ಮನೆಯ ಮುಖ್ಯ ದ್ವಾರ ಚೆನ್ನಾಗಿ ಕಾಣಲು ಒಬ್ಬೊಬ್ಬರು ಒಂದೊಂದು ರೀತಿ ಟ್ರಿಕ್ ಅಥವಾ ಪ್ಲಾನ್ ಮಾಡುತ್ತಾರೆ. ವಿವಿಧ ರೀತಿಯ ವಸ್ತುಗಳನ್ನು ಅಲಂಕಾರಕ್ಕೆ ಹಾಕುತ್ತಾರೆ. ಕೆಲವರಿಗೆ ಮನೆಯ ಮುಖ್ಯ ಬಾಗಿಲಲ್ಲಿ ಗಿಡಗಳನ್ನು ಇಡಲು ಇಷ್ಟವಾದರೆ, ಇನ್ನು ಕೆಲವರು ಪೇಂಟಿಂಗ್ ಹಾಕಲು ಇಷ್ಟಪಡುತ್ತಾರೆ. ಅಷ್ಟೇ ಏಕೆ ಮನೆಯನ್ನು ಕೆಟ್ಟ ಕಣ್ಣುಗಳಿಂದ ರಕ್ಷಿಸಲು ಕೆಲವರು ಮನೆಯ ಮುಖ್ಯ ದ್ವಾರದಲ್ಲಿ ಉಪ್ಪಿನ ಕಟ್ಟು, ದೃಷ್ಟಿ ಬೊಟ್ಟು, ಮಂಗಳಕರ ಚಿಹ್ನೆ ಇತ್ಯಾದಿಗಳನ್ನು ನೇತುಹಾಕಲು ಅಥವಾ ಬರೆಯಲು ಇಷ್ಟಪಡುತ್ತಾರೆ. ನಿಮಗೆ ಗೊತ್ತಾ, ಕೆಲವರು ಮನೆಯ ಮುಖ್ಯ ದ್ವಾರದಲ್ಲಿ ಕನ್ನಡಿ ಹಾಕುತ್ತಾರೆ. ಇದರಿಂದ ಮನೆಯ ಮುಂಭಾಗ ಸುಂದರವಾಗಿ ಕಾಣುತ್ತದೆಯೇನೋ ಸರಿ, ಆದರೆ ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಕನ್ನಡಿ ಹಾಕುವುದು ಸರಿಯೇ? ಈ ಬಗ್ಗೆ ಜ್ಯೋತಿಷಿಗಳು ಏನು ಹೇಳುತ್ತಾರೆ ನೋಡೋಣ ಬನ್ನಿ…

ಹಿಂತಿರುಗುವ ಶಕ್ತಿಗಳು
ಕನ್ನಡಿಗೆ ಯಾವುದೇ ರೀತಿಯ ಶಕ್ತಿ ಡಿಕ್ಕಿ ಹೊಡೆದರೂ ಅದು ಹಿಂತಿರುಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ ಕನ್ನಡಿಯನ್ನು ಅಳವಡಿಸಿದರೆ ಯಾವುದೇ ನಕಾರಾತ್ಮಕ ಶಕ್ತಿಯು ಒಳಗೆ ಬರದಂತೆ ಹಿಂತಿರುಗುತ್ತದೆ ಸರಿ. ಜೊತೆಗೆ ಧನಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮನೆಯ ಮುಖ್ಯ ದ್ವಾರದಲ್ಲಿ ಕನ್ನಡಿ ಅಳವಡಿಸಬಾರದು.
ಎಲ್ಲಕ್ಕೂ ಅಡೆತಡೆ
ಮನೆಯ ಮುಖ್ಯ ದ್ವಾರದಲ್ಲಿ ಕನ್ನಡಿ ಇಡುವುದರಿಂದ ಅದು ಪ್ರಗತಿಯನ್ನು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅಷ್ಟೇ ಅಲ್ಲ, ಯಶಸ್ಸನ್ನು ಸಾಧಿಸುವಲ್ಲಿ ಅನೇಕ ರೀತಿಯ ಅಡೆತಡೆಗಳು ಉದ್ಭವಿಸುತ್ತವೆ. ಆದ್ದರಿಂದ ಮನೆಯ ಮುಖ್ಯ ಬಾಗಿಲಿಗೆ ಕನ್ನಡಿ ಅಳವಡಿಸುವುದನ್ನು ತಪ್ಪಿಸಬೇಕು. ಇನ್ನು ಮನೆಯ ಮುಖ್ಯ ಬಾಗಿಲ ಬಳಿ ಕನ್ನಡಿ ಇಡುವುದರಿಂದ ಮನೆಯ ಆರ್ಥಿಕ ಸ್ಥಿತಿ ಹದಗೆಡುತ್ತದೆ ಮತ್ತು ಬಡತನ ಮನೆಗೆ ಪ್ರವೇಶಿಸುತ್ತದೆ ಎಂಬ ನಂಬಿಕೆಯೂ ಇದೆ.
ಹೀಗೂ ಮಾಡಿದರೂ…
ಮತ್ತೆ ಕೆಲವರು ಮನೆಯ ಮುಖ್ಯ ಬಾಗಿಲಿಗೆ ಪ್ರತ್ಯೇಕ ಕನ್ನಡಿ ಅಳವಡಿಸುವುದಿಲ್ಲ. ಆದರೆ ಕನ್ನಡಿ ಇರುವ ಮನೆಯ ಮುಖ್ಯ ಬಾಗಿಲನ್ನು ಪಡೆಯುತ್ತಾರೆ. ಹೌದು, ಇದು ಮನೆಯ ಪ್ರವೇಶವನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಆದರೆ ವಾಸ್ತು ದೃಷ್ಟಿಯಿಂದ ನೋಡಿದರೆ, ಇದು ಮನೆಯಲ್ಲಿ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ ಮತ್ತು ಕುಟುಂಬದ ಶಾಂತಿಯನ್ನು ಕದಡುತ್ತದೆ. ಮನೆಯಲ್ಲಿ ಸದಾ ಆತಂಕದ ವಾತಾವರಣ ಇರುತ್ತದೆ ಎನ್ನಲಾಗಿದೆ.