ಮನೆಯಲ್ಲಿ ಕಾಣಿಸಿಕೊಳ್ಳುವ ಮನಸ್ತಾಪಗಳಿಗೆ ಇಲ್ಲಿದೆ ಪರಿಹಾರ!
ಇತ್ತೀಚಿಗೆ ನಾವು ಕಾಣುವಂತ ಬಹುದೊಡ್ಡ ಸಮಸ್ಯೆ ಮನೆಯಲ್ಲಿ ಮನಸ್ತಾಪ, ನಾವು ಏನೋ ಒಂದು ಮಾಡೋಕೆ ಹೋಗ್ತಿವಿ ಅದು ಯಾವುದೋ ಒಂದು ಹಂತದಲ್ಲಿ ಮುರಿದು ಬೀಳುತ್ತೆ, ಇದಕ್ಕಿದ್ದ ಹಾಗೇ ಮನೆಯಲ್ಲಿ ಯಾರಿಗೋ ಅನಾರೋಗ್ಯ ಸಂಭವಿಸುತ್ತೆ, ಇದಕ್ಕಿದ್ದ ಹಾಗೇ ಏನ್ ಏನೋ ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತೆ. ಈ ಸಮಯದಲ್ಲಿ ನಮಗೆ ಯಾರೋ ಏನೋ ಮಾಡಿದ್ದಾರೆ ಎನ್ನುವ ಯೋಚನೆ ತರಿಸುತ್ತದೆ. ಯಾವಾಗ ಸತತವಾಗಿ ಕೆಲಸ ಕಾರ್ಯಗಳು ಆಗೋದಿಲ್ಲ, ಯಾವಾಗ ಸತತವಾಗಿ ನಮ್ಮೆಲ್ಲ ಪ್ರಯತ್ನಗಳು ವಿಫಲವಾಗುತ್ತೆ, ಅವಾಗ ಎಲ್ಲರ ಮನಸ್ಸು ಓಡೋದು ಯಾರದ್ದೋ ಕೆಟ್ಟ ಕಣ್ಣು ನಮಗೆ ಬಿದಿದ್ದೆ, ಅಥವಾ ಯಾರೋ ಮಾಠ ಮಾಡಿದ್ದಾರೆನೋ ಎನ್ನುವ ಪ್ರಶ್ನೆ ನಮ್ಮಲ್ಲಿ ಕಾಡುತ್ತೆ. ನಾನಾ ರೀತಿಯ ಇಂತಹ ಸಮಸ್ಯೆಗಳು ಕಾಣಿಸುತ್ತೆ.
ನಮ್ಮ ಕನ್ನಡ ಯೂಟ್ಯೂಬ್ ಚಾನಲ್ ಡಾ. ಗೌರಿ ಸುಬ್ರಹ್ಮಣ್ಯ ಶಾಸ್ತ್ರೀ ಬಳಿ ಓರ್ವ ವ್ಯಕ್ತಿ ಬಂದಿದ್ದು, ಆತ ಏನೇ ತಿಂದರೂ ಉಗಳಬೇಕು ಎಂದು ಅನಿಸುತ್ತಿತ್ತಂತೆ, ಅಮೃತವನ್ನೇ ನೀವು ಅವನಿಗೆ ಕೊಟ್ಟರು ಸಹ ಉಗಿಯುತ್ತಿದ್ದನಂತೆ, ಈ ಸಮಸ್ಯೆಯಿಂದ ರೋಸಿ ಹೋಗಿದ್ದ ಆತನ ಹೆಂಡತಿ ತನ್ನ ಅಳಲನ್ನ ಡಾ. ಗೌರಿ ಸುಬ್ರಹ್ಮಣ್ಯ ಶಾಸ್ತ್ರೀ ಬಳಿ ತೊರ್ಪಡಿಸಿದ್ದು,ನೀರು ಕೂಡ ಕುಡಿಯಲು ಸಾಧ್ಯವಾಗುತ್ತಿಲ್ಲ ಎಂದು ಆಕೆ ಹೇಳಿಕೊಳ್ಳುತ್ತಾಳೆ. ಈ ತರದ ಸಮಸ್ಯೆಗಳನ್ನ ಹೇಗೆ ಪರಿಹಾರ ಮಾಡಿಕೊಳ್ಳೋದು ಎನ್ನುವುದೇ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತೆ. ಈ ತರಹದ ವಿಚಾರಗಳು ನಿಮ್ಮ ಬಳಿ ಬಂದಾಗ ದೃತಿಗೆಡಬೇಕಿಲ್ಲ,ಈ ಸಮಸ್ಯೆಗೂ ಕೂಡ ಸರಳವಾಗಿ ಸರಿಪಡಿಸಿಕೊಳ್ಳಬಹುದು.
ಹೌದು ಕೆಲವೊಂದು ಮನೆಗಳಲ್ಲಿ ಸಾಕಷ್ಟು ಸಮಸ್ಯೆ ಇರುತ್ತೆ ಅಗೋಚರ ಸಮಸ್ಯೆಗಳು ಬೇಕಾದಷ್ಟು ಮನೆಗಳಲ್ಲಿ ಇರುತ್ತೆ. ನಕಾರಾತ್ಮಕ ಶಕ್ತಿಗಳು ಮನೆ ಮುಂದೆ ಹಾಗೂ ಮನೆ ಪರಿಸರಗಳಲ್ಲಿ ಇರುತ್ತೆ. ಇದಕ್ಕೆ ಪರಿಹಾರ ನಿಮ್ಮ ಮನೆ ಬಳಿ ಒಳ್ಳೆಯ ಜಾಗ ಇದ್ರೆ ಎಕ್ಕದ ಗಿಡ ಬೆಳೆಸಿದ್ರೆ ಸಾಕು ಎಕ್ಕದ ಗಿಡ ಇದ್ದ ಸಮೀಪದ ಜಾಗಗಳಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಪ್ರಭಾವ ಬಿರಲ್ಲ. ಹಾಗೇ ಮನೆಯಲ್ಲಿ ಕಿಟಕಿ ಬಾಗಿಲುಗಳನ್ನು ಮುಂಜಾನೆ ಎದ್ದ ಕೂಡಲೇ ತೆರದು ಇಡಬೇಕು. ಸೂರ್ಯನ ಬೆಳಕು ಕಿಟಕಿಗಳ ಮೂಲಕ ಮನೆಯೊಳಗೆ ಬಂದ್ರೆ ತುಂಬಾ ಒಳ್ಳೆಯದು.
ಅಷ್ಟೇ ಅಲ್ಲದೆ ಮನೆಯೊಳಗೇ ಧೂಪ ಹಾಕುವುದರಿಂದಲೂ ನೀವು ಮನೆ ಒಳಗಿನ ನಕಾರಾತ್ಮಕ ಶಕ್ತಿಗಳನ್ನು ಹೊರ ಕಳಿಸಬಹುದು. ಇನ್ನೂ ಮನೆಯ ಮುಂದೆ ಹಾಗೂ ಹಿಂದೆ ತುಳಸಿ ಗಿಡಗಳನ್ನು ಬೆಳಸುವುದು ಇದರಿಂದ ನಕಾರಾತ್ಮಕ ಶಕ್ತಿಗಳನ್ನು ನಾವು ಸುಲಭವಾಗಿ ತಡೆಗಟ್ಟಬಹುದು. ಹಾಗಾಗಿ ಹೆಚ್ಚು ಹೆಚ್ಚು ತುಳಸಿ ಗಿಡ ಬೆಳೆಸುವುದರಿಂದ ದುಷ್ಟ ಶಕ್ತಿಗಳಿಂದ ಮುಕ್ತಿ ಸಿಗುತ್ತೆ. ಕಾಲಭೈರವನ ಪೂಜೆ ಮಾಡಿ ಅದರ ಪ್ರಸಾದವನ್ನು ಮನೆಯಲ್ಲಿ ಇಡುವುದರಿಂದ ಈ ದುಷ್ಟ ಶಕ್ತಿಗಳ ಸಮಸ್ಯೆ ಕಡಿಮೆಯಾಗುತ್ತೆ.
ಸಣ್ಣ ಮಕ್ಕಳಿಗೆ ಕಣ್ಣು ದೃಷ್ಟಿ ತಾಗುವುದು ಕೂಡ ಒಂದು ದೊಡ್ಡ ಸಮಸ್ಯೆಯಾಗಿ ಇಂದಿನ ದಿನಗಳಲ್ಲಿ ಕಾಣಸಿಗುತ್ತೆ, ಅದಕ್ಕೆ ಉತ್ತಮ ಪರಿಹಾರ ಹುಡಿ ಉಪ್ಪು, ಪೊರಕೆ ಕಡ್ಡಿ ಹಾಗೂ ಒಣ ಮೆಣಸು ಉಪಯೋಗಿಸಿ ದೃಷ್ಟಿ ತಗೆಯುವುದರಿಂದ ಈ ದೃಷ್ಟಿ ಸಮಸ್ಯೆಯಿಂದ ಸಂಪೂರ್ಣ ಪರಿಹಾರವನ್ನು ಪಡೆದುಕೊಳ್ಳಬಹುದು. ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಳ್ಳುವುದರಿಂದ ಸಣ್ಣ ಪುಟ್ಟ ಸಮಸ್ಯೆ ದೋಷಗಳು ನಿಮ್ಮ ಮನೆಯಿಂದ ಸಂಪೂರ್ಣವಾಗಿ ದೂರವಾಗಿ ಬಿಡುತ್ತದೆ. ಇಂತಹ ಪರಿಹಾರಗಳಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ.