ನಟಿ ಛಾಯಾ ಸಿಂಗ್ ಅವರ ಬಗ್ಗೆ ವಿಶೇಷವಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಇವರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿ. ಆದರೆ ಛಾಯಾ ಸಿಂಗ್ ಅವರು ಹೆಚ್ಚು ಯಶಸ್ಸು ಪಡೆದು ಗುರುತಿಸಿಕೊಂಡಿದ್ದು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಎಂದರೆ ತಪ್ಪಲ್ಲ. ಛಾಯಾ ಸಿಂಗ್ ಅವರ ಕುಟುಂಬದ ಮೂಲ ಉತ್ತರ ಭಾರತದವರೆ ಆದರೂ ಇವರ ಇಡೀ ಕುಟುಂಬ ಇರೋದು ಬೆಂಗಳೂರಿನಲ್ಲಿ. ಹಾಗೆಯೇ ಇವರು ಹುಟ್ಟಿ ಬೆಳೆದಿರುವುದು ಬೆಂಗಳೂರಿನಲ್ಲಿ, ಹಾಗಾಗಿ ಅಪ್ಪಟ ಕನ್ನಡತಿ ಎಂದು ಹೇಳಿದರು ಸಹ ತಪ್ಪಲ್ಲ. ಇದೀಗ ಇವರು ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಟಿ ಛಾಯಾ ಸಿಂಗ್ ಅವರ ತಾಯಿ ಮನೆಯ ಇಡೀ ಕುಟುಂಬ ಇರೋದು ಬೆಂಗಳೂರಿನಲ್ಲೇ, ಛಾಯಾ ಸಿಂಗ್ ಅವರು ಮೊದಲ ಬಾರಿಗೆ ನಟಿಸಿದ್ದು ಕೂಡ ಕನ್ನಡದ ಮುನ್ನುಡಿ ಸಿನಿಮಾದಲ್ಲಿ, ಇದು ತೆರೆಕಂಡಿದ್ದು 2000 ಇಸವಿಯಲ್ಲಿ, ಈ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸಹ ಸಿಕ್ಕಿತು. ಆರಂಭಿಕ ಕೆಲವು ವರ್ಷಗಳಲ್ಲಿ ಛಾಯಾ ಸಿಂಗ್ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿದರು, ಬಳಿಕ ಇವರಿಗೆ ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿ, ಅಲ್ಲಿಗೆ ಹೋದರು. ತೆಲುಗು ಹಾಗೂ ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ, ಸೂಪರ್ ಹಿಟ್ ಕಲಾವಿದರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.
ಇಲ್ಲಿಯವರೆಗೂ ಸುಮಾರು 38 ಸಿನಿಮಾಗಳಲ್ಲಿ ಹಾಗೂ ಹಲವು ಧಾರಾವಾಹಿಗಳಲ್ಲಿ ಛಾಯಾ ಸಿಂಗ್ ನಟಿಸಿದ್ದಾರೆ. ಇತ್ತೀಚೆಗೆ ಇವರು ಶಿವಣ್ಣನ ತಂಗಿಯ ಪಾತ್ರದಲ್ಲಿ ಮಫ್ತಿ ಸಿನಿಮಾದಲ್ಲಿ ನಟಿಸಿದರು, ಇದೀಗ ಭೈರತಿ ರಣಗಲ್ ಸಿನಿಮಾದಲ್ಲಿ ಸಹ ಛಾಯಾ ಸಿಂಗ್ ನಟಿಸಿದ್ದು, ಮೊನ್ನೆಯಷ್ಟೇ ರಣಗಲ್ ಸಿನಿಮಾ ತೆರೆಕಂಡು, ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಯಶಸ್ಸಿನ ಜೊತೆಗೆ ಅಮೃತಧಾರೆ ಧಾರಾವಾಹಿ ಸಹ ಇವರಿಗೆ ಒಳ್ಳೆಯ ಜನಪ್ರಿಯತೆ ಮತ್ತು ಜನರ ಪ್ರೀತಿ ತಂದುಕೊಡುತ್ತಿದೆ. ಈ ಧಾರಾವಾಹಿಯ ಭೂಮಿಕಾ ಪಾತ್ರ ಜನರಿಗೆ ತುಂಬಾ ಹತ್ತಿರವಾಗಿದ್ದು, ಛಾಯಾ ಸಿಂಗ್ ಅವರಿಗೆ ಇದು ದೊಡ್ಡ ಯಶಸ್ಸು.
ಛಾಯಾ ಸಿಂಗ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಇವರ ತಂದೆ ತಾಯಿ ಬೆಂಗಳೂರಿನಲ್ಲೇ ಇರೋದು, ಆದರೆ ಇವರ ಗಂಡ ಕೃಷ್ಣ ತಮಿಳಿನ ನಟ. ಇವರಿಬ್ಬರು ಆನಂದಪುರತ್ತು ವೀಡು ಸಿನಿಮಾ ಚಿತ್ರೀಕರಣದ ವೇಳೆ ಭೇಟಿಯಾದರು. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು, ಬಳಿಕ ಕೃಷ್ಣಾ ಅವರು ಛಾಯಾ ಅವರ ತಾಯಿಯ ಬಳಿ ಬಂದು, ನಿಮ್ಮ ಮಗಳು ನನಗೆ ತುಂಬಾ ಇಷ್ಟ, ಮದುವೆ ಮಾಡಿಕೊಳ್ಳೋಕೆ ಇಷ್ಟಪಡ್ತೀನಿ ಎಂದು ಹೇಳಿದರಂತೆ, ಛಾಯಾ ಸಿಂಗ್ ಅವರ ತಾಯಿ ಕೂಡ ಒಪ್ಪಿಕೊಂಡರಂತೆ. ಏನಾಗುತ್ತಿದೆ ಎಂದು ಕೂಡ ಛಾಯಾ ಸಿಂಗ್ ಅವರಿಗೆ ಗೊತ್ತಾಗಲಿಲ್ಲವಂತೆ, ಈ ರೀತಿ ನಡೆಯಿತು ಈ ಜೋಡಿಯ ಮದುವೆ..
ಈಗ ಇವರಿಬ್ಬರು ಇರೋದು ಬೇರೆ ಬೇರೆ ಊರುಗಳಲ್ಲಿ, ಅವರು ಚೆನ್ನೈ, ಇವರು ಬೆಂಗಳೂರು. ಇಬ್ಬರೂ ಬಿಡುವಿಲ್ಲದೇ ಇರುವ ಕಾರಣ ಭೇಟಿ ಮಾಡೋಕೆ ಆಗ್ತಿಲ್ಲವಂತೆ. ತಿಂಗಳಿಗೆ 10 ದಿವಸ ಕೂಡ ಜೊತೆಯಾಗಿ ಇರೋದು ಕಷ್ಟ ಆಗುತ್ತಿದೆಯಂತೆ. ಬೇರೆ ಸಮಯದಲ್ಲಿ ಇವರಿಬ್ಬರು ಫೋನ್ ಕಾಲ್, ವಿಡಿಯೋ ಕಾಲ್ ಗಳಲ್ಲೇ ಸಮಯ ಕಳೆಯುತ್ತಿದ್ದಾರಂತೆ. ಗಂಡನನ್ನು ಬಿಟ್ಟು ಇರುವುದು ಸ್ವಲ್ಪ ಕಷ್ಟವೇ ಎಂದು ಹೇಳಿಕೊಂಡಿದ್ದಾರೆ ನಟಿ ಛಾಯಾ ಸಿಂಗ್. ಇಬ್ಬರಿಗೂ ಬಿಡುವು ಸಿಗುತ್ತಿದ್ದ ಹಾಗೆ ವರ್ಲ್ಡ್ ಟೂರ್ ಮಾಡೋ ಪ್ಲಾನ್ ಸಹ ಹೊಂದಿದ್ದಾರೆ. ಈ ಜೋಡಿ ಯಾವಾಗಲೂ ಚೆನ್ನಾಗಿರಲಿ ಎನ್ನುವುದು ಇವರ ಅಭಿಮಾನಿಗಳ ಆಸೆ..