ಹೋಳಿ ಹಬ್ಬದ ಪ್ರಯುಕ್ತ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ-20 ಫೈನಲ್ಗೆ ಮುನ್ನ ಕ್ರಿಕೆಟ್ ದೇವರು ಎಂದೇ ಪ್ರಸಿದ್ಧಿಯಾಗಿರುವ ಸಚಿನ್ ತೆಂಟೂಲ್ಕರ್ ಭಾರತದ ಮಾಸ್ಟರ್ಸ್ ತಂಡದ ಸಹ ಆಟಗಾರರೊಂದಿಗೆ ಹೋಳಿ ಆಚರಿಸಿದರು. ಈ ವೇಳೆ ಯುವರಾಜ್ ಸಿಂಗ್, ಅಂಬಟಿ ರಾಯುಡು ಅವರಿಗೆ ಪ್ರ್ಯಾಂಕ್ ಮಾಡುವ ಮೂಲಕ ಬಣ್ಣ ಹಚ್ಚಿ ಹೋಳಿ ಹಬ್ಬದ ಆಚರಣೆಯನ್ನು ಮತ್ತಷ್ಟು ರಂಗೇರಸಿದರು.
ಸಚಿನ್ ತೆಂಡೂಲ್ಕರ್ ನೇತೃತ್ವದಲ್ಲಿ ಸಹ ಆಟಗಾರರು ಒಂದೆಡೇ ಸೇರಿ ಹೋಳಿ ಆಚರಿಸುವ ವೀಡಿಯೋ ಸಾಮಾಜಿಕ ತಾಣದಲ್ಲಿ ಅಪ್ಲೋಡ್ಗೊಂಡು ಭಾರಿ ಲೈಕ್ಸ್, ವ್ಯೂಸ್ಗಳನ್ನು ಪಡೆದುಕೊಂಡಿದೆ. ಬನ್ನಿ ಆ ವೀಡಿಯೋದಲ್ಲಿ ಏನಿದೆ ಎಂದು ನೋಡಿ ಬರೋಣ…..

“ಕಳೆದ ರಾತ್ರಿ ಯುವರಾಜ್ ಸಿಂಗ್ ಸಿಕ್ಸರ್ಗಳನ್ನು ಬಾರಿಸಿ, ಈಗ ಮಲಗಿದ್ದಾರೆ. ಬನ್ನಿ ನಾವೆಲ್ಲಾ ಅವರಿಗೆ ಈ ಪಿಚ್ಕಾರಿ ಮೂಲಕ ಸಿಕ್ಸರ್ ಬಾರಿಸೋಣ” ಎಂಬ ಸಚ್ಚಿನ್ ಅವರ ಮಾತಿನ ಮೂಲಕವೇ ವೀಡಿಯೋ ಪ್ರಾರಂಭವಾಗುತ್ತದೆ. ಸಚ್ಚಿನ್ ಅವರ ಮುಂದಾಳತ್ವದಲ್ಲಿ ಒಂದಷ್ಟು ಮಂದಿ ಯುವರಾಜ್ ಸಿಂಗ್ ಉಳಿದುಕೊಂಡಿದ್ದ ರೂಮಿನೆಡೆಗೆ ಲಗ್ಗೆ ಇಟ್ಟಿದ್ದಾರೆ. ನಂತರ ರೂಮಿನ ಬಾಗಿಲನ್ನು ಬಡಿದು ಹೌಸ್ ಸ್ವೀಪಿಂಗ್ ಎಂದು ಕೂಗಿದ್ದಾರೆ. ಆ ಕಡೆ ನಿದ್ರಿಸುತ್ತಿದ್ದ ಯುವರಾಜ್ ಸಿಂಗ್ ಎದ್ದು ಬಂದು ಬಾಗಿಲನ್ನು ತೆರೆದಿದ್ದಾರೆ. ಬಾಗಿಲ ಮುಂದೆ ಜಮಾಯಿಸಿದ್ದ ಸಚಿನ್ ಸೇರಿದಂತೆ ಇತರರು ಹಿಂದುಮುಂದು ನೋಡದೆ ಯುವರಾಜ್ ಅವರಿಗೆ ಹೋಳಿಯಲ್ಲಿ ಮುಳುಗೇಳಿಸಿದರು. ಯುವರಾಜ್ ಸಿಂಗ್ ಸಹ ಹಿಂದೆ ಬೀಳದೆ ಎಲ್ಲರಿಗೂ ಬಣ್ಣ ಹಚ್ಚಿ ಸಂಭ್ರಮದಲ್ಲಿ ಪಾಲ್ಗೊಂಡರು.
ಇನ್ನು ಸಚಿನ್ ನೇತೃತ್ವದ ಪ್ರ್ಯಾಂಕ್ ತಂಡ ಇಲ್ಲಿಗೆ ಸುಮ್ಮನಾಗಲಿಲ್ಲ. ಯುವರಾಜ್ ಸಿಂಗ್ ನಂತರ ಮತ್ತೊಬ್ಬ ಆಟಗಾರನನ್ನು ಸಹ ಪ್ರ್ಯಾಂಕ್ ಮಾಡಲು ಮುಂದಾಯಿತು. ಅದರಂತೆ ಮಾಜಿ ಸಿಎಸ್ಕೆ ಆಟಗಾರ ಅಂಬಟಿ ರಾಯುಡು ಅವರು ಉಳಿದುಕೊಂಡಿರುವ ರೂಮಿಗೆ ತೆರಳಿ ಇಲ್ಲಿಯೂ ಸಹ ಡೋರ್ ನಾಕ್ ಮಾಡಿದ್ದಾರೆ. ರಾಯುಡು ಹೊರ ಬಂದ ತಕ್ಷಣ ಅವರಿಗೂ ಬಣ್ಣಗಳನ್ನು ಎರಚಿ ಸಚಿನ್ ಆದಿಯಾಗಿ ಎಲ್ಲರೂ ಬಣ್ಣಗಳನ್ನು ಹಚ್ಚಿ ಸಂಭ್ರಮಿಸಿದ್ದಾರೆ. ಈ ವೇಳೆ ಅಂಬಾಡಿ ಅವರು ಸಚ್ಚಿನ್ ತೆಂಡೂಲ್ಕರ್ ಅವರ ಕಾಲುಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಒಟ್ಟಾರೆ, ಕ್ರಿಕೆಟ್ ದೇವರ ಈ ವರ್ಶನ್ ಕ್ರಿಕೆಟ್ ಅಭಿಮಾನಿಗಳಿಗಂತು ಸಖತ್ ಮಜಾ ನೀಡಿದೆ. ಚಿಕ್ಕಮಕ್ಕಳಂತೆ ಸಂಗಡಿಗರೊಂದಿಗೆ ಹೋಳಿ ಹಬ್ಬವನ್ನು ಆಚರಿಸಿ ಕ್ರಿಕೆಟ್ ದಿಗ್ಗಜನ ಈ ರೂಪವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಇನ್ನು ಹೋಳಿ ಆಚರಣೆಗೂ ಮುನ್ನ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ-20 ಸೆಮಿಫೈನಲ್ನಲ್ಲಿ ಭಾರತೀಯ ಮಾಸ್ಟರ್ಸ್ ತಂಡವು ಆಸ್ಟ್ರೇಲಿಯಾ 94 ರನ್ಗಳ ಮೂಲಕ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತ್ತು.