ಮಳೆಗಾಲ ಬಂತೆಂದರೆ ಸಾಕು ಹಣ್ಣಗಳ ರಾಜ ಎನಿಸಿಕೊಂಡ ಮಾವಿಹಣ್ಣಿನದ್ದೇ ದರ್ಬಾರು. ಹಬ್ಬ, ಸಮಾರಂಭಗಳಲ್ಲಿ ಮಾವಿಕಾಯಿಯ ಖಾದ್ಯಗಳು ಇದ್ದೇ ಇರುತ್ತವೆ. ದಿನಾ ಒಂದೇ ಆಹಾರ ಸೇವಿಸಿ ಸುಸ್ತಾಗಿ ಹೋದವರಿಗೆ ಮತ್ತು ಹೊಸ ರೀತಿಯ ಖಾದ್ಯವನ್ನು ರುಚಿಸಲು ಬಯಸುವವರಿಗೆ ಈ ‘ಮ್ಯಾಂಗೋ ದಾಲ್’ ಸಕ್ಕತ್ ಇಷ್ಟವಾಗಬಹುದು. ವಪಾತಿ, ರೊಟ್ಟಿ, ಊಟದೊಂದಿಗೆ ಚಪ್ಪರಿಸಿ ತಿನ್ನುವಂತಹ ಈ ರುಚಿಯಾದ ‘ಮ್ಯಾಂಗೋ ದಾಲ್’ ಮಾಡುವ ಸುಲಭ ವಿಧಾನ ಇಲ್ಲಿದೆ.

ಹೆಚ್ಚಿನವರು ಇಲ್ಲಿಯವರೆಗೆ ಈ ಮ್ಯಾಂಗೋ ದಾಲ್ ತಿಂದಿರುವುದಿಲ್ಲ. ಹೆಚ್ಚಾಗಿ ಇದನ್ನು ಮಳೆಗಾಲದಲ್ಲಿ ಮಾಡುತ್ತಾರೆ. ಬಲಿತ ಮಾವಿನಕಾಯಿಂದ ಇದನ್ನು ಯಾರು ಬೇಕಾದರು ಸುಲಭವಾಗಿ ಮನೆಯಲ್ಲಿ ಮಾಡಬಹುದು. ಹಸಿ ಮಾವಿನ ರುಚಿ ಹಾಗೂ ಸುವಾನೆಯಿಂದ ಈ ಮ್ಯಾಂಗೋ ದಾಲ್ ಇನ್ನಷ್ಟು ಇಷ್ಟವಾಗುತ್ತದೆ. ಮಕ್ಕಳಿಗೆ, ದೊಡ್ಡವರಿಗೆ ಬಹಳಾ ಇಷ್ಟವಾಗುವ ಈ ಮ್ಯಾಂಗೋ ದಾಲ್ ಅನ್ನು ಮಳೆಗಾಲದಲ್ಲಿ ಒಮ್ಮೆಯಾದರು ಮಾಡಲೇ ಬೇಕು.

ಬೇಕಾಗುವ ಸಾಮಾಗ್ರಿಗಳು?
ಸಿಪ್ಪೆ ಸುಲಿದು ಚೌಕಾಕಾರದಲ್ಲಿ ಕಟ್ ಮಾಡಿದ ಮಾವಿನ ಹಣ್ಣು 1, ತೊಗರಿ ಬೇಳೆ 1 ಕಪ್, ಸಣ್ಣದಾಗಿ ಕತ್ತರಿಸಿದ ಟೊಮ್ಯಾಟೊ ಹಾಗೂ ಈರುಳ್ಳಿ 1, ಸಾಸಿವೆ 1 ಚಮಚ, ಜೀರಿಗೆ ಜೀಜ 1 ಚಮಚ, ಅರಿಶಿನ ಹುಡಿ 1 ಚಮಚ, ಮೆಣಸಿನ ಹುಡಿ 1 ಚಮಚ, ಕರಿಬೇವಿನ ಎಲೆಗಳು, 1 ಚಮಚ ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ?
ಮೊದಲು ತೊಗರಿ ಬೇಳೆಯನ್ನು ತೊಳೆದು ಪಾತ್ರಯಲ್ಲಿ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಪ್ರತ್ಯೇಕ ಪಾತ್ರೆ ಅಥವಾ ಕುಕ್ಕರ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ ಜೀಜ, ಕರಿಬೇವಿನ ಎಲೆ ಮತ್ತು ಜೀರಿಗೆ ಹಾಕಿ ಕ್ಷಣಕಾಲ ಹುರಿಯಿರಿ. ಅನಂತರ ಈರುಳ್ಳಿ ಹಾಗೂ ಟೊಮ್ಯಾಟೊ ಸೇರಿಸಿ ಹುರಿಯಿರಿ.ಈಗ ಇದಕ್ಕೆ ಅರಿಶಿನ ಹುಡಿ, ಮೆಣಸಿನ ಹುಡಿ ಹಾಗೂ ಕತ್ತರಿಸಿದ ಮಾವಿನಕಾಯಿ ಹೂಳುಗಳನ್ನು ಸೇರಿಸಿ ಬೇಯಲು ಬಿಡಿ.
ನಂತರ ಬೇಯಿಸಿದ ಬೇಳೆಯನ್ನು ಇದಕ್ಕೆ ಸುರಿದು ಚೆನ್ನಾಗಿ ಮಿಶ್ರಣ ಮಾಡಿ. ಅನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರು ಸೇರಿಸಿ.ನಂತರ 10 ನಿಮಿಷ ಬೇಯಿಸಿದರೆ ಸುವಾಸನೆ ಭರಿತ ‘ಮ್ಯಾಂಗೋ ದಾಲ್’ ರೆಡಿಯಾಗುತ್ತದೆ. ಇದನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ತಿನ್ನಬಹುದು.