ಬಿಗ್ ಬಾಸ್ ಕನ್ನಡ ಸೀಸನ್11 11ನೇ ವಾರಕ್ಕೆ ಬಂದು ನಿಂತಿದೆ. ಒಬ್ಬೊಬ್ಬರಾಗಿ ಸ್ಪರ್ಧಿಗಳು ಎಲಿಮಿನೇಟ್ ಆಗಿ ಪ್ರತಿ ವಾರ ಹೊರಬರುತ್ತಿದ್ದಾರೆ. ಆದರೆ ಕಳೆದ ವಾರ ಎಲಿಮಿನೇಷನ್ ಆಗಿಲ್ಲ. ಚೈತ್ರಾ ಕುಂದಾಪುರ ಮತ್ತು ಐಶ್ವರ್ಯ ಇಬ್ಬರು ಸಹ ಮನೆಯಲ್ಲಿ ಒಂದು ರೂಮ್ ನಲ್ಲಿ ಇದ್ದರು, ಆದರೆ ಇಬ್ಬರು ಸಹ ಮತ್ತೆ ಬಿಗ್ ಬಾಸ್ ಮನೆಗೆ ಕಂಬ್ಯಾಕ್ ಮಾಡಿದ್ದಾರೆ. ಇಬ್ಬರು ಕೂಡ ಎಲಿಮಿನೇಟ್ ಆಗಿರಲಿಲ್ಲ. ಹಾಗಾಗಿ ಈ ವಾರ ಡಬಲ್ ಎಲಿಮಿನೇಷನ್ ಇರುತ್ತದೆ ಎನ್ನುವ ಮಾತುಗಳು ಕೇಳಿಬಂದಿದೆ. ಹಾಗೆಯೇ ಮನೆಯಿಂದ ಹೊರ ಹೋಗುವುದು ಯಾರು ಎನ್ನುವ ಕುತೂಹಲ ಕೂಡ ಶುರುವಾಗಿದೆ. ಈ ಸುದ್ದಿಗಳ ಬೆನ್ನಲ್ಲೇ ಯಾರು ಊಹೆ ಮಾಡಿರದ ಸುದ್ದಿ ಕೇಳಿಬಂದಿದೆ.

ಅದು ಏನು ಎಂದರೆ, ಗೋಲ್ಡ್ ಸುರೇಶ್ ಅವರು ಸೆಲ್ಫ್ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಗೋಲ್ಡ್ ಸುರೇಶ್ ಅವರು ಈಗಾಗಲೇ ಮನೆಯ ಕ್ಯಾಪ್ಟನ್ ಆಗಿದ್ದರು. ಅವರಿಗೆ ಇಮ್ಯುನಿಟಿ ಸಹ ಇತ್ತು, ಆದರೆ ಗೋಲ್ಡ್ ಸುರೇಶ್ ಅವರು ತಾವೇ ನಿರ್ಧಾರ ಮಾಡಿ, ಬಿಗ್ ಬಾಸ್ ಶೋ ಕ್ವಿಟ್ ಮಾಡಿ ಹೊರಬಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅದಕ್ಕೆ ಕಾರಣ ಅವರ ಮನೆಯ ಪರಿಸ್ಥಿತಿ ಎಂದು ಹೇಳಲಾಗುತ್ತಿದೆ. ಗೋಲ್ಡ್ ಸುರೇಶ್ ಅವರ ತಂದೆಯವರು ಇಹ*ಲೋಕ ತ್ಯಜಿಸಿದ್ದು, ಈ ವಿಚಾರ ಗೊತ್ತಾಗುತ್ತಿದ್ದ ಹಾಗೆ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಸೆಲ್ಫ್ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ಈ ಥರದ ಗಂಭೀರವಾದ ಸಮಸ್ಯೆ ಆಗಿರುವ ಕಾರಣ ಗೋಲ್ಡ್ ಸುರೇಶ್ ಅವರು ಬೇರೆ ದಾರಿ ಇಲ್ಲದೆಯೇ ಕಠಿಣ ನಿರ್ಧಾರ ತೆಗೆದುಕೊಂಡು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಗೋಲ್ಡ್ ಸುರೇಶ್ ಅವರ ಈ ನಿರ್ಧಾರದ ಬಗ್ಗೆ ಯಾರೂ ಬೇಸರ ಪಟ್ಟುಕೊಳ್ಳುವ ಹಾಗಿಲ್ಲ ಏಕೆಂದರೆ ಅವರ ಮನೆಯಲ್ಲಿ ಇರುವ ಪರಿಸ್ಥಿತಿಯೇ ಆ ರೀತಿ ಇದೆ. ಹಾಗಾಗಿ ಗೋಲ್ಡ್ ಸುರೇಶ್ ಅವರು ಈ ನಿರ್ಧಾರ ಮಾಡಿ, ಹೊರಬಂದಿದ್ದಾರೆ. 70 ದಿನಕ್ಕಿಂತ ಹೆಚ್ಚಿನ ಸಮಯ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯ ಒಳಗೆ ಉತ್ತಮವಾದ ಪ್ರದರ್ಶನ ನೀಡಿದ್ದರು, ಫಿನಾಲೆ ವರೆಗು ಬರಬೇಕು ಎಂದು ಆಸೆಯನ್ನು ಇಟ್ಟುಕೊಂಡಿದ್ದರು..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಆದರೆ ಯಾಕೋ ವಿಧಿಯ ನಿಯಮವೇ ಬೇರೆ ರೀತಿ ಇದ್ದ ಹಾಗೆ ಕಾಣುತ್ತಿದೆ. ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ಆಗಿರುವ ಈ ನೋವಿನ ಕಾರಣ ಅವರು ಹೊರಬರಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಈ ವಾರ ಡಬಲ್ ಎಲಿಮಿನೇಶನ್ ಎಂದು ಹೇಳಲಾಗಿದ್ದು, ಗೋಲ್ಡ್ ಸುರೇಶ್ ಅವರು ಸೆಲ್ಫ್ ಎಲಿಮಿನೇಟ್ ಆಗಿದ್ದು, ಎಲಿಮಿನೇಷನ್ ನಲ್ಲಿ ಶಿಶಿರ್ ಶಾಸ್ತ್ರಿ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಇದು ನಿಜವೋ ಅಥವಾ ಗಾಸಿಪ್ ಮಾತ್ರವೋ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಧಿಕೃತವಾಗಿ ಗೊತ್ತಾಗಬೇಕು ಎಂದರೆ ಇಂದಿನ ಸುದೀಪ್ ಅವರ ಸಂಚಿಕೆಯನ್ನು ನೋಡಬೇಕಿದೆ..

ಇನ್ನು ಬಿಗ್ ಬಾಸ್ ಶೋ ಇನ್ನೇನು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಶೋ ಮುಗಿಯಲಿದೆ, ಈ ಸೀಸನ್ ನಲ್ಲಿ ಫಿನಾಲೆ ತಲುಪುವ ಸ್ಪರ್ಧಿಗಳು ಯಾರಾಗಬಹುದು? ವಿನ್ನರ್ ಯಾರಾಗಬಹುದು ಎನ್ನುವ ಕುತೂಹಲ ಸಹ ಹೆಚ್ಚಾಗಿದೆ. ಒಟ್ಟಿನಲ್ಲಿ ದಿನೇ ದಿನೇ ರೋಚಕ ಟ್ವಿಸ್ಟ್ ಗಳನ್ನು ಪಡೆಯುತ್ತಿರುವ ಬಿಗ್ ಬಾಸ್ ಶೋ ವಿನ್ನರ್ ಯಾರಾಗುತ್ತಾರೆ ಎಂದು ಕಾದು ನೋಡಬೇಕಿಡ್. ಇನ್ನು ಇದು ಸುದೀಪ್ ಅವರ ಕೊನೆಯ ಸೀಸನ್ ಎಂದು ಕೂಡ ಹೇಳಲಾಗುತ್ತಿದ್ದು, ಮುಂದಿನ ಸೀಸನ್ ಕಥೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ, ಸುದೀಪ್ ಅವರೇ ಮುಂದುವರೆಯಲಿ ಎನ್ನುವುದು ಎಲ್ಲರ ಆಸೆ ಆಗಿದೆ..