ವಿನಯನ್ ನಿರ್ದೇಶನದ ‘ಬಾಯ್ ಫ್ರೆಂಡ್’ ಸಿನಿಮಾದ ಮೂಲಕ ಹನಿ ರೀಸ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಸದ್ಯ, ಸಾಲು ಸಾಲು ಸಿನಿಮಾಗಳ ಮೂಲಕ ನಟಿ ಮಿಂಚುತ್ತಿದ್ದಾರೆ. ಹೆಚ್ಚಾಗಿ ಮಾಡರ್ನ್ ಬಟ್ಟೆಯಲ್ಲಿ ಕಂಗೊಳಿಸುವ ಹನಿ ರೋಸ್, ಇದೀಗ ಕೇರಳ ಟ್ರೆಡಿಷನಲ್ ಲುಕ್ನಲ್ಲಿ ಮಿಂಚುತ್ತಿದ್ದಾರೆ. ನಟಿಯ ದೇಸಿ ಫೋಟೋಗಳನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.ಈ ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


ಫೋಟೋಶೂಟ್ಗಳು ಮತ್ತು ಜಾಹೀರಾತುಗಳ ಮೂಲಕ ಮಲಯಾಳಿ ನಟಿ ಹನಿ ರೋಸ್ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಬಾಲಯ್ಯ ಅವರ ಇತ್ತೀಚಿನ ಚಿತ್ರ ವೀರಸಿಂಹ ರೆಡ್ಡಿಯಲ್ಲಿ ಮೀನಾಕ್ಷಿಯಾಗಿ ಮಲಯಾಳಿ ಕುಟ್ಟಿ ಹನಿ ರೋಸ್ ಜನಪ್ರಿಯರಾದ್ರು. ಕೇರಳದ ತೊಡುಪುಳದಲ್ಲಿ 1991ರ ಸೆಪ್ಟೆಂಬರ್ 5ರಂದು ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದರು. ಹನಿ ರೋಸ್ ಕಮ್ಯುನಿಕೇಟಿವ್ ಇಂಗ್ಲಿಷ್ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.
2005ರಲ್ಲಿ 14ನೇ ವಯಸ್ಸಿಗೆ ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ರು. ಮೊದಲು ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ. ಮುತ್ಯಾಲ ಸುಬ್ಬಯ್ಯನವರ 50ನೇ ಚಿತ್ರ ಟೆಂಪಲ್ ನಲ್ಲಿ ಹನಿ ರೋಸ್ ನಟಿಸಿದ್ದಾರೆ. ಅದರ ನಂತರ ಹನಿರೋಸ್ ಸಾಕ್ಷಿಗಾ ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು. ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹನಿರೋಸ್ ಭಾರಿ ಜನಪ್ರಿಯತೆ ಪಡೆದರು. ಇದೀಗ ಫೋಟೋಶೂಟ್ ಮೂಲಕ ಮುನ್ನೆಲೆಗೆ ಬಂದಿರುವ ಹನಿ ರೋಸ್ ಬೋಲ್ಡ್ ಲುಕ್ ಕಂಡು ನೆಟ್ಟುಗರು ಮನಸೋತಿದ್ದಾರೆ.