ್ಲವು ಈಗ ಸುಳ್ಳಾಗಿದೆ. ಹಂಸ ಅವರು ಈ ವಾರ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಹಂಸ ಅವರು ಬಿಗ್ ಬಾಸ್ ನಲ್ಲಿ ಇದ್ದಾಗ ಅವರು ಹೆಚ್ಚು ವೈರಲ್ ಆಗಿದ್ದು ಲಾಯರ್ ಜಗದೀಶ್ ಅವರ ಜೊತೆಗಿನ ಸ್ನೇಹ ಹಾಗೂ ಲವ್ ಸ್ಟೋರಿ ಇಂದ ಎಂದರು ತಪ್ಪಲ್ಲ. ಜಗದೀಶ್ ಅವರು ಹಂಸ ಅವರೊಡನೆ ತಮಾಷೆ ಮಾಡುತ್ತಾ, ಫ್ಲರ್ಟ್ ಮಾಡುತ್ತಾ ಇದ್ದರು, ಹಂಸ ಅವರು ಕೂಡ ಜಗದೀಶ್ ಅವರೊಡನೆ ಅಷ್ಟೇ ಸಲುಗೆಯಿಂದ ಇದ್ದರು. ಆದರೆ ಒಂದು ಜಗಳದಿಂದ ಜಗದೀಶ್ ಅವರು ಎಲಿಮಿನೇಟ್ ಆಗಿ ಹೊರಬರಬೇಕಾಯಿತು. ಆ ವಾರ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರು ಹಂಸ ಅವರಿಗೆ ಹಾಗೂ ಇನ್ನು ಕೆಲವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು.

ಆ ವೀಕೆಂಡ್ ಎಪಿಸೋಡ್ ನಲ್ಲಿ ಹಂಸ ಅವರು ತಾವು ಜಗದೀಶ್ ಅವರೊಡನೆ ಫೇಕ್ ಆಗಿ ಇದ್ದುದಾಗಿ ಹೇಳಿದರು, ಅವರಿಂದ ಕೆಲಸ ಮಾಡಿಸೋಕೊಳ್ಳುವುದಕ್ಕಾಗಿ ಫೇಕ್ ಆಗಿ ರೋಮ್ಯಾನ್ಸ್ ಮಾಡಿದ್ದಾಗಿ ಸುದೀಪ್ ಅವರೊಡನೆ ಹೇಳಿದರು. ಇದಕ್ಕೆ ಸುದೀಪ್ ಅವರು ಕೂಡ ಸರಿಯಾಗಿ ಉತ್ತರ ಕೊಟ್ಟರು. ಇದೀಗ ಹಂಸ ಅವರ ಈ ಹೇಳಿಕೆ ಬಗ್ಗೆ ಜಗದೀಶ್ ಅವರು ರಿಯಾಕ್ಟ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿರುವ ಜಗದೀಶ್ ಅವರು ಹಂಸ ಅವರ ಜೊತೆ ಕೂತು ಚರ್ಚೆ ಮಾಡೋಕೆ ತಮಗೆ ಇಷ್ಟವಿಲ್ಲ ಎಂದಿದ್ದಾರೆ.
ಒಂದು ಚಾನೆಲ್ ನವರು ಇವರಿಬ್ಬರನ್ನು ಸಂದರ್ಶನಕ್ಕೆ ಕರೆದಿದ್ದು, ತಮಗೆ ಬರುವುದಕ್ಕೆ ಇಷ್ಟವಿಲ್ಲ ಎಂದಿದ್ದಾರೆ ಜಗದೀಶ್. ಹಾಗೆಯೇ ಸುದೀಪ್ ಅವರು ಹೇಳಿದ ಮಾತನ್ನು ನೆನಪು ಮಾಡಿಕೊಂಡಿದ್ದಾರೆ. ಹಂಸ ಅವರು ನಾಟಕ ಮಾಡಿರಬಹುದು ಆದರೆ ನಾವು ಕ್ಯಾರೆಕ್ಟರ್ ನಲ್ಲಿ ಜಾಸ್ತಿ ಇನ್ವಾಲ್ವ್ ಆಗಿ ಹೆಚ್ಚು ಮನರಂಜನೆ ಕೊಟ್ವಿ ಎಂದಿದ್ದಾರೆ ಜಗದೀಶ್. ಹಂಸ ಅವರು ಇನ್ನು ತಮ್ಮ ಪಾಲಿಗೆ ಸತ್ತ ಹಾಗೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಹಾಗೆಯೇ ತಮಗೆ ಕಾಲೇಜ್ ಡೇಸ್ ಇಂದಲೂ ಬಹಳಷ್ಟು ಜನ ಫೀಮೇಲ್ ಫ್ರೆಂಡ್ಸ್ ಇರುವುದಾಗಿ ಹೇಳಿದ್ದಾರೆ.
ಹಂಸ ಅವರೇ ಕೇಳಿ, ನಿಮಗೆ ಹೇಳ್ತಾ ಇರೋದು. ನನಗೆ ಫೀಮೇಲ್ ಫ್ರೆಂಡ್ಸ್ ಇಲ್ಲ ಅಂದುಕೊಂಡಿದ್ದೀರಾ, ತುಂಬಾ ಜನ ಇದ್ದಾರೆ. ಅವರೆಲ್ಲರ ಜೊತೆಗೆ ನಾನು ಒಬ್ಬ ಒಳ್ಳೆಯ ಫ್ರೆಂಡ್ ಆಗಿದ್ದೀನಿ, ನಾನು ಪ್ಲೇ ಬಾಯ್ ಅಲ್ಲ ಎಂದಿದ್ದಾರೆ ಜಗ್ಗು. ಹಾಗೆಯೇ ಈ ವಿಡಿಯೋದಲ್ಲಿ ತಮ್ಮ ಫಸ್ಟ್ ಲವ್ ಸ್ಟೋರಿ ಬಗ್ಗೆ ಕೂಡ ಮಾತನಾಡಿ, ಆ ಪ್ರೀತಿಯನ್ನ ಕಾರಣಾಂತರಗಳಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಲಿದೆ..