ಬಿಡುಗಡೆಗೂ ಮುನ್ನ ಆದಿಪುರುಷ್ ಹವಾ ಜೋರಾಗಿತ್ತು. ಆದ್ರೆ ಥಿಯೇಟರ್ಗೆ ಬಂದು ಬಳಿಕ ಆ ಜೋಶ್ ಕಾಣಲಿಲ್ಲ.ಭಾರೀ ಪ್ರಚಾರದೊಂದಿಗೆ ಪ್ರೇಕ್ಷಕರ ಮುಂದೆ ಬಂದ ಆದಿಪುರುಷ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಬಾಲಿವುಡ್ ಚಿತ್ರ ಆದಿಪುರುಷ ಜೂನ್ 16 ರಂದು ಬಾಕ್ಸ್ ಆಫೀಸ್ನಲ್ಲಿ ಬಿಡುಗಡೆಯಾಗಿದ್ದು,ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿತ್ತು. ಬಿಡುಗಡೆಗೂ ಮುನ್ನವೇ ಈ ಚಿತ್ರದ ಬಗ್ಗೆ ವಿವಾದಗಳು ಎದ್ದಿದ್ದವು. ಬಿಡುಗಡೆಯ ನಂತರವೂ ಭಾರೀ ಚರ್ಚೆ ಆಗಿತ್ತು. ಓಂ ರಾವುತ್, ವಾಲ್ಮೀಕಿ ರಾಮಾಯಣವನ್ನು ಪೂರ್ಣವಾಗಿ ವಿರೂಪಗೊಳಿಸಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ. ರಾವತ್ ಮೇಲೆ ರಾಮ ಭಕ್ತರು ಹಾಗೂ ಪ್ರೇಕ್ಷಕರು ಕೋಪಗೊಂಡಿದ್ದಾರೆ.

ಈ ಚಿತ್ರವನ್ನು ನಿರ್ಮಿಸಲು ಸುಮಾರು 500 ಕೋಟಿ ವೆಚ್ಚವಾಯಿತು, ಆದರೆ ಚಿತ್ರದ ವಿಎಫ್ಎಕ್ಸ್ ಮತ್ತು ಸಂಭಾಷಣೆಗಳು ತುಂಬಾ ಕೆಟ್ಟದಾಗಿದೆ, ಥಿಯೇಟರ್ನಿಂದ ಹಿಂತಿರುಗಿದ ಜನರು ಇನ್ನು ಮುಂದೆ ಈ ಚಿತ್ರವನ್ನು ನೋಡಬಾರದು ಎಂದು ಬಯಸಿದ್ದರು., ಇಂತಹ ಪರಿಸ್ಥಿತಿಯಲ್ಲಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೂ ಎಆಗಿದೆಯಂತೆ. ಮೊದಲ ವಾರದ ನಂತರ, ಆದಿಪುರುಷನ ಕಲೆಕ್ಷನ್ಗಳ ವೇಗವು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ.
2ನೇ ವಾರದ ನಂತರ ಮೂರನೇ ವಾರದಲ್ಲಿ ಚಿತ್ರದ ಥಿಯೇಟರ ಕಷ್ಟವಾಯ್ತು, ಹಲವು ಚಿತ್ರಮಂದಿರಗಳಿಂದ ಆದಿಪುರುಷ ಸಿನಿಮಾ ತೆಗೆಯಲಾಗುತ್ತಿದೆ. 600 ಕೋಟಿ ಬಜೆಟ್ನಲ್ಲಿ ತಯಾರಾದ ಈ ಚಿತ್ರ 18 ದಿನಗಳ ಓಟವನ್ನು ಕೊನೆಗೊಳಿಸಿದೆ. 18ನೇ ದಿನಕ್ಕೆ ಎರಡು ತೆಲುಗು ರಾಜ್ಯಗಳಲ್ಲಿ ಭಾರಿ ಕುಸಿತ ಕಂಡಿದೆ. ಕೇವಲ 9 ಲಕ್ಷ ರೂಪಾಯಿ ಕಲೆಕ್ಷನ್ ನೋಡಿದರೆ ಈ ಸಿನಿಮಾದ ಕಲೆಕ್ಷನ್ ಕ್ಲೋಸ್ ಆಗಿದೆಯಂತೆ. ಆದಿಪುರುಷ IMDb ರೇಟಿಂಗ್ ಬಗ್ಗೆ ಮಾತನಾಡುತ್ತಾ , ಈ ಚಿತ್ರದ IMDb ರೇಟಿಂಗ್ 10 ರಲ್ಲಿ 2.7 ಆಗಿದೆ.
ಈ ಚಿತ್ರ ಬ್ಲಾಕ್ ಬಸ್ಟರ್ ಆಗಲಿದೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರು, ಆದರೆ ಈಗ ಚಿತ್ರ ಬಿಡುಗಡೆಯಾದ ನಂತರ ಕಳಪೆ ವಿಎಫ್ ಎಕ್ಸ್, ಕಳಪೆ ಸಂಭಾಷಣೆ, ನಿಧಾನಗತಿಯ ಚಿತ್ರಕಥೆಯಿಂದಾಗಿ ಆದಿಪುರುಷ ಚಿತ್ರಕ್ಕೆ ಪ್ರೇಕ್ಷಕರ ಹೃದಯ ಗೆಲ್ಲಲು ಸಾಧ್ಯವಾಗಲಿಲ್ಲ.



