ನಮ್ಮ ಚಂದನವನದ ಹೆಮ್ಮೆಯ ಯುವರತ್ನ ಕಣ್ಮರೆಯಾಗಿ ವರ್ಷದ ಹೊಸ್ತಿಲು ಮುಟ್ಟಿದೆ. ಆದರೆ ಆ ಕಟುಸತ್ಯವನ್ನು ನಮ್ಮಿಂದ ಅರಗಿಸಿಕೊಳಲ್ಲೂ ಆಗುತ್ತಿಲ್ಲ ಒಪ್ಪಿಕೊಳ್ಳಲು ಆಗುತ್ತಿಲ್ಲ.ಈ ವಿಚಾರವನ್ನು ನಾವು ಎಂದಿಗೂ ಒಪ್ಪಿಕೊಳಲ್ಲೂ ಅಗುವುದು ಇಲ್ಲ , ನಮ್ಮ ಅಪ್ಪು ಇಂದಿಗೂ ಎಂದಿಗೂ ಅಜರಾಮರ.ಇವರ ಅಭಿಮಾನಿಗಳು ಈಗ ತಾವು ಮಾಡುವ ಸಮಾಜಸೇವೆಯಲ್ಲಿ ನಮ್ಮ ಅಪ್ಪುವಿನನ್ನು ಕಾಣುತ್ತಿದ್ದಾರೆ. ಇನ್ನು ಅಪ್ಪು ಕುಟುಂಬದವರ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಇವರ ಸದ್ಗುಣತೆಯನ್ನು ಮೆಚ್ಚಿದ ನಾವೇ ಇಂದಿಗೂ ಈ ಸತ್ಯವನ್ನು ಓಪಲ್ಲು ಸಾಧ್ಯವಾಗುತಿಲ್ಲ ಇನ್ನು ಇವರ ಕುಟುಂಬದವರು ಇವರನ್ನು ಹತ್ತಿರ ಇದ್ದು ಸಮಯ ಕಳೆದು ಇವರೊಂದಿಗೆ ಜೊತೆಗೂಡಿ ಬದುಕುತ್ತಿದ್ದವರಿಗೆ
ಇವರ ಗೈರನ್ನು ಹೇಗೆ ಅನುಸರಿಸಿ ಜೀವನ ನಡೆಸಲು ಸಾಧ್ಯ ಎನ್ನುವಂತಾಗಿದೆ.

ಇವರ ಅಭಿಮಾನಿಗಳು ಎಂದಿಗೂ ಈ ನಟನನ್ನು ಮರೆಯಲು ಸಾಧ್ಯವಿಲ್ಲ.ಏಕೆಂದರೆ ಈಗ ಅವರು ನಟನಾಗಿ ಉಳಿದಿಲ್ಲ ಎಲ್ಲರಿಗೂ ದೇವರಾಗಿಬಿಟ್ಟಿದ್ದಾರೆ. ಇವರು ಹೋದ ದಿನದಿಂದಲೂ ನಾವು ಹಲವಾರು ಬದಲಾವಣೆಗಳನ್ನು ನೋಡುತ್ತಾ ಬರುತ್ತಿದ್ದೇವೆ.ಎಲ್ಲೆಲ್ಲೂ ಇವರ ಭಾವಚಿತ್ರ ಯಾರ ಮನೆಯ ಶುಭ ಸಮಾರಂಭಗಳ ಆಹ್ವಾನ ಪತ್ರಿಕೆಗಳಲ್ಲಿ ಇವರ ಭಾವಚಿತ್ರವನ್ನು ನಾವು ನೀಡುತ್ತೀದ್ದೇವೆ. ಇವರ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಹಾರೈಸುತ್ತಿರುವುದನ್ನು ನಾವು ನೋಡಿದ್ದೇವೆ.
ಈತನನ್ನು ಯಾವ ಕಡೆಯಿಂದಲೂ ಬೆರಳು ಮಾಡುಚುವಂತಿಲ್ಲ.ನಟನೆ ,ಹಾಡು ,ಡಾನ್ಸ್ ಎಲ್ಲದರಲ್ಲೂ ಎತ್ತಿದ ಕೈ ಈತನಿಗೆ ಇಡೀ ಪ್ರಪಂಚವೇ ದುರುಬಿ ಹಾಕಿ ಹುಡುಕಿದರು ಇವರ ಸರಿಸಮಾನವಾಗಿ ಯಾರೊಬ್ಬರೂ ಕೂಡ ಸಿಗುವುದಿಲ್ಲ.ಈ ಎಲ್ಲಾ ಕಲೆಗಿಂತ ಇವರ ವ್ಯಕ್ತಿತ್ವ ಯಾರೊಬ್ಬರಲ್ಲೂ ಇರಲು ಸಾಧ್ಯವೇ ಇಲ್ಲ ಎಂದರೇ ಅದು ತಪ್ಪಾಗಲಾರದು.ಇವರು ವ್ಯಕ್ತಿತ್ವ ಎಂಥದ್ದು ಎಂದರೆ ಯಾರೊಬ್ಬರೂ ಇವರ ಅರಸಿ ಬಂದರೆ ಯಾರೊಬ್ಬರನ್ನು ಖಾಲಿ ಕೈಯಲ್ಲಿ ಕಳೆಸಿದವರೇ ಇಲ್ಲಾ. ಎಷ್ಟೆಲ್ಲಾ ಸತ್ಕಾರ್ಯ ಮಾಡಿದ ಈ ಒಳ್ಳೆಯ ಮನುಷ್ಯನಿಗೆ ಅಲ್ಪ ಅಯಸ್ಸು ಎಂಬುದು ಎಷ್ಟು ಬೇಸರದ ವಿಚಾರ ಅಲ್ಲವೇ.
ಇನ್ನು ಇವರ ಅಭಿಮಾನಿಗಳು ಇವರ ಕಡೆಯ ಸಿನಿಮಾ ಜೇಮ್ಸ್ ಚಿತ್ರದಲ್ಲು ಕೊಡ ಅಪ್ಪು ಅವರನ್ನು ಗ್ರಾಫಿಕ್ ಮುಕಾಂತರ ತೋರಿಸಿದ್ದ ಕಾರಣ ಅಭಿಮಾನಿಗಳು ಬಹಳ ಬೇಸರವನ್ನು ವ್ಯಕ್ತಪಡಿಸಿದ್ದರು.ಇನ್ನು ಅಪ್ಪು ಅವರ ಕನಸಿನ ಕಿರು ಚಿತ್ರವಾದ ಗಂಧದ ಗುಡಿ ಸಿನಿಮಾ ವರ್ಲ್ಡ್ ವೈಡ್ ದಾಖಲೆಗಳನ್ನು ಮುರಿದು ಎಲ್ಲರ ಕಣ್ಣಿನಲ್ಲಿ ನೀರು ತುಂಬಿಸಿತು.ಇನ್ನು ಈ ಸಿನಿಮಾ ದಲ್ಲಿ ಅಪ್ಪು ಅವರು ಪವರ್ ಸ್ಟಾರ್ ಆಗಿ ಕಾಣಿಸಿಕೊಳ್ಳದೆ ಯಾವ ಬಣ್ಣವೂ ಹಚ್ಚದೆ ತನನ್ನೇ ತಾನು ತೆರೆ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದರು.ನವಂಬರ್ ತಿಂಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಇಂದಿಗೂ ಚಿತ್ರ ಮಂದಿರಗಳಲ್ಲಿ ಸದ್ದು ಮಾಡುತ್ತಿದೆ.
ಇನ್ನು ಈ ಕಿರು ಚಿತ್ರದಲ್ಲಿ ಅಪ್ಪು ಕಾಡು ಮೇಡು ಅಲೆದು ವನ್ಯ ಜೀವಿಗಳ ಹಾಗೂ ಅದರ ವನ್ಯ ಆಸ್ತಿಯ ಸರಾಂಶವನ್ನು ತಿಳಿಸಿಕೊಟ್ಟರು.ಈ ಚಿತ್ರದಲ್ಲಿ ಅಪ್ಪು ಒಂದು ಪುಟ್ಟ ಮಗುವಿನ ನಂತೆ ಕಾಣುತ್ತಾರೆ ಎಂದರೆ ತಪ್ಪಾಗಲಾರದು. ಈಗ ಸಾಕಷ್ಟು ದಾಖಲೆಗಳನ್ನು ಬರೆದ ಈ ಚಿತ್ರದ ಸಕ್ಸಸ್ ನನ್ನು ಆಚರಿಸಲು ಅಶ್ವಿನಿ ಅವರು ಕ್ವಿನ್ಸ್ ರೋಡ್ನಲ್ಲಿರುವ ಖಾಸಗಿ ಹೋಟೆಲ್ನಲ್ಲಿ ತಂಡ ಕೇಕ್ ಕಟ್ ಮಾಡಿ ಖುಷಿಪಟ್ಟಿದೆ. ನಿರ್ದೇಶಕ ಸಂತೋಷ್ ಆನಂದ್ರಾಮ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವರಾಜ್ಕುಮಾರ್ ಸಾಥ್ ಕೊಟ್ಟಿದ್ದಾರೆ. ಸಕ್ಸಸ್ ಸೆಲೆಬ್ರೇಷನ್ಗೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.