ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಇತ್ತೀಚೆಗಷ್ಟೇ ಕೊಡವ ಸಂಪ್ರದಾಯದಂತೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಆ ಬಳಿಕ ಇವರಿಬ್ಬರೂ ಹನಿಮೂನ್ ಗಾಗಿ ಅಮೆರಿಕಾಕ್ಕೆ ಹಾರಿದ್ದಾರೆ. ಈ ನಡುವೆ ಹರ್ಷಿಕಾ ಅಮೆರಿಕಾದಲ್ಲಿ ಬಣ್ಣದ ಬಟ್ಟೆ ಧರಿಸಿ ಮಿಂಚಿರುವ ಕೆಲವು ಗ್ಲಾಮರಸ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಡ್ರನ್ ಡ್ರೆಸ್ ಜೊತೆಗೆ ಮಾಂಗಲ್ಯ ಧರಿಸಿರುವ ಈ ಫೋಟೋಗಳನ್ನು ಕಂಡು ನೆಟ್ಟಿಗರು ಬೇಷ್ ಎಂದಿದ್ದಾರೆ.

ವಿವಾಹದ ಬಳಿಕ ವೆಕೇಷನ್ಗಾಗಿ ಹರ್ಷಿಕಾ&ಭುವನ್ ದಂಪತಿ ಅಮೆರಿಕಾಗೆ ತೆರಳಿದ್ದಾರೆ. ಅಲ್ಲಿ ಫ್ಯಾಷನ್ ಶೋವೊಂದರಲ್ಲಿ ರ್ಯಾಪ್ ವಾಕ್ ಮಾಡಿದ ಬಳಿಕ ಕೆಲ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ರೆಡ್ ಕಲರ್ ಉಡುಗೆಯಲ್ಲಿ ಸಖತ್ ಬೋಲ್ಡ್ & ಗ್ಲ್ಯಾಮರಸ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಸುಂದರ ಫೋಟೋಗಳನ್ನು ಕಂಡಿರುವ ನೆಟ್ಟಿಗರು ನಟಿಯ ನಡೆಗೆ ಬೇಷ್ ಎಂದಿದ್ದಾರೆ. ಮಾಡ್ರನ್ ಡ್ರೆಸ್ ಧರಿಸಿದರೂ ಕೂಡ ಮಾಂಗಲ್ಯ ಧರಿಸಿದ ಕಾರಣ ಈ ಫೋಟೋಗಳು ಮೆಚ್ಚುಗೆಗೆ ಕಾರಣವಾಗಿದೆ.
12 ವರ್ಷಗಳ ತಮ್ಮ ಪ್ರೀತಿಗೆ ಆಗಸ್ಟ್ 24ರಂದು ಮದುವೆಯಾಗುವ ಮೂಲಕ ಫ್ಯಾನ್ಸ್ಗೆ ಹರ್ಷಿಕಾ-ಭುವನ್ ಗುಡ್ ಅಧಿಕೃತ ಮುದ್ರೆ ಒತ್ರಿದ್ದಾರೆ. ಕೊಡವ ಪದ್ಧತಿಯಂತೆ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಿದ್ದಾರೆ. ಭುವನ್ ನಟನೆ- ನಿರ್ದೇಶನದ ಹೊಸ ಸಿನಿಮಾಗೆ ಹರ್ಷಿಕಾ ಪೂಣಚ್ಚ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ.