ಕ್ಯಾನ್ಸರ್ ರೋಗಗಳು ಒಂದು ರೀತಿಯ ಭಯ ಬೀಳಿಸುವಂತಹ ರೋಗ ಅನ್ನಬಹುದು. ಅಂತಹ ಸಮಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳು. ಈ ಕ್ಯಾನ್ಸರ್ ಅಂದರೆ ಏನು ಅಂತ ತಿಳಿದಾಗ ಸತ್ತ ಜೀವಕೋಶಗಳ ಸಮೂಹ ಅನ್ನಬಹುದು. ಅಂದರೆ ನಮ್ಮ ದೇಹದಲ್ಲಿ ಜೀವಕೋಶಗಳು ಸಾವನ್ನಪ್ಪುತ್ತಾ ಹೋದಷ್ಟು ನಮ್ಮ ದೇಹದಲ್ಲಿ ಕಲ್ಮಶಗಳು ಜಾಸ್ತಿ ಆಗುತ್ತದೆ. ಸೋಂಕುಗಳು ಹೆಚ್ಚಾಗುತ್ತದೆ. ಇದು ಅನಾರೋಗ್ಯಗಳಿಗೆ ಕಾರಣವಾಗುತ್ತದೆ ಇದನ್ನು ಕ್ಯಾನ್ಸರ್ ಅನ್ನುತ್ತೇವೆ. ಜೀವಕೋಶದ ಸಾವಿಗೆ ಏನು ಕಾರಣ ಅಂದರೆ ಅದೇ ವ್ಯಕ್ತಿಯಾಗಿರುತ್ತಾರೆ. ಹಾಗಾಗಿ ಆ ಕಾಯಿಲೆಗಳನ್ನು ಸರಿಯಾಗಿಸಲು ನಮ್ಮ ಆಹಾರ ಪದ್ಧತಿಗಳು ಕಾರಣವಾಗುತ್ತದೆ.
ಆಹಾರ ಪದ್ಧತಿಗಳು ಸರಿಯಾಗದೆ ತೊಂದರೆಗಳು ಬರುತ್ತದೆ. ಪೌಷ್ಟಿಕಾಂಶತೆ ಆಹಾರಗಳನ್ನು ಸೇವಿಸುವುದು, ಒಳ್ಳೆಯದು ಇದರಿಂದ ಜೀವಕೋಶಗಳು ಉಳಿಯುತ್ತದೆ. ಹಾಗೆ ಸೇವಿಸುವಂತಹ ಆಹಾರಗಳಲ್ಲಿ ಶುದ್ಧತೆಗಳಿಲ್ಲ ಪೊಪೌಸ್ಟಿಕಾಂಶಗಳಿಲ್ಲ ಅಂದಾಗ ಸೇವಿಸಬಾರದು. ಮಾಂಸ ಆಹಾರಗಳು ,ಪ್ಯಾಕ್ ಆಗಿರುವ ಆಹಾರಗಳು ಇವುಗಳೆಲ್ಲ ದೇಹಕ್ಕೆ ಒಂದು ರೀತಿಯ ಕೆಟ್ಟ ಪರಿಣಾಮ ಬೀರುವಲ್ಲಿ ದಾರಿ ಮಾಡಿಕೊಳ್ಳುತ್ತದೆ. ಪ್ರತಿನಿತ್ಯ ಹುಟ್ಟ ಬೇಕಾದ ಜೀವಕೋಶಗಳು ಸಾಯುತ್ತದೆ. ಇವೆಲ್ಲ ಕ್ಯಾನ್ಸರ್ ಗೆ ಮೂಲ ಕಾರಣ ಎನ್ನಬಹುದು.
ಆಹಾರಗಳಲ್ಲಿ ತರಕಾರಿಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ಒಳ್ಳೆಯದು. ದಿನ ಒಂದೊಂದು ಹಣ್ಣು ಸೇವನೆ ಮಾಡುವುದು, ಹಾಲಿನ ಸೇವನೆ ಒಳ್ಳೆಯದು, ಆಗ ನೀರಿನ ಅಂಶವನ್ನು ದೇಹಕ್ಕೆ ಕೊಡುವಂತಹದ್ದು. ಇದು ದೇಹಶುದ್ದಿಗೆ ಮುಖ್ಯ ಕಾರಣವಾಗಿದೆ. ದುಶ್ಚಟಗಳಿಂದ ದೂರವಿರಿ, ಹೆಚ್ಚಿನ ಮಾಂಸಾಹಾರಗಳಿಂದ ದೂರವಿರಿ. ಮೈದಾ ಮತ್ತು ಗೋಧಿ ಪದಾರ್ಥಗಳಿಂದ ದೂರವಿರಿ ಇದರಿಂದ ಸಮಸ್ಯೆಗಳನ್ನು ತಡೆಗಟ್ಟಬಹುದು. ತುಳಸಿ ಕಷಾಯವನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಜೀವಕೋಶಕ್ಕೆ ಶಕ್ತಿಯನ್ನು ಕಂಡುಕೊಳ್ಳಬಹುದು.
ನೀರು, ತುಳಸಿ ಎಲೆಗಳು,ಅರಿಶಿನ ಇದನ್ನು ಸ್ವಲ್ಪ ಮಟ್ಟದಲ್ಲಿ ಸೇವಿಸುವುದರಿಂದ ಒಳ್ಳೆಯದು. ಬೆಳಗ್ಗೆ ಒಂದು ಲೋಟ ಕಷಾಯ ಸೇವನೆ ಒಳ್ಳೆಯದು ಒಂದು ಲೀಟರ್ ನೀರಿಗೆ ತುಳಸಿ ಎಲೆ ಒಂದು ನಾಲ್ಕು ಕಾಲು ಮೆಣಸು, ಶುದ್ಧ ಅರಿಶಿಣವನ್ನು, ರುಚಿಗೆ ಬೆಲ್ಲವನ್ನು ಹಾಕಿ ನಂತರ ಕುದಿಸಿದರೆ ಇದನ್ನು ಐದು ಜನ ಕುಡಿಯಬಹುದು. ಇದಲ್ಲದೆ ಉತ್ತಮ ಜೀವನ ಶೈಲಿಯಲ್ಲಿ ಯೋಗಾಭ್ಯಾಸ ಒಳ್ಳೆಯದು ಮತ್ತು ರಕ್ತ ಶುದ್ಧೀಕರಣಕ್ಕೆ ಚಿಕಿತ್ಸೆಗಳನ್ನು ತೆಗೆದುಕೊಳ್ಳಬಹುದು.