ಬಿಗ್ ಬಾಸ್ ಮುಗಿದ ಬಳಿಕ ಶುರುವಾದ ಧಾರಾವಾಹಿ ವಧು. ವಿಭಿನ್ನವಾದ ಕಥಾ ಹಂದರ ಹೊಂದಿರುವ ಧಾರಾವಾಹಿ ಇದು. ಕಥಾನಾಯಕಿಯ ಹೆಸರೇ ವಧು, ವೃತ್ತಿಯಲ್ಲಿ ಡೈವೋರ್ಸ್ ಲಾಯರ್ ಆಗಿರುವ ವಧುಗೆ ಮದುವೆ ಆಗಬೇಕು ಅನ್ನೋದೇ ಅವಳ ಗುರಿ. ವಧುವಿನ ತಂದೆಗೆ ಮಗಳಿಗೆ ಮದುವೆ ಮಾಡಬೇಕು ಅನ್ನೋದೇ ಆಕೆಯ ತಂದೆಯ ಆಸೆ. ಅಪ್ಪನ ಆಸೆಯಂತೆ ಒಳ್ಳೇ ಹುಡುಗನನ್ನ ಮದುವೆ ಮಾಡಿಕೊಳ್ಳಬೇಕು ಅನ್ನೋದು ವಧುವಿನ ಆಸೆ. ವಧುವನ್ನು ಮದುವೆ ಆಗೋ ಹುಡುಗ ಹೇಗಿರಬೇಕು ಅನ್ನೋದಕ್ಕೆ ಹಲವು ಕನಸುಗಳು ಅವರ ಮನೆಯವರಲ್ಲಿ ಇದೆ. ಇನ್ನು ಈ ಕಥೆಯ ನಾಯಕ ಸಾರ್ಥಕ್. ಈಗಾಗಲೇ ಸಾರ್ಥಕ್ ಗೆ ಮದುವೆಯಾಗಿದೆ. ಅಮ್ಮನನ್ನು ಬಹಳ ಪ್ರೀತಿಸುವ ಸಾರ್ಥಕ್ ಹೆಂಡತಿಯನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಆದರೆ ಸಾರ್ಥಕ್ ಹೆಂಡತಿ ಪ್ರಿಯಾಂಕಗೆ ಗಂಡ ಬೇಕಿಲ್ಲ.
ಗಂಡನಿಗಿಂತ ಅವನ ಆಸ್ತಿ ಬೇಕು. ಪ್ರಿಯಾಂಕ ಮತ್ಯಾರು ಅಲ್ಲ, ಸಾರ್ಥಕ್ ತಾಯಿ ಯಶೋಮತಿಯ ತಮ್ಮನ ಮಗಳು. ಸ್ವಂತದವರು ಮನೆಯಲ್ಲಿ ಇರಲಿ, ಸೋದರ ಸೊಸೆ ಮಗನ ಹೆಂಡತಿಯಾಗಿ ಬಂದು, ಮನೆಯ ದೀಪವಾಗಿರಲಿ ಎಂದು ಮಗನಿಗೆ ಮದುವೆ ಮಾಡಿಕೊಂಡಿದ್ದಾರೆ. ಆದರೆ ಪ್ರಿಯಾಂಕ ಇವರು ಅಂದುಕೊಂಡ ಹಾಗಿಲ್ಲ. ಅತ್ತೆಯ ಎದುರು ನಾಜೂಕಾಗಿ, ಒಳ್ಳೆಯ ಹುಡುಗಿಯ ಹಾಗೆ ಇರುವ ಪ್ರಿಯಾಂಕಳ ಅಸಲಿ ರೂಪ ಕಾಣುವುದು ಗಂಡ ಸಾರ್ಥಕ್ ಎದುರು ಮಾತ್ರ. ಗಂಡನ ಜೊತೆಗೆ ವಿಚ್ಛೇದನ ಬೇಕು ಎಂದು ಹಠ ಹಿಡಿದಿರುವ ಪ್ರಿಯಾಂಕ, ಅತ್ತೆ ಎದುರು ಹೇಳೋದೇ ಬೇರೆ. ಎರಡು ಕಡೆ ತನಗೆ ಇಷ್ಟಬಂದ ಹಾಗೇ, ತನಗೆ ಅನುಕೂಲ ಆಗುವ ಹಾಗೆ ಇರುವ ಪ್ರಿಯಾಂಕ ಗಂಡನ ಮನೆಯ ಆಸ್ತಿ ಹೊಡೆಯಬೇಕು ಎಂದು ಅಮ್ಮನ ಜೊತೆ ಸೇರಿ ಪ್ಲಾನ್ ಮಾಡುತ್ತಿದ್ದಾಳೆ. ಇದೇ ಆಕೆಯ ಮತ್ತು ಆಕೆಯ ತಾಯಿಯ ಗುರಿ..

ಇದಿಷ್ಟು ಪ್ರಸ್ತುತ ಈ ಧಾರಾವಾಹಿಯಲ್ಲಿ ನಡೆಯುತ್ತಿರುವ ಕಥೆ ಆಗಿದೆ. ಸಾರ್ಥಕ್ ತಾಯಿ ಯಶೋಮತಿ ಪಾತ್ರದಲ್ಲಿ ನಟಿ ವಿನಯ ಪ್ರಸಾದ್ ಅವರು ಕಾಣಿಸಿಕೊಂಡಿದ್ದಾರೆ. ಪಾರು ಬಳಿಕ ವಿನಯ ಪ್ರಸಾದ್ ಅವರನ್ನು ನೋಡೋಕೆ ಬಹಳ ಸಂತೋಷ ಆಗುತ್ತದೆ ಎಂದರೆ ತಪ್ಪಲ್ಲ. ಇವರೊಬ್ಬ ಅದ್ಭುತ ಕಲಾವಿದೆ. ಒಳ್ಳೇ ಸ್ಟಾರ್ ಕ್ಯಾಸ್ಟ್ ಹೊಂದಿರುವ ಧಾರಾವಾಹಿಯಲ್ಲಿ ನಾಯಕಿಯ ಪಾತ್ರ ಮಾಡುತ್ತಿರುವ ವಧು ಪಾತ್ರಧಾರಿಯ ಬಗ್ಗೆ ತಿಳಿಯುವ ಕುತೂಹಲ ಜನರಲ್ಲಿದೆ. ಇವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ. ವಧು ಧಾರಾವಾಹಿಯಲ್ಲಿ ನಾಯಕಿ ವಧು ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದೆಯ ಹೆಸರು ದುರ್ಗಶ್ರೀ. ಇವರು ಈಗಾಗಲೇ ವಧು ಪಾತ್ರದ ಮೂಲಕ ಜನರಿಗೆ ತುಂಬಾ ಇಷ್ಟವಾಗಿದ್ದಾರೆ. ವಧು ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಎಂದರು ತಪ್ಪಲ್ಲ. ಕೆಲವೇ ದಿನಗಳಲ್ಲಿ ಈ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ..

ದುರ್ಗಶ್ರೀ ಅವರ ವಧು ಪಾತ್ರ ಬಹಳ ಸ್ವಾಭಿಮಾನಿ ಪಾತ್ರ. ಕೆಲಸ ಎಷ್ಟು ಮುಖ್ಯವೋ, ಆತ್ಮಗೌರವ ಕೂಡ ಅಷ್ಟೇ ಮುಖ್ಯ ಎನ್ನುವ ಪಾತ್ರವಿದು. ಹೆಣ್ಣುಮಕ್ಕಳು ಈ ರೀತಿ ಇರಬೇಕು, ತಮ್ಮ ಆತ್ಮಗೌರವ ಬಿಟ್ಟುಕೊಡಬಾರದು ಎಂದು ವೀಕ್ಷಕರ ಅಭಿಪ್ರಾಯ. ಈ ಪಾತ್ರದ ಮೂಲಕ ದುರ್ಗಶ್ರೀ ಅವರಿಗೆ ಒಳ್ಳೆಯ ಹೆಸರು ಮತ್ತು ಕೀರ್ತಿ ಬರಲಿ ಎನ್ನುವುದೇ ಜನರ ಆಸೆ ಆಗಿದೆ. ಇನ್ನು ವಧು ಪಾತ್ರದಲ್ಲಿ ನಟಿಸುತ್ತಿರುವ ದುರ್ಗಶ್ರೀ ಅವರ ಬಗ್ಗೆ ಹೇಳುವುದಾದರೆ, ಇವರು ಹುಟ್ಟಿ ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲೇ. ಜಕ್ಕುರಿನಲ್ಲಿ ಹುಟ್ಟಿ ಬೆಳೆದ ಇವರು, ಬೆಂಗಳೂರಿನ ಸಹಕಾರ ನಗರದಲ್ಲಿ ಇರುವ ಕಾವೇರಿ Public ಸ್ಕೂಲ್ ನಲ್ಲಿ ಓದಿದರು, ಬಳಿಕ ಯಲಹಂಕದಲ್ಲಿ ಇರುವ ನಾಗಾರ್ಜುನ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿ ಮುಗಿಸಿದ್ದಾರೆ. ಆಚಾರ್ಯ ಇನ್ಸ್ಟಿಟ್ಯೂಟ್ ನಲ್ಲಿ ಬಿಕಾಮ್ ಓದಿದ್ದಾರೆ. ಇನ್ನು ಒಳ್ಳೆ ವಿಷಯ ಇವರ ಬಗ್ಗೆ ಇದೆ..
ದುರ್ಗಶ್ರೀ ಅವರು ಶಾಸ್ತ್ರೀಯವಾಗಿ ಭರತನಾಟ್ಯ ಸಹ ಕಲಿತಿದ್ದಾರೆ. ಅನುರಾಧಾ ವೆಂಕಟರಮಣ ಅವರ ಬಳಿ ಭರತನಾಟ್ಯ ಕಲಿತಿದ್ದಾರೆ. ಡ್ಯಾನ್ಸ್ ನಲ್ಲಿಯೇ ದೊಡ್ಡ ಮಟ್ಟಲ್ಲಿ ಸಾಧನೆ ಮಾಡಬೇಕು ಎನ್ನುವುದು ದುರ್ಗಶ್ರೀ ಅವರ ಆಸೆ ಆಗಿತ್ತು. ಆದರೆ ನಟನೆ ಎನ್ನುವುದು ಇವರಿಗೆ ಅನಿರೀಕ್ಷಿತವಾಗಿ ಸಿಕ್ಕ ಅವಕಾಶ. ಮೊದಲಿಗೆ ದುರ್ಗಶ್ರೀ ಅವರು ನಟಿಸಿದ್ದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನೇತ್ರಾವತಿ ಧಾರಾವಾಹಿಯಲ್ಲಿ. ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿರ್ಮಾಣ ಮಾಡಿದ ಧಾರಾವಾಹಿ. ದುರ್ಗಶ್ರೀ ಅವರನ್ನು ಪರಿಚಯ ಮಾಡಿದ್ದು ಅಪ್ಪು ಅವರು. ಈ ವಿಷಯದ ಬಗ್ಗೆ ದುರ್ಗಶ್ರೀ ಅವರಿಗೆ ಹೆಮ್ಮೆ ಇದೆ. ಅಪ್ಪು ಸರ್ ಇಂದ ತಾವು ಪರಿಚಯ ಆಗಿದ್ದು ಎಂದು. ನೇತ್ರಾವತಿ ಬಳಿಕ ತೆಲುಗಿನಲ್ಲಿ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ದುರ್ಗಶ್ರೀ.

ತೆಲುಗಿನಲ್ಲಿ ಮೊದಲಿಗೆ ವೈಷ್ಣವಿ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಅರ್ಧಾಂಗಿ ಮತ್ತು ಮಧುರ ನಗರಿಲೋ ಎನ್ನುವ ಇನ್ನೆರಡು ತೆಲುಗು ಧಾರಾವಾಹಿಗಳಲ್ಲಿ ಸಹ ನಟಿಸಿದರು. ಈ ಮೂಲಕ ತೆಲುಗಿನಲ್ಲಿ ಸಹ ಇವರಿಗೆ ಜನಪ್ರಿಯತೆ ಇದೆ. ಇದೀಗ ಕನ್ನಡಕ್ಕೆ ಒಂದೊಳ್ಳೆಯ ಪ್ರಾಜೆಕ್ಟ್ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ವಧು ಧಾರಾವಾಹಿಯನ್ನು ಪರಮೇಶ್ವರ್ ಗುಂಡ್ಕಲ್ ಅವರು ನಿರ್ದೇಶನ ಮಾಡುತ್ತಿದ್ದು, ಕಥೆ ತುಂಬಾ ಚೆನ್ನಾಗಿ ಮೂಡಿ ಬರೋದರಲ್ಲಿ ಯಾವುದೇ ಸಂಶಯವಂತು ಇಲ್ಲ. ಇನ್ನು ಕಲರ್ಸ್ ಕನ್ನಡ ವಾಹಿನಿ ಯಾವಾಗಲೂ ಒರಿಜಿನಲ್ ಸ್ಟೋರಿಗಳನ್ನೇ ಜನರಿಗೆ ನೀಡುವ ಮೂಲಕ ಹೆಚ್ಚು ಮನರಂಜನೆ ಕೊಡುತ್ತಲೇ ಬಂದಿದೆ. ಈ ವಾಹಿನಿಯ ಧಾರಾವಾಹಿಗಳಲ್ಲಿ ನಟಿಸಿದರೆ, ಒಳ್ಳೆಯ ಹೆಸರು ಬರುವುದರಲ್ಲಿ ಎರಡನೇ ಮಾತೆ ಇಲ್ಲ..ದುರ್ಗಶ್ರೀ ಅವರ ವಿಚಾರದಲ್ಲಿ ಸಹ ಇದೇ ರೀತಿ ಆಗಿದೆ. ಹಿಂದಿನ ಧಾರವಾಹಿಗಳಿಗಿಂತ ಈಗ ಇವರಿಗೆ ಬೇಡಿಕೆ ಮತ್ತು ಜನಪ್ರಿಯತೆ ಜಾಸ್ತಿ ಆಗಿದೆ.

ಇಂಥ ಒಳ್ಳೆ ವಾಹಿನಿ ಹಾಗೂ ನಿರ್ದೇಶಕರು ಇದ್ದಾಗ, ವಧು ಧಾರಾವಾಹಿ ಕಥೆ ಅದ್ಭುತವಾಗಿ ಮೂಡಿ ಬರಲಿದೆ. ಮುಂದೆ ವಧು ಜನರಿಗೆ ಇನ್ನಷ್ಟು ಹತ್ತಿರ ಆಗೋದು ಖಂಡಿತ. ದುರ್ಗಶ್ರೀ ಅವರಿಗೆ ಈ ಧಾರಾವಾಹಿ ಇಂದ ಹೆಚ್ಚು ಯಶಸ್ಸು ಸಿಗಲಿ ಜೊತೆಗೆ ಇನ್ನು ಒಳ್ಳೆಯ ಪಾತ್ರಗಳು ಇವರಿಗೆ ಸಿಗಲಿ ಎಂದು ಹಾರೈಸೋಣ. ಹಾಗೆಯೇ ನಮ್ಮ ಕನ್ನಡ ಕಿರುತೆರೆಯ ಹೊಸ ಕಲಾವಿದರಿಗೆ ಎಲ್ಲರೂ ಪ್ರೋತ್ಸಾಹಿಸಬೇಕು, ಈಗ ಧಾರಾವಾಹಿಗಳು ಮತ್ತು ಅವುಗಳಿಗೆ ಇರುವ ಬೇಡಿಕೆ ಹೆಚ್ಚುತ್ತಿರುವ ಕಾರಣ ಹೆಚ್ಚು ಕಲಾವಿದರಿಗೆ ಧಾರವಾಹಿಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. ಇದು ಹೀಗೆ ಮುಂದುವರೆದರೆ ನಟನೆಯಲ್ಲಿ ಆಸಕ್ತಿ ಇರುವ ಹಲವರಿಗೆ ಒಳ್ಳೆಯ ಅವಕಾಶ ಸಿಕ್ಕಿ, ಅವರ ಜೀವನ ರೂಪಿಸಿಕೊಳ್ಳುವುದಕ್ಕೆ ಸಾಧ್ಯ ಆಗುತ್ತದೆ. ಇನ್ನಷ್ಟು ಪ್ರತಿಭಾನ್ವಿತ ಕಲಾವಿದರು ತೆರೆಮೇಲೆ ಬರಲಿ.