ಸಾಧನೆಗೆ ವಯಸ್ಸು ಎಂದಿಗೂ ಮಾನದಂಡವಲ್ಲ.ವಯಸ್ಸಾಗುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ. ಛಲವಿದ್ದರೆ ಏನನ್ನೂ ಬೇಕಿದ್ದರೂ ಸಾಧಿಸಬಹುದು. ಇದಕ್ಕೊಂದು ಉತ್ತಮ ಉದಾಹರಣೆ ಎಂಬಂತೆ 104 ನೇ ಇಳಿ ವಯಸ್ಸಿನಲ್ಲಿ 13,500 ಮೀಟರ್ ಎತ್ತರದಲ್ಲಿ ಸ್ಕೈಡೈವ್ ಮಾಡಿದ ಅಜ್ಜಿಯ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಜ್ಜಿಯ ಧೈರ್ಯವನ್ನು ಕೊಂಡಾಡಿದ್ದಾರೆ. ಎಲ್ಲೆಡೆಯಿಂದ ಅಜ್ಜಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಮೆರಿಕ ಮೂಲದ ಚಿಕಾಗೋದ ಡೊರೊಥಿ ಹಾಫ್ನರ್ ಎಂಬ 104 ವರ್ಷದ ಅಜ್ಜಿಯೇ ಈ ಛಲವಾದಿ. ಧೈರ್ಯದಿಂದ ತನ್ನ ಕನಸನ್ನು ಅಜ್ಜಿ ಇದೀಗ ನನಸು ಮಾಡಿಕೊಂಡಿದ್ದಾರೆ. ಕಳೆದ ಭಾನುವಾರ ಅಂದರೆ ಅಕ್ಟೋಬರ್ 1 ರಂದು ಚಿಕಾಗೋದಿಂದ ನೈಋತ್ಯಕ್ಕೆ 140 ಕಿಲೋಮೀಟರ್ ದೂರದಲ್ಲಿರುವ ಒಟ್ಟಾವಾದಲ್ಲಿ 13,500 ಅಡಿ ಎತ್ತರದಲ್ಲಿ ಸ್ಕೈ ಡೈವ್ ಮಾಡಿ ಅಜ್ಜಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಒಬ್ಬರು, ‘ಈ ವಯಸ್ಸಲ್ಲಿ ಸ್ಕೈ ಡೈವಿಂಗ್ ಮಾಡೋದು ಮಾಮೂಲಿ ವಿಷಯ ಅಲ್ಲ ಅಜ್ಜಿ.. ಸೂಪರ್’ ಎಂದರೆ, ಮತ್ತೊಬ್ಬರು ‘ಥ್ಯಾಂಕ್ಯೂ ಅಜ್ಜಿ, ಯುವ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಕ್ಕೆ’ ಎಂದು ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ನೆಟ್ಟಿಗರು ‘ವಾವ್.. ಸೂಪರ್, ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ, ಅಜ್ಜಿಯ ಸ್ಕೈ ಡೈವ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.