ನಟಿ ಚೈತ್ರಾ ಆಚಾರ್ ಚಂದನವನದಲ್ಲಿ ತಮ್ಮದೇ ಶೈಲಿಯ ಪಾತ್ರಗಳಲ್ಲಿ ನಟಿಸುತ್ತಾ ಗುರುತಿಸಿಕೊಂಡಿರುವ ಪ್ರತಿಭೆ. ಇವರಿಗೆ ಈಗ ಹೊರ ಭಾಷೆಗಳಲ್ಲಿ ಸಹ ಭಾರಿ ಬೇಡಿಕೆ ಇದೆ. ಚೈತ್ರಾ ಆಚಾರ್ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ, ಇದರಲ್ಲಿ ಇವರ ಸುರಭಿ ಪಾತ್ರ ಎಲ್ಲರಿಗೂ ಬಹಳ ಹತ್ತಿರ ಅನ್ನಿಸಿತ್ತು. ಹಾಗೆಯೇ ರಾಜ್ ಬಿ ಶೆಟ್ಟಿ ಅವರೊಡನೆ ನಟಿಸಿದ ಸಿನಿಮಾ ಕೂಡ ಒಳ್ಳೆಯ ಹೆಸರು ಅವಾರ್ಡ್ಸ್ ಎಲ್ಲವನ್ನು ತಂದುಕೊಟ್ಟಿದೆ ಚೈತ್ರಾ ಅವರಿಗೆ. ಇಂಥ ಚೈತ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್.

ಹೌದು, ಚೈತ್ರಾ ಆಚರ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬದುಕಿನ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಫೋಟೋಶೂಟ್ ಗಳು ನಡೆದರೆ ಅವುಗಳನ್ನು ಶೇರ್ ಮಾಡುತ್ತಾರೆ, ಸಿನಿಮಾ ಅಪ್ಡೇಟ್ ಗಳು, ಇನ್ನಿತರ ಅನೇಕ ವಿಚಾರಗಳನ್ನು ಚೈತ್ರಾ ಆಚಾರ್ ಅವರು ಹಂಚಿಕೊಳ್ಳುತ್ತಾರೆ. ಹಾಗೆಯೇ ಆಗಾಗ ತಮ್ಮ ಅಭಿಮಾನಿಗಳ ಜೊತೆಗೆ ಪ್ರಶ್ನೋತ್ತರ ಚಟುವಟಿಕೆಗಳಲ್ಲಿ ಕೂಡ ಪಾಲ್ಗೊಳ್ಳುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಜೊತೆಗೆ Ask Me Anything ಆಕ್ಟಿವಿಟಿ ನಡೆಸಿ, ಅವರು ಕೇಳುವ ಪ್ರಶ್ನೆಗೆ ಉತ್ತರವನ್ನು ಕೊಡುತ್ತಾರೆ ಚೈತ್ರಾ. ಅದೇ ರೀತಿ ಒಬ್ಬ ವ್ಯಕ್ತಿ ಕೆಟ್ಟದಾಗಿ ಪ್ರಶ್ನೆ ಕೇಳಿದ್ದಾರೆ.
ನೀವು ಯಾವಾಗ ಕ*ನ್ಯತ್ವ ಕಳ್ಕೊಂಡ್ರಿ, ಆ ಅನುಭವ ಹೇಗಿತ್ತು ಎಂದು ಒಬ್ಬ ನೆಟ್ಟಿಗ ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಚೈತ್ರಾ ಅವರು ಬುದ್ಧಿವಂತಿಕೆ ಇಂದ ಉತ್ತರ ಕೊಟ್ಟಿದ್ದಾರೆ. ಚೈತ್ರಾ ಆಚಾರ್ ಅವರು ವಿಡಿಯೋ ಮೂಲಕ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದು, ಈ ಪ್ರಶ್ನೆಯನ್ನ ನಿಮ್ಮ ಮನೆಯಲ್ಲಿ ನಿಮ್ಮ ತಾಯಿಗೆ ಕೇಳಿ, ನಿಮ್ಮ ಅಜ್ಜಿಗೆ ಕೇಳಿ, ಬಹುಶಃ ನಿಮಗೆ ಅಕ್ಕ ಅಥವಾ ತಂಗಿ ಇರಬಹುದು, ಅವರಿಗೆಲ್ಲ ಕೇಳಿ, ಪ್ರೊಸೆಸ್ ಹೇಗಿರುತ್ತದೆ ಅಂತ ಡೀಟೇಲ್ ಆಗಿ ತಿಳ್ಕೊಳ್ಳಿ, ಸಾಧ್ಯ ಆದ್ರೆ ಒಂದು ಡೆಮೋ ಕೊಡಿ ಅಂತ ಕೇಳಿ, ಆಗ ಎಲ್ಲವನ್ನ ಇನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಚೈತ್ರಾ ಆಚಾರ್ ಉತ್ತರ ಕೊಟ್ಟಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇಂಥ ಹಲವು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇರುತ್ತದೆ. ಕೆಲವು ಜನರು ಈ ರೀತಿ ಅಸಭ್ಯವಾಗಿ ಮಾತನಾಡುವುದಕ್ಕಾಗಿಯೇ ಸೋಷಿಯಲ್ ಮೀಡಿಯಾ ಅಕೌಂಟ್ ಹೊಂದಿರುತ್ತಾರೆ. ಸಿನಿಮಾ ಕಲಾವಿದರ ಬಗ್ಗೆ, ಇನ್ನಿತರ ವ್ಯಕ್ತಿಗಳ ಬಗ್ಗೆ ಹೀಗೆ ಅಸಭ್ಯವಾಗಿ ಮಾತನಾಡುವುದು ಮಾಡುತ್ತಾರೆ. ಇಂಥವರಿಗೆ ಈ ರೀತಿಯಾಗೆ ಉತ್ತರ ಕೊಡಬೇಕು ಅನ್ನೋದನ್ನ ಚೈತ್ರಾ ಆಚಾರ್ ಅವರು ತೋರಿಸಿಕೊಟ್ಟಿದ್ದಾರೆ. ಇಂಥ ಸಾವಿರಾರು ಜನರು ತಮ್ಮ ಮುಖವನ್ನು ತೋರಿಸದೇ, ಫೇಕ್ ಅಕೌಂಟ್ ಗಳ ಮೂಲಕ ಈ ರೀತಿ ಕಲಾವಿದರ ಬಗ್ಗೆ ಕೆಟ್ಟದಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ.

ಅವರಿಗೂ ಒಂದು ಕುಟುಂಬ ಇರುತ್ತದೆ, ನಿಮ್ಮ ಕುಟುಂಬದ ಹಾಗೆ ಅವರು ಕೂಡ ಅನ್ನೋದನ್ನ ಯಾರು ಸಹ ಅರ್ಥ ಮಾಡಿಕೊಳ್ಳುವುದಿಲ್ಲ. ಸೋಶಿಯಲ್ ಮೀಡಿಯಾ ಇಂದ ಎಲ್ಲವೂ ಒಂದು ರೀತಿ ಅತಿರೇಕಕ್ಕೆ ಹೋಗುತ್ತಿದೆ ಎಂದು ಹೇಳಬಹುದು. ಇತ್ತೀಚೆಗೆ ನಾಯಕಿಯರ ಡೀಪ್ ಫೇಕ್ ವಿಡಿಯೋಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎಲ್ಲೋ ಕೂತು ತಮ್ಮ ಮನಸ್ಸಿಗೆ ಬಂದ ಹಾಗೆ ಹೀರೋಯಿನ್ ಗಳ ಮುಖ ಬಳಸಿ ಎಡಿಟ್ ಮಾಡುತ್ತಾರೆ. ಇಂಥದ್ದೆಲ್ಲ ಕಡಿಮೆ ಆಗಬೇಕು, ಸೋಶಿಯಲ್ ಮೀಡಿಯಾವನ್ನು ಎಲ್ಲರೂ ಕೂಡ ಒಳ್ಳೆತನದಲ್ಲಿ ಬಳಸಿಕೊಳ್ಳಬೇಕು. ಆದರೆ ಇದು ಕಷ್ಟಸಾಧ್ಯ.