ಬಿಗ್ ಬಾಸ್ ಕನ್ನಡ ಸೀಸನ್ 11ರ ಪ್ರಯಾಣ ಇದೀಗ 90ದಿನಗಳ ಗಡಿ ದಾಟಿದೆ. ಫಿನಾಲೆ ನಡೆಯೋಕೆ ಉಳಿದಿರುವುದು ಇನ್ನು ಕೆಲವೇ ಕೆಲವು ದಿನಗಳು ಮಾತ್ರ. ಈ ವೇಳೆ ಬಿಗ್ ಬಾಸ್ ಶೋ ಬಗ್ಗೆ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ಹಾಗೆಯೇ ಮನೆಯೊಳಗೆ ನಡೆಯುತ್ತಿರುವ ಕೆಲವು ಮಾತುಕತೆ ಬಗ್ಗೆ ಹಲವು ಚರ್ಚೆಗಳು ನಡೆಯುತ್ತದೆ. ಇದೀಗ ಬಿಗ್ ಬಾಸ್ ಶೋನಲ್ಲಿ ಹನುಮಂತ ಕೊಟ್ಟಿರುವ ಬ್ಯುಸಿನೆಸ್ ಐಡಿಯಾ ಭಾರಿ ಚರ್ಚೆ ಆಗುತ್ತಿದೆ. ಈ ಐಡಿಯಾ ಕೇಳಿ ನೀವು ಕೂಡ ಇಂಥದ್ದೇ ಒಂದು ಬ್ಯುಸಿನೆಸ್ ಶುರು ಮಾಡಿದರೂ ಮಾಡಬಹುದು. ಹಾಗಿದ್ದಲ್ಲಿ ಯಾವ ಬ್ಯುಸಿನೆಸ್ ಇದು? ತಿಳಿಯೋಣ ಬನ್ನಿ..

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಶೈನ್ ಆಗುತ್ತಿರುವ ಸ್ಪರ್ಧಿಗಳಲ್ಲಿ ಹನುಮಂತ ಸಹ ಪ್ರಮುಖರು ಎಂದು ಹೇಳಿದರೆ ತಪ್ಪಲ್ಲ. ಸರಿಗಮಪ ಕಾರ್ಯಕ್ರಮದ ಮೂಲಕ ಫೇಮಸ್ ಆಗಿ, ವಿನ್ನರ್ ಆಗಿದ್ದ ಹನುಮಂತ ಈಗ ಬಿಗ್ ಬಾಸ್ ಶೋ ಮೂಲಕ ಕೂಡ ಜನರಿಗೆ ಇಷ್ಟವಾಗುತ್ತಿದೆ. ಮುಗ್ಧತೆಯ ಜೊತೆಗೆ ಚಾಣಾಕ್ಷತನವನ್ನು ಸಹ ಹೊಂದಿರುವ ಹನುಮಂತ ಎಲ್ಲರಿಗೂ ತುಂಬಾ ಇಷ್ಟವಾಗುತ್ತಾನೆ. ಇತ್ತೀಚಿನ ಸಂಚಿಕೆಯಲ್ಲಿ ಹನುಮಂತ ಕೊಟ್ಟಿರುವ ಬ್ಯುಸಿನೆಸ್ ಐಡಿಯಾ ಭಾರಿ ಪಾಪ್ಯುಲರ್ ಆಗಿದೆ. ಇದನ್ನು ಹೇಳಿದರೆ, ನೀವು ಸಹ ಹೊಟ್ಟೆ ನೋವು ಬರುವಷ್ಟು ನಕ್ಕು ಬಿಡುತ್ತೀರಿ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹನುಮಂತ, ಧನರಾಜ್, ಐಶ್ವರ್ಯ ಎಲ್ಲರೂ ಕೂತು ಮಾತನಾಡೋವಾಗ ಶ್ವಾನಗಳ ವಿಚಾರ ಬರುತ್ತದೆ. ಐಶ್ವರ್ಯ ಅವರ ಮನೆಯಲ್ಲಿ ಸಿಂಬಾ ಎನ್ನುವ ಮುದ್ದಿನ ಶ್ವಾನವಿದೆ, ಅದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಐಶ್ವರ್ಯ ಹೇಳಿದರು. ಆಗ ಹನುಮಂತ, ಸಿಂಬಾಗೆ ನೀವು ಸ್ನಾನ ಮಾಡಿಸುತ್ತೀರಾ ಎಂದು ಕೇಳಿದರು, ಅದಕ್ಕೆ ಐಶ್ವರ್ಯ, ಸ್ನಾನ ಮಾಡಿಸುವಷ್ಟು ನನಗೆ ಟೈಮ್ ಇರೋದಿಲ್ಲ. ಅದಕ್ಕೆ ಮನೆಗೆ ಜನ ಬಂದು ಅವನಿಗೆ ಸ್ನಾನ ಮಾಡಿಸುತ್ತಾರೆ. ಒಂದು ಸಾರಿ ಸ್ನಾನ ಮಾಡಿಸೋಕೆ 1200 ರೂಪಾಯಿ ಕೊಡಬೇಕು ಎಂದು ಹೇಳುತ್ತಾರೆ. ಈ ಮಾತನ್ನ ಕೇಳಿ ಹನುಮಂತ ಶಾಕ್ ಆಗುತ್ತಾರೆ. ಒಂದು ನಾಯಿಗೆ ಸ್ನಾನ ಮಾಡಿಸೋಕೆ 1200 ರೂಪಾಯಿ ಕೊಡ್ತಾರಾ ಎಂದು..

ಇದನ್ನೇ ಏಕೆ ಬ್ಯುಸಿನೆಸ್ ಮಾಡಬಾರದು ಎಂದು ಹನುಮಂತ ಮತ್ತು ಧನರಾಜ್ ಡಿಸ್ಕಸ್ ಮಾಡುತ್ತಾರೆ. ಒಂದು ನಾಯಿಗೆ ಸ್ನಾನ ಮಾಡಿಸಿದರೆ 1000, ದಿನಕ್ಕೆ 10 ನಾಯಿಗೆ ಸ್ನಾನ ಮಾಡಿಸಿದ್ರೆ ಸಾಕು ಅಲ್ಲೇ ದಿನಕ್ಕೆ 10 ಸಾವಿರ ಸಂಪಾದನೆ ಮಾಡಬಹುದು. ಈ ಬ್ಯುಸಿನೆಸ್ ಇಂದ ಲಾಭ ಪಡೆಯಬಹುದು ಎಂದಿದ್ದಾನೆ ಹನುಮಂತ. ರೋಡಲ್ಲಿ ಹೋಗ್ತಾ ನಾಯಿಗೆ ಸ್ನಾನ ಮಾಡಿಸ್ತೀವಿ ಅಂತ ಕಿರ್ಚ್ಕೊಂಡು ಹೋದ್ರೆ, ಒಂದಷ್ಟು ಜನ ಕರೆದು ಸ್ನಾನ ಮಾಡಿಸಿ ಅಂತಾರೆ. ಒಂದು ದಿನಕ್ಕೆ 10 ನಾಯಿಗೆ ಸ್ನಾನ ಮಾಡಿಸಿದ್ರೆ, ಆರಾಮಾಗಿ ಜೀವನ ಸಾಗಿಸೋಷ್ಟು ಸಂಪಾದನೆ ಆಗುತ್ತದೆ ಎಂದಿದ್ದಾನೆ ಹನುಮಂತ.
ಹನುಮಂತ ಕೊಟ್ಟಿರೋ ಈ ಬ್ಯುಸಿನೆಸ್ ಐಡಿಯಾ ನಗು ಬರಿಸಿದರು ಸಹ, ಒಳ್ಳೆಯ ಐಡಿಯಾ ಆಗಿದೆ. ಬಿಗ್ ಬಾಸ್ ಶೋನಲ್ಲಿ ಈಗ ಸ್ಟ್ರಾಂಗ್ ಸ್ಪರ್ಧಿ ಆಗಿರುವ ಹನುಮಂತ, ಫಿನಾಲೆಗೆ ಬರುವುದು ಪಕ್ಕಾ ಎನ್ನಲಾಗುತ್ತಿದೆ. ಇವರ ಜೊತೆಯಲ್ಲಿ ಫಿನಾಲೆಗೆ ಆಯ್ಕೆ ಆಗಬಹುದಾದ ಸ್ಪರ್ಧಿಗಳು ಬೇರೆ ಯಾರು ಎನ್ನುವ ಚರ್ಚೆ ಹೊರಗಡೆ ನಡೆಯುತ್ತಿದೆ. ಇನ್ನು ಬೇರೆ ಸ್ಪರ್ಧಿಗಳು ಸಹ ಉತ್ತಮ ರೀತಿಯಲ್ಲಿ ತಮ್ಮ ಆಟವನ್ನು ಆಡುತ್ತಿದ್ದಾರೆ. ಹಾಗಿದ್ದಲ್ಲಿ ಈ ವರ್ಷದ ಬಿಗ್ ಬಾಸ್ ಟೈಟಿಲ್ ಯಾರಿಗೆ ಒಲಿದು ಬರುತ್ತದೆ ಎಂದು ತಿಳಿಯಲು ಇನ್ನು ಕೆಲವೇ ಕೆಲವು ದಿನಗಳು ಕಾಯಬೇಕಿದೆ.