ಎಲ್ಐಸಿ (LIC) ತನ್ನ ಗ್ರಾಹಕರಿಗೆ ವಿಭಿನ್ನ ವಿಮಾ ಯೋಜನೆ (Insurance) ಗಳನ್ನು ತರುತ್ತದೆ. ಕೆಲವು ಯೋಜನೆಗಳು ಸೀಮಿತ ಅವಧಿಗೆ ಮಾತ್ರ. ಕೆಲವು ಸ್ಕೀಮ್ಗಳು ದೀರ್ಘಾವಧಿಯವರೆಗೆ ನಡೆಸಲ್ಪಡುತ್ತವೆ. ಈ ಲೇಖನದಲ್ಲಿ ನಾವು ನಿಮಗೆ ಮೂರು ಯೋಜನೆಯ ಕುರಿತು ತಿಳಿಸಿ ಕೊಡುತ್ತವೆ . 1. ಪ್ರಧಾನಮಂತ್ರಿ ವಯ ವಂದನ ಯೋಜನೆ. 2. ಸರಳ ಪಿಂಚಣಿ ಯೋಜನೆ 3. ಆಧಾರ್ ಶಿಲಾ ಯೋಜನೆ.
ಹಿರಿಯ ನಾಗರಿಕರು(60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿರುವ ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ)ಯನ್ನು ವಿಸ್ತರಿಸಿ, ಪರಿಷ್ಕೃತಗೊಳಿಸಿ ಜಾರಿಗೊಳಿಸಲಾಗಿದ್ದು, ತಿಂಗಳಿಗೆ 9250 ರು ತನಕ ಪಿಂಚಣಿ ಪಡೆದುಕೊಳ್ಳಬಹುದಾಗಿದೆ.

ಹೂಡಿಕೆ ಮೊತ್ತ, ಅವಧಿ ಮಾಸಿಕ ಅವಧಿ
- ಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1.50 ಲಕ್ಷ; ಗರಿಷ್ಠ ಹೂಡಿಕೆ: ರೂ. 7.50 ಲಕ್ಷ ರು
- ತ್ರೈಮಾಸಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,49,068; ಗರಿಷ್ಠ ಹೂಡಿಕೆ: ರೂ. 7,45,342
- ಅರ್ಧವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,47,601; ಗರಿಷ್ಠ ಹೂಡಿಕೆ: ರೂ. 7,38,007
*ವಾರ್ಷಿಕ ಅವಧಿ: ಕನಿಷ್ಟ ಹೂಡಿಕೆ: ರೂ. 1,44,578; ಗರಿಷ್ಠ ಹೂಡಿಕೆ: ರೂ. 7,22,892
ಪಿಂಚಣಿ ಮೊತ್ತ
ಪಿಂಚಣಿ ಮೊತ್ತ
- ಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 1,000/; ಗರಿಷ್ಠ ಪಿಂಚಣಿ: ರೂ. 5,000/
- ತ್ರೈಮಾಸಿಕ ಅವಧಿ: ಕನಿಷ್ಟ ಪಿಂಚಣಿ: ರೂ. 3,000/; ಗರಿಷ್ಠ ಪಿಂಚಣಿ: ರೂ. 15,000/
- ಅರ್ಧವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 6,000/ ಗರಿಷ್ಠ ಪಿಂಚಣಿ: ರೂ. 30,000/
- ವಾರ್ಷಿಕ ಅವಧಿ: ಕನಿಷ್ಟ ಪಿಂಚಣಿ: ರೂ. 12,000/ ಗರಿಷ್ಠ ಪಿಂಚಣಿ: ರೂ. 60,000/
ಭಾರತೀಯ ಜೀವ ವಿಮಾ ನಿಗಮವು (LIC) ವೈಯಕ್ತಿಕ ವಾರ್ಷಿಕ ಯೋಜನೆ ‘ಸರಳ ಪಿಂಚಣಿ’ಯನ್ನು (Saral Pension Plan) ಇತ್ತೀಚೆಗೆ ಪರಿಚಯಿಸಿದೆ.ಎಲ್ಐಸಿ ಸರಳ ಪಿಂಚಣಿ ಯೋಜನೆ ವಿವರದ ಪ್ರಕಾರ, 40ರಿಂದ 80 ವರ್ಷ ವಯಸ್ಸಿನವರು ವಾರ್ಷಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ಇದೊಂದು ಸಿಂಗಲ್ ಪ್ರೀಮಿಯಂ ಯೋಜನೆಯಾಗಿದೆ. ಇದು ವಾರ್ಷಿಕ ಶೇಕಡಾ 5ರಷ್ಟು ಖಾತರಿಪಡಿಸಿದ ಬಡ್ಡಿ ಪ್ರಯೋಜನವನ್ನು ಆರಂಭದಿಂದಲೇ ನೀಡಲಿದೆ. ಈ ಯೋಜನೆಯಡಿ ಪಾಲಿಸಿದಾರರು ಪ್ರತಿ ತಿಂಗಳು, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿ ಪಡೆಯಬಹುದಾಗಿದೆ.
ಎಲ್ಐಸಿ ವೆಬ್ಸೈಟ್ನಲ್ಲಿ ವಿವರಿಸಿರುವ ಪ್ರಕಾರ, ಪಾಲಿಸಿದಾರರು ಕನಿಷ್ಠ 1,000 ರೂ. ತಿಂಗಳ ಪಿಂಚಣಿ ಅಥವಾ ವಾರ್ಷಿಕ 12,000 ಪಿಂಚಣಿ ಯೋಜನೆಯನ್ನು ಆಯ್ದುಕೊಳ್ಳಬಹುದಾಗಿದೆ. ಈ ಯೋಜನೆಗಾಗಿ ಪಾಲಿಸಿದಾರರು ಒಂದು ಬಾರಿಗೆ 2.50 ಲಕ್ಷ ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. 10 ಲಕ್ಷ ರೂ. ಮೊತ್ತದ ಪ್ರೀಮಿಯಂ ಪಾವತಿಸಿದರೆ ವಾರ್ಷಿಕ 50,250 ರೂ. ಪಿಂಚಣಿ ಪಡೆಯಬಹುದಾಗಿದೆ. ಇದೇ ರೀತಿ ವಾರ್ಷಿಕ 1 ಲಕ್ಷ ರೂ. ಪಿಂಚಣಿ ಪಡೆಯಲು ಪಾಲಿಸಿದಾರರು ಒಂದು ಬಾರಿಗೆ 20 ಲಕ್ಷ ರೂ. ಪ್ರೀಮಿಯಂ ಪಾವತಿಸಬೇಕು.
ಈ ಯೋಜನೆಯ ಹೆಸರು ಆಧಾರ್ ಶಿಲಾ ಯೋಜನೆ (Aadhaar Shila Scheme). ಇದರಲ್ಲಿ ಮಹಿಳೆಯರು ಅತಿ ಕಡಿಮೆ ಹೂಡಿಕೆಯಲ್ಲಿ ಬೃಹತ್ ನಿಧಿಯನ್ನು ಪಡೆಯಬಹುದು. ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ.
ಎಲ್ಐಸಿಯ ಈ ಯೋಜನೆಯಲ್ಲಿ 8 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನೀವು ದಿನಕ್ಕೆ 29 ರೂಪಾಯಿ ಠೇವಣಿ ಮಾಡಬೇಕು. ನೀವು ಮೆಚ್ಯೂರಿಟಿಯಲ್ಲಿ 4 ಲಕ್ಷ ರೂ.ಗಳನ್ನು ಪಡೆಯಬಹುದು.
20 ವರ್ಷಗಳವರೆಗೆ ತಿಂಗಳಿಗೆ 899 ರೂ. (ದಿನಕ್ಕೆ 29 ರೂ.) ಠೇವಣಿ ಇಟ್ಟರೆ, ಮೊದಲ ವರ್ಷದಲ್ಲಿ ಕೇವಲ 10,959 ರೂ. 20 ವರ್ಷ ಠೇವಣಿ ಇಟ್ಟರೆ 20 ವರ್ಷಗಳಲ್ಲಿ ಒಟ್ಟು 2 ಲಕ್ಷ 14 ಸಾವಿರ ರೂ. ಇದರಲ್ಲಿ ನೀವು ಪಾಲಿಸಿಯ ಮುಕ್ತಾಯದ ಮೇಲೆ 3 ಲಕ್ಷ 97 ಸಾವಿರ ರೂಪಾಯಿಗಳನ್ನು ಪಡೆಯುತ್ತೀರಿ. ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ, ಮಹಿಳೆಯರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು ಮತ್ತು 20 ವರ್ಷಗಳ ನಂತರ ಅವರು ದೊಡ್ಡದನ್ನು ಪಡೆಯುತ್ತಾರೆ.