ನಟ ದರ್ಶನ್ ಅವರು ರೇಣುಕಾಸ್ವಾಮಿ ಸ್ವಾಮಿ ಕೇಸ್ ನಲ್ಲಿ ಅರೆಸ್ಟ್ ಆಗಿ, ಸುಮಾರು 6 ತಿಂಗಳುಗಳ ಕಾಲ ಜೈಲಿನಲ್ಲಿ ಇದ್ದ ವಿಷಯ ನಮಗೆಲ್ಲಾ ಗೊತ್ತೇ ಇದೆ. ಮೊನ್ನೆಯಷ್ಟೇ ದರ್ಶನ್ ಅವರಿಗೆ ಜಾಮೀನು ಸಿಕ್ಕಿತು. ಅವರೊಬ್ಬರಿಗೆ ಮಾತ್ರವಲ್ಲ ಕೇಸ್ ನಲ್ಲಿ ಒಳಗೆ ಹೋಗಿದ್ದ ಎಲ್ಲರಿಗೂ ಸಹ ಕೋರ್ಟ್ ಇಂದ ಜಾಮೀನು ಸಿಕ್ಕಿತು. ಎಲ್ಲರೂ ಈಗ ಹೊರಗೆ ಬಂದಿದ್ದಾರೆ. ಆದರೆ ದರ್ಶನ್ ಅವರಿಗೆ ಶ್ಯೂರಿಟಿ ಕೊಟ್ಟಿದ್ದು ಯಾರು? ಪವಿತ್ರಾ ಗೌಡ ಅವರಿಗೆ ಶ್ಯೂರಿಟಿ ಕೊಟ್ಟಿದ್ದು ಯಾರು? ಈ ಎಲ್ಲಾ ಪ್ರಶ್ನೆಗಳು ಸಹ ಕೇಳಿಬಂದಿದ್ದು, ಪವಿತ್ರಾ ಗೌಡ ಅವರಿಗೆ ಶ್ಯೂರಿಟಿ ಕೊಟ್ಟಿದ್ದು ಎನ್ನುವ ಪ್ರಶ್ನೆಗೆ ಇಂದು ಉತ್ತರ ತಿಳಿಸುತ್ತೇವೆ ನೋಡಿ..

ಈ ಕೇಸ್ ನಲ್ಲಿ ನಟ ದರ್ಶನ್ ಅವರು ಎ2 ಆಗಿದ್ದರು, ಇನ್ನು ಪವಿತ್ರಾ ಗೌಡ ಎ1 ಆಗಿದ್ದರು. ಇವರಿಬ್ಬರ ಜೊತೆಗೆ ಇನ್ನು ಕೆಲವು ಜನರು ಕೂಡ ರೇಣುಕಾಸ್ವಾಮಿ ಕೇಸ್ ನಲ್ಲಿ ಬಂಧಿತ ರಾಗಿದ್ದರು. 5 ತಿಂಗಳಿಗಿಂತ ಹೆಚ್ಚಿನ ಕಾಲ ಇವರೆಲ್ಲರೂ ಜೈಲಿನಲ್ಲೇ ವಾಸ ಮಾಡಿದರು. ಇದೀಗ ಕೊನೆಗೂ ಎಲ್ಲರಿಗೂ ಜಾಮೀನು ಸಿಕಿದೆ. ನಟ ದರ್ಶನ್ ಅವರಿಗೆ ಒಂದೂವರೆ ತಿಂಗಳಿಗಿಂತ ಮೊದಲೇ ಮಧ್ಯಂತರ ಜಾಮೀನು ಸಿಕ್ಕಿತ್ತು. ದರ್ಶನ್ ಅವರಿಗೆ ವಿಪರೀತ ಬೆನ್ನು ನೋವು ಇರುವ ಕಾರಣಕ್ಕೆ, ಸರ್ಜರಿ ಮಾಡಿಸಬೇಕು ಎಂದು ಒಂದೂವರೆ ತಿಂಗಳ ಹಿಂದೆ ಜಾಮೀನು ಸಿಕ್ಕಿತ್ತು. ಈಗ ಎಲ್ಲರಿಗೂ ಕೂಡ ಜಾಮೀನು ಸಿಕ್ಕಿದೆ.
ಬಂಧಿತರಾಗಿದ್ದ ಎಲ್ಲರಿಗೂ ಈಗ ಕೋರ್ಟ್ ಇಂದ ಪೂರ್ತಿ ಜಾಮೀನು ಸಿಕ್ಕಿದ್ದು, ಎಲ್ಲರೂ ಈಗ ಸ್ವಾತಂತ್ರ್ಯರಾಗಿದ್ದಾರೆ. ನಟ ದರ್ಶನ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ಅವರು ಹೊರಗೆ ಬಂದು, ಬಿಜಿಎಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು, ಬಿಪಿ ವೇರಿಯೇಷನ್ ಆಗಿದ್ದ ಕಾರಣ ಅವರಿಗೆ ಸರ್ಜರಿ ಮಾಡಲು ಆಗಿರಲಿಲ್ಲ ಎನ್ನಲಾಗಿತ್ತು. ಆದರೆ ನಿನ್ನೆ ದರ್ಶನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸರ್ಜರಿ ಇಲ್ಲದೆಯೇ ಹೊರ ಬಂದಿದ್ದಾರೆ. ಜಾ*ಮೀನು ಕೂಡ ಸಿಕ್ಕಿದ್ದು, ಡಿಬಾಸ್ ದರ್ಶನ್ ಅವರ ಅಭಿಮಾನಿಗಳು ಸಂತೋಷ ಪಟ್ಟಿದ್ದಾರೆ. ದರ್ಶನ್ ಅವರ ಸಿನಿಮಾ ಶೂಟಿಂಗ್ ಯಾವಾಗ ಶುರುವಾಗುತ್ತದೆ ಎಂದು ಕಾಯುತ್ತಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನು ದರ್ಶನ್ ಅವರ ಜಾಮೀನಿಗೆ ಶ್ಯೂರಿಟಿ ಹಾಕಿದ್ದು ಯಾರು, ಪವಿತ್ರಾ ಗೌಡ ಜಾಮೀನಿಗೆ ಶ್ಯೂರಿಟಿ ಹಾಕಿದ್ದು ಯಾರು ಎನ್ನುವ ಪ್ರಶ್ನೆಗಳು ಸಹ ಶುರುವಾಗಿದೆ, ಅದಕ್ಕೆ ಉತ್ತರ ತಿಳಿಸುವುದಾದರೆ.. ನಟ ದರ್ಶನ್ ಅವರಿಗೆ ಶ್ಯೂರಿಟಿ ಕೊಟ್ಟಿದ್ದು ಯಾರು ಎನ್ನುವ ಪ್ರಶ್ನೆಯನ್ನು ಜಡ್ಜ್ ಎದುರು ಕೇಳಿದಾಗ, ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ್ ಅವರು ಮತ್ತು ನಟ ಧನವೀರ್ ಅವರು ಇಬ್ಬರು ಸಹ ಶ್ಯೂರಿಟಿ ನೀಡಿದ್ದು, ಇವರಿಬ್ಬರು ನೀಡಿರುವ ಶ್ಯೂರಿಟಿಯನ್ನು ಪರಿಗಣಿಸಬೇಕು ಎಂದು ಲಾಯರ್ ಅವರು ಜಡ್ಜ್ ಅವರ ಎದುರಲ್ಲಿ ಹೇಳಿದ್ದಾರೆ. ದರ್ಶನ್ ಅವರಿಗೆ ಅವರ ಇಬ್ಬರು ಆತ್ಮೀಯರು ಶ್ಯೂರಿಟಿ ನೀಡಿದ್ದಾರೆ.

ಪವಿತ್ರಾ ಗೌಡ ಅವರಿಗೆ ಇನ್ನು ಇಬ್ಬರು ಬೇರೆ ವ್ಯಕ್ತಿಗಳು ಶ್ಯೂರಿಟಿ ನೀಡಿದ್ದಾರೆ. ಒಬ್ಬ ಮಹಿಳೆ ಶ್ಯೂರಿಟಿ ನೀಡಿದ್ದು, ಅವರ ಹೆಸರು ತಿಳಿದುಬಂದಿಲ್ಲ. ಹಾಗೆಯೇ ತಲಗಟ್ಟಪುರಕ್ಕೆ ಸೇರಿದ ಮನಿಷ್ ಎನ್ನುವ ವ್ಯಕ್ತಿ ಒಬ್ಬರು ಬಂದು ಶ್ಯೂರಿಟಿ ನೀಡಿದ್ದಾರೆ. ಈ ವ್ಯಕ್ತಿ ತಮ್ಮ ಆಸ್ತಿಪತ್ರದ ಜೊತೆಗೆ ಬಂದು ಪವಿತ್ರ ಗೌಡ ಅವರಿಗೆ ಶ್ಯೂರಿಟಿ ನೀಡಿದ್ದಾರೆ. ಪವಿತ್ರ ಗೌಡ ಅವರಿಗೆ ಜಾಮೀನು ಸಿಕ್ಕಿದ್ದರು ಸಹ, 2 ದಿನಗಳ ನಂತರ ಅವರು ರಿಲೀಸ್ ಆಗಿದ್ದು. ಈಗ ಪವಿತ್ರಾ ಗೌಡ ಅವರು ಮನೆಗೆ ಹೋಗಿದ್ದಾರೆ. 6 ತಿಂಗಳ ನಂತರ ಎಲ್ಲರಿಗೂ ಕೂಡ ಈಗ ಕೇಸ್ ಇಂದ ಒಂದು ಹಂತಕ್ಕೆ ಬಿಡುಗಡೆ ಸಿಕ್ಕ ಹಾಗೆ ಆಗಿದೆ.