ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಇಂದು ನಡೆಯುತ್ತಿದೆ. ಬಿಗ್ ಬಾಸ್ ಶೋ ಗೆಲ್ಲುವುದು ಯಾರು ಎನ್ನುವ ಕುತೂಹಲ ಜನರಲ್ಲಿದೆ. ಈ ಸೀಸನ್ ನಲ್ಲಿ ಹನುಮಂತ ಗೆಲ್ಲಬಹುದು ಅಥವಾ ತ್ರಿವಿಕ್ರಂ ಗೆಲ್ಲೆಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ನಿಜಕ್ಕೂ ಗೆಲ್ಲುವುದು ಯಾರು ಎನ್ನುವ ವಿಷಯ ಗೊತ್ತಾಗುವುದು ನಾಳೆ. ಇಂದಿನ ಸಂಚಿಕೆಯಲ್ಲಿ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಹೊರಗಡೆ ಬರಲಿದ್ದು, ಅವರು ಯಾರು ಎಂದು ಈಗ ಸುದ್ದಿ ಹೊರಬಂದಿದೆ. ನಿಜಕ್ಕೂ ಆ ಸ್ಪಿರ್ಧಿ ಯಾರು ಎಂದು ತಿಳಿಸುತ್ತೇವೆ ನೋಡಿ..
ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವೀಕ್ ನಲ್ಲಿ 6 ಜನ ಸ್ಪರ್ಧಿಗಳಿದ್ದಾರೆ. ರಜತ್, ತ್ರಿವಿಕ್ರಂ, ಮೋಕ್ಷಿತಾ, ಭವ್ಯ ಗೌಡ, ಹನುಮಂತ ಹಾಗೂ ಉಗ್ರಂ ಮಂಜು ಇದ್ದಾರೆ. ಈ 6 ಜನರಲ್ಲಿ ಒಬ್ಬರು ಬಿಗ್ ಬಾಸ್ ಟ್ರೋಫಿ ಹಾಗೂ 50 ಲಕ್ಷ ಹಣವನ್ನು ಗೆಲ್ಲಲಿದ್ದಾರೆ. ಹೊರಗಡೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಜನಪ್ರಿಯತೆ ಇದೆ. ಇಂದಿನ ಫಿನಾಲೆ ಸಂಚಿಕೆಯಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗುವುದು ಖಂಡಿತ. ಆ ಸ್ಪರ್ಧಿ ಯಾರು ಎಂದು ಇದೀಗ ತಿಳಿದುಬಂದಿದ್ದು, ಆ ಸ್ಪರ್ಧಿ ಮತ್ಯಾರು ಅಲ್ಲ, ಗೀತಾ ಧಾರವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡು, ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವರೆಗು ಬಂದಿರುವ ಭವ್ಯ ಅವರು.

ಹೌದು, 6ನೇ ಸ್ಥಾನಕ್ಕೆ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿರುವ ಸ್ಪರ್ಧಿ ಭವ್ಯ ಗೌಡ. ಇವರು ಫಿನಾಲೆ ವರೆಗು ಬಂದಿರುವುದು ಹೊರಗಿನ ಜನರಿಗೆ ಅಷ್ಟೇನು ಇಷ್ಟ ಆಗಿರಲಿಲ್ಲ. ಬಹಳ ಹಿಂದೆಯೇ ಇವರು ಎಲಿಮಿನೇಟ್ ಆಗಬೇಕು ಎನ್ನುವುದು ನೆಟ್ಟಿಗರೇ ಅಭಿಪ್ರಾಯ ಆಗಿತ್ತು. ಹಾಗಿದ್ದರೂ ಫಿನಾಲೆ ವರೆಗು ಬಂದಿದ್ದ ಭವ್ಯ ಇದೀಗ 6ನೇ ಸ್ಥಾನಕ್ಕೆ ಎಲಿಮಿನೇಟ್ ಆಗಿದ್ದಾರೆ. ಭವ್ಯ ಅವರಿಗೆ ಬಿಗ್ ಬಾಸ್ ಒಳ್ಳೆಯ ಪ್ಲಾಟ್ ಫಾರ್ಮ್ ಆಗಿದ್ದರು ಸಹ ಇವರು ಸದಾ ತ್ರಿವಿಕ್ರಂ ಅವರ ಜೊತೆಗಿದ್ದು, ಸಮಯ ಹಾಳು ಮಾಡಿದ್ದು ಹಾಗೂ ಇನ್ನಿತರ ಕೆಲವು ವಿಚಾರಗಳಿಂದ ಭವ್ಯ ಅವರು ಹೊರಗಿನ ಜನರಿಗೆ ಅಷ್ಟೇನು ಇಷ್ಟ ಆಗಿರಲಿಲ್ಲ.
ಎಲಿಮಿನೇಟ್ ಆಗಿರುವ ಭವ್ಯ ಅವರನ್ನು ಹೊರತುಪಡಿಸಿ ಈಗ ಬಿಗ್ ಬಾಸ್ ಮನೆಯಲ್ಲಿ ಇನ್ನು 5 ಜನ ಸದಸ್ಯರು ಇದ್ದಾರೆ. ರಜತ್, ತ್ರಿವಿಕ್ರಂ, ಮಂಜು, ಮೋಕ್ಷಿತಾ ಹಾಗೂ ಹನುಮಂತ. ಹೊರಗಿನ ಜನರ ಸಪೋರ್ಟ್ ನೋಡಿದರೆ, ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಲು ಹನುಮಂತ ಅರ್ಹರು ಎನ್ನುವ ಮಾತು ಕೇಳಿಬರುತ್ತಿದೆ. ಹೊರಗಿನ ಜನರು ಹನುಮಂತ ಅವರ ಮುಗ್ಧತೆ, ಹಾಗೂ ಅವರ ಜಾಣತನ ಎಲ್ಲವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಹನುಮಂತ ಆಡುತ್ತಿದ್ದ ರೀತಿ ಸಹ ಜನರಿಗೆ ತುಂಬಾ ಇಷ್ಟವಾಗಿದೆ. ಇನ್ನು ರಜತ್ ಸಹ ಜನರಿಗೆ ತುಂಬಾ ಇಷ್ಟವಾಗಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದ ರಜತ್ ಇಷ್ಟು ದಿವಸ ಬಂದಿರುವುದು ಮೆಚ್ಚಬೇಕು.
ರಜತ್ ಎಲ್ಲಾ ರೀತಿಯಲ್ಲೂ ಜನರಿಗೆ ಮನರಂಜನೆ ನೀಡಿದ್ದಾರೆ. ಹಾಗೆಯೇ ಉಗ್ರಂ ಮಂಜು ಅವರು ಸಹ ಉತ್ತಮ ಸ್ಪರ್ಧಿ ಆಗಿದ್ದು, ಗೌತಮಿ ಅವರ ವಿಚಾರ ಬಿಟ್ಟರೆ ಬೇರೆ ರೀತಿಯಲ್ಲಿ ಇವರು ಜನರಿಗೆ ಇಷ್ಟವಾಗಿದ್ದಾರೆ. ಇನ್ನು ಮೋಕ್ಷಿತಾ ಅವರ ಸ್ವಾಭಿಮಾನ, ನೇರ ನಡೆ, ನೇರ ನುಡಿ ಇದೆಲ್ಲವೂ ಜನರಿಗೆ ತುಂಬಾ ಇಷ್ಟವಾಗಿದೆ. ಹಾಗಾಗಿ ಈ ಸೀಸನ್ ನಲ್ಲಿ ಗೆಲ್ಲುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಹನುಮಂತು ಗೆಲ್ಲುತ್ತಾರಾ ಅಥವಾ ತ್ರಿವಿಕ್ರಂ ಗೆಲ್ಲುತ್ತಾರಾ ಅಥವಾ ರಜತ್ ಗೆಲ್ಲುತ್ತಾರಾ ಅಥವಾ ಈ ಸೀಸನ್ ನಲ್ಲಿ ಮೋಕ್ಷಿತಾ ಗೆಲ್ಲುತ್ತಾರಾ? ಈ ಪ್ರಶ್ನೆಗೆ ಉತ್ತರ ಸಿಗುವುದಕ್ಕೆ ನಾಳೆಯ ವರೆಗು ಕಾಯಬೇಕಿದೆ.