ಕನ್ನಡ ಕಿರುತೆರೆಯಲ್ಲಿ ಸದ್ಯ ಸಕತ್ ಸದ್ದು ಮಾಡುತ್ತಿರುವ ಕಾರ್ಯಕ್ರಮ ಬಿಗ್ ಬಾಸ್. ಕನ್ನಡದ ಬಿಗ್ ಬಾಸ್ ಸೀಸನ್ 9 ಶುರುವಾಗಿ ಇದೀಗ ಬಾರಿ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ 9 ಶುರುವಾಗಿ ಈಗಾಗಲೇ 3 ವಾರಗಳು ಕಳೆದು ಹೋಗಿದೆ. ಇನ್ನು ವಾರಾದ್ಯಂತ ಜನರನ್ನು ತಮ್ಮ ಆಟ ಹಾಗೂ ಇನ್ನಿತರ ಚಟುವಟಿಕೆಗಳಿಂದ ರಂಜಿಸಿ ಟಿಆರ್ ಪಿ ರೇಟಿಂಗ್ ನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮುನ್ನುಗ್ಗುತ್ತಿದೆ. ಇನ್ನು ವಾರದ ಅಂತ್ಯದಲ್ಲಿ ಕಿಚ್ಚ ಸುದೀಪ್ ಅವರ ನಿರೂಪಣೆಗಾಗಿಯೇ ಅದೆಷ್ಟೋ ಜನ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುವವರು ಸಹ ಇದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಿಚ್ಚು ಹತ್ತಿ ಉರಿಯುತ್ತಿತ್ತು. ಆದರೆ ಇದೀಗ ಇಷ್ಟು ಸೀಸನ್ ಗಳಲ್ಲಿ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ರೊಚ್ಚಿಗೆದಿದ್ದಾರೆ.

ಹೌದು ಸ್ಪರ್ಧಿಗಳು ವಾರ ಪೂರ್ತಿ ಏನೆಲ್ಲಾ ತಪ್ಪುಗಳನ್ನು ಮಾಡಿರುತ್ತಾರೆ ಅದನ್ನು ಸುದೀಪ್ ಅವರು ವಾರದ ಅಂತ್ಯ ಅಂದರೆ ಶನಿವಾರ ಹಾಗೂ ಭಾನುವಾರ ಅದನ್ನು ಸ್ಪರ್ಧಿಗಳಿಗೆ ತಿಳಿ ಹೇಳಿ ಅವರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡುತ್ತಿದ್ದರು. ಇನ್ನು ಇಷ್ಟು ದಿನ ಬಹಳ ಕೂಲ್ ಆಗಿದ್ದ ಕಿಚ್ಚ ಸುದೀಪ್ ಇದೀಗ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆ ಮೇಲೆ ತುಂಬಾ ಗರಂ ಆಗಿದ್ದಾರೆ. ಹೌದು ಕಿಚ್ಚ ಸುದೀಪ್ ಅವರು ಇದೀಗ ಮೊದಲ ಬಾರಿಗೆ ಆರ್ಯವರ್ಧನ್ ಗುರೂಜಿ ಮೇಲೆ ತುಂಬಾ ಬೇಸರಗೊಂಡಿದ್ದಾರೆ.
ಸದ್ಯ ಈ ಪ್ರೊಮೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಆರ್ಯವರ್ಧನ್ ಗುರೂಜಿ ಅವರು ಯಾವಾಗಲೂ ತಮ್ಮ ಹಾಸ್ಯ ಮಾತುಗಳ ಮೂಲಕ ಎಲ್ಲರಿಗೂ ಮನ ರಂಜನೆ ನೀಡುತ್ತಿದ್ದರು. ಇನ್ನು ಮೊದಲ ಬಾರಿಗೆ ಆರ್ಯವರ್ಧನ್ ಗುರೂಜಿ ಅವರ ಮಾತುಗಳು ಕಿಚ್ಚ ಸುದೀಪ್ ಅವರ ಕೋಪಕ್ಕೆ ಕಾರಣವಾಗಿದೆ. ಇನ್ನು ಸುದೀಪ್ ಅವರ ಈ ರೂಪ ಕಂಡು ಮನೆಯವರೆಲ್ಲಾ ಶಾಕ್ ಆಗಿದ್ದಾರೆ.
ಕಿಚ್ಚ ಸುದೀಪ್ ಪ್ರತಿ ವಾರದಂತೆ ಈ ವಾರ ಕೂಡ ಸ್ಪರ್ಧಿಗಳ ಜೊತೆಗೆ ಮಾತುಕಥೆ ನಡೆಸುತ್ತಿದ್ದರು. ಇನ್ನು ಇದೆ ವೇಳೆ ಸುದೀಪ್ ಅವರು ಮನೆಯ ಸ್ಪರ್ಧಿಗಳ ಅಭಿಪ್ರಾಯ ತಿಳಿಯಲು ನಿಮ್ಮ ಪ್ರಕಾರ ಈ ಸೀಸನ್ ನ ಟಾಪ್ 2 ಸ್ಪರ್ಧಿಗಳು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮನೆಯ ಎಲ್ಲಾ ಸ್ಪರ್ಧಿಗಳು ಎರಡು ಹೆಸರುಗಳನ್ನು ತಮ್ಮ ಕಾರಣ ಕೊಟ್ಟು ಸೂಚಿಸಿದ್ದಾರೆ. ಇನ್ನು ಇದೆ ವೇಳೆ ಆರ್ಯವರ್ಧನ್ ಗುರೂಜಿ ನನ್ನ ಪ್ರಕಾರ ಟಾಪ್ 2 ನಲ್ಲಿ ಅನುಪಮಾ ಗೌಡ ಅವರು ಇರುತ್ತಾರೆ ಎಂದಿದ್ದಾರೆ.
ಇನ್ನು ಬಿಗ್ ಬಾಸ್ ಅವರು ಅನುಪಮಾ ಅವರಿಗೆ ಫ್ಹೆವರ್ ಮಾಡುತ್ತಿದ್ದಾರೆ, ಇನ್ನು ಬಿಗ್ ಬಾಸ್ ಸ್ಕ್ರಿಪ್ಟೆಡ್ ಎನಿಸಿತ್ತದೆ ಎನ್ನುವ ರೀತಿ ಸುದೀಪ್ ಅವರ ಬಳಿ ಮಾತನಾಡಿದ್ದಾರೆ. ಇದಕ್ಕೆ ಸುದೀಪ್ ಗರಂ ಆಗಿದ್ದು, ನನ್ನ ಮುಂದೆ ಯಾವುದೇ ಕಾರಣಕ್ಕೂ ಬಿಗ್ ಬಾಸ್ ವೇದಿಕೆಗೆ ಮರ್ಯಾದೆ ಇಲ್ಲದಂತೆ ಮಾತನಾಡಬೇಡಿ, ಇಲ್ಲವಾದರೆ ಮುಂದಿನ ಜಗಳ ನಮ್ಮಿಬ್ಬರ ನಡುವೆ ಇರುತ್ತೆ ಎಂದು ಆರ್ಯವರ್ಧನ್ ಗುರೂಜಿ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸದ್ಯ ಈ ಪ್ರೊಮೋ ಬಿಡುಗಡೆಯಾಗಿದ್ದು, ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.