ಬಿಳಿ ಮಚ್ಚೆ ಸಮಸ್ಯೆ ಸಾಕಷ್ಟು ಜನರಲ್ಲಿ ಕಾಣಸಿಗುವ ಕಾಯಿಲೆಯಾಗಿದ್ದು, ಅನೇಕರು ಈ ಕಾಯಿಲೆಯಿಂದ ಬಳಲುತ್ತಿದ್ದು ಸರಿಯಾದ ಚಿಕಿತ್ಸೆ ಸಿಗದೇ ಮನೆಯಿಂದ ಹೊರಬರದೇ ನೋವು ಅನುಭವಿಸುತ್ತಿದ್ದಾರೆ. ಇನ್ನೂ ಬಿಳಿ ಮಚ್ಚೆ ಇರುವ ಅನೇಕ ಮಂದಿಯನ್ನು ಸಮಾಜದಲ್ಲಿ ಕೀಳಾಗಿ ನೋಡುತ್ತಾರೆ ಎನ್ನುವ ಆಪಾದನೆಯು ಇದೆ. ಹಾಗಾದ್ರೆ ಏನಿದು ಈ ಸಮಸ್ಯೆ, ಇದಕ್ಕೆ ಪರಿಹಾರ ಏನು ಎನ್ನುವ ಅನೇಕ ಪ್ರಶ್ನೆಗಳಿಗೆ ಇಂದು ನಾವು ಉತ್ತರವನ್ನು ನೀಡುತ್ತೇವೆ. ಈ ಸಮಸ್ಯೆಗೆ ನೀವು ಯಾವುದೇ ಆಧುನಿಕ ಚಿಕಿತ್ಸೆಯ ಮೊರೆ ಹೋಗಬೇಕಾಗಿಲ್ಲ ಮನೆಯಲ್ಲೇ ಕುಳಿತು ಮನೆ ಮದ್ದು ಮಾಡಿ ಸಹ ಗುಣಪಡಿಸಿಕೊಳ್ಳಬಹುದು.
ಸಾಮಾನ್ಯವಾಗಿ ಅನೇಕರಲ್ಲಿ ಕಾಣುವ ಸಮಸ್ಯೆ ಬಿಳಿ ಮಚ್ಚೆ ಅಥವಾ ತನ್ನೋ ಅನ್ನುವ ಸಮಸ್ಯೆ ಈ ಸಮಸ್ಯೆಯನ್ನು ಹೇಗೆ ದೂರ ಮಾಡಿಕೊಳ್ಳಬೇಕು. ಇದು ಸಾಮಾನ್ಯವಾಗಿ ದೂರ ಮಾಡಿಕೊಳ್ಳುವ ಸಮಸ್ಯೆನಾ? ಇದರಿಂದ ದೂರ ಆಗುವುದು ಹೇಗೆ ಎನ್ನುವುದರ ಬಗ್ಗೆ ಇಂದು ನಾವು ತಿಳಿಸಿಕೊಡುತ್ತೇವೆ. ಮನೆ ಮದ್ದುಗಳಿಂದ ಈ ರೋಗವನ್ನು ಗುಣ ಪಡಿಸಿಕೊಳ್ಳುವ ಬಗೆ ಹೇಗೆ ಎನ್ನುವುದನ್ನ ತಿಳಿದುಕೊಳ್ಳೋಣ. ಮುಖ್ಯವಾಗಿ ಈ ಸಮಸ್ಯೆ ಬರೋದು ಅಧಿಕ ಉಷ್ಣತೆ ಹಾಗೂ ಪಿತ್ತದೋಷದ ಸಮಸ್ಯೆಯಾಗಿರುತ್ತೆ.
ಉಷ್ಣತೆಯಿಂದ ತೀವ್ರ ಮಲಬದ್ಧತೆ ರಕ್ತದೋಷ ಪಿತ್ತದೋಷ. ಈ ಕಾರಣದಿಂದ ಚರ್ಮದ ಹಾರೈಕೆಯನ್ನ ಹಾಳುಮಾಡಿಕೊಳ್ಳಬೇಕಾಗುತ್ತೆ. ಒಂದು ವೇಳೆ ಈ ಸಮಸ್ಯೆ ನಿಮ್ಮನ್ನು ಕಾಡಿದರೇ ಅದನ್ನು ಕೂಡ ಸರಿಪಡಿಸಿಕೊಳ್ಳಬಹುದು. ಹಾಗೇ ಮನೆಯಲ್ಲಿ ಯಾವೆಲ್ಲ ಚಿಕಿತ್ಸೆ ಹಾಗೂ ಆಹಾರಗಳನ್ನ ಪಡೆದುಕೊಳ್ತಾ ಈ ಸಮಸ್ಯೆಯಿಂದ ನಿಧಾನವಾಗಿ ಹೊರಬರೋದು ಎನ್ನುವುದನ್ನ ತಿಳಿಯೋಣ.
ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟು ಆಗಾಗ ಕುಡಿಯುದರಿಂದ ಈ ಸಮಸ್ಯೆಯನ್ನ ದೂರ ಮಾಡಿಕೊಳ್ಳಬಹುದು. ಹಾಗೇ ಒಣ ದ್ರಾಕ್ಷಿಯನ್ನ ಸೇವನೆ ಮಾಡುವುದು ತುಂಬಾ ಸೂಕ್ತ. ರಾತ್ರಿ ಒಣದ್ರಾಕ್ಷಿಯನ್ನು ನೆನಸಿಟ್ಟು ಬೆಳಿಗ್ಗೆ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಯುಟಿಲಿಗೋ ಸಮಸ್ಯೆಯನ್ನ ಪರಿಹಾರವನ್ನ ಕಂಡು ಕೊಳ್ಳಬಹುದು. ಮೂಲಂಗಿ ಬೀಜವನ್ನು ಪುಡಿಮಾಡಿ ಇಟ್ಟುಕೊಂಡು ಅದನ್ನ ವಿನೆಗರ್ ಜೊತೆ ರಾತ್ರಿ ನೆನಸಿಟ್ಟು ಮರುದಿನ ಬೆಳಿಗ್ಗೆ ದೇಹಕ್ಕೆ ಹಚ್ಚಿಕೊಂಡು ನಂತರ ಮರುದಿನ ಬೆಳಿಗ್ಗೆ ಅದನ್ನ ಸ್ನಾನ ಮಾಡುವುದರಿಂದ ಚರ್ಮದಲ್ಲಿ ಆಗಿರುವಂತ ಕಲೆಗಳ ಸಮಸ್ಯೆಯಿಂದ ಗುಣ ಮುಖರಾಗಲು ಔಷಧಿಯಾಗಿ ಕೆಲಸ ಮಾಡುತ್ತೆ.
200 ಗ್ರಾಂ ಅರಶೀನದ ಕೊಂಬನ್ನು ತಗೆದುಕೊಂಡು 5 ರಿಂದ 6 ಲೀಟರ್ ನೀರಿನಲ್ಲಿ ಅದನ್ನ ನೆನೆಸಿಟ್ಟು ಬೆಳಿಗ್ಗೆ ಅದನ್ನ ಕಾಲು ಭಾಗಕ್ಕೆ ಬರುವವರೆಗೆ ಕುದಿಸಿ ನಂತರ ಅದನ್ನ ಸೋಸಿ ಅದಕ್ಕೆ ಸಾಸಿವೆ ಎಣ್ಣೆಯನ್ನ ಹಾಕಿ ಪ್ರತಿನಿತ್ಯ ದೇಹಕ್ಕೆ ಲೇಪಿಸಿಕೊಂಡು ಅರ್ಧ ತಾಸು ಎಳೆಯ ಬಿಸಿಲಿನಲ್ಲಿ ಕುಳಿತುಕೊಂಡು, ನಂತರ ಸ್ನಾನ ಮಾಡುವುದರಿಂದ ಬಿಳಿ ಮಚ್ಚೆ ಸಮಸ್ಯೆ ನಿವಾರಣೆ ಆಗುತ್ತದೆ. ಇದಿಷ್ಟು ಮಾಡುವುದರ ಜೊತೆ ಜೊತೆಗೆ ಯೋಗವನ ಬೆಟ್ಟದ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಬಹು ಬೇಗನೆ ಈ ಸಮಸ್ಯೆಯಿಂದ ಹೊರಬರುತ್ತಿರಿ.
ಬಿಳಿ ಮಚ್ಚೆ ಇರುವ ಜನರನ್ನ ಕೆಟ್ಟ ದೃಷ್ಟಿಯಲ್ಲಿ ನೋಡುವಂತ ವ್ಯಾದಿ ಇದಾಗಿದ್ದು, ಈ ಒಂದು ಸಮಸ್ಯೆಯಿಂದ ಸಂಪೂರ್ಣ ಹೊರಬರಲು ಚಿಕಿತ್ಸೆಯನ್ನ ಯೋಗವನ ಬೆಟ್ಟದ ಮುಖಾಂತರ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ನಿಮ್ಮ ತಪ್ಪುಗಳನ್ನ ಸರಿ ಪಡಿಸಿಕೊಂಡು ಬಹುಬೇಗ ಈ ಸಮಸ್ಯೆಯಿಂದ ದೂರವಾಗಲು ಸಹಕಾರಿಯಾಗಿದೆ. ಆಯುರ್ವೇದ ಚಿಕಿತ್ಸೆ ಪದ್ಧತಿ ಅನೇಕ ರೋಗಗಳಿಗೆ ಸಾಕಷ್ಟು ಬೇಗನೆ ಪರಿಹಾರವನ್ನ ನೀಡುವಲ್ಲಿ ಉಪಯುಕ್ತವಾಗಿದೆ. ಮನೆ ಮದ್ದನ್ನು ಉಪಯೋಗಿಸಿ ಹಲವಾರು ರೋಗಗಳಿಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.