ಬಿಗ್ ಬಾಸ್ ಶೋ ಮೂಲಕ ಸದ್ದು ಮಾಡಿದವರಲ್ಲಿ ಗೌತಮಿ ಜಾಧವ್ ಅವರು ಸಹ ಒಬ್ಬರು. ಗೌತಮಿ ಅವರು ಸತ್ಯ ಧಾರವಾಹಿ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಸತ್ಯ ಅಂದ್ರೆ ಖಡಕ್ ಸ್ಟೈಲ್, ಆ ಮಾತು ಎಲ್ಲವೂ ಜನರ ಫೇವರೆಟ್. ಸತ್ಯ ಪಾತ್ರದಲ್ಲಿ ಗೌತಮಿ ಅವರನ್ನು ಖಡಕ್ ಆಗಿ, ಬೋಲ್ಡ್ ಆಗಿ ನೋಡಿದ್ದ ವೀಕ್ಷಕರಿಗೆ ಬಿಗ್ ಬಾಸ್ ಮೂಲಕ ಗೌತಮಿ ಅವರ ನಿಜವಾದ ವ್ಯಕ್ತಿತ್ವ ಏನು ಎನ್ನುವುದು ಅರ್ಥವಾಯಿತು. ಮೊದಲಿಗೆ ಎಲ್ಲರೂ ಗೌತಮಿ ಅವರು ಫೇಕ್ ಮಾಡುತ್ತಿದ್ದಾರೆ ಎಂದುಕೊಂಡಿದ್ದಂತೂ ಹೌದು. ಆದರೆ 100 ದಿನಗಳ ಕಾಲ ಫೇಕ್ ಮಾಡೋಕೆ ಹೇಗೆ ಸಾಧ್ಯ? ಗೌತಮಿ ಅವರ ನಿಜವಾದ ವ್ಯಕ್ತಿತ್ವ ಇದೇ ಎನ್ನುವುದು ಅರಿವಾಯಿತು. ಇನ್ನು ಗೌತಮಿ ಹಾಗೂ ಮಂಜು ಅವರ ಫ್ರೆಂಡ್ಶಿಪ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇವರಿಬ್ಬರ ಫ್ರೆಂಡ್ಶಿಪ್ ಈಗಲೂ ಮುಂದುವರೆಯುತ್ತಿರುವುದು ಬಹಳ ವಿಶೇಷ.
ಬಿಗ್ ಬಾಸ್ ಮನೆಯ ಒಳಗೆ ಆರಂಭದ ದಿನಗಳಲ್ಲೇ ಗೌತಮಿ, ಮಂಜು ಹಾಗೂ ಮೋಕ್ಷಿತಾ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಮೋಕ್ಷಿತಾ ಹಾಗೂ ಮಂಜಣ್ಣನ ನಡುವೆ ಅಣ್ಣ ತಂಗಿ ಬಾಂಧವ್ಯವಾದರೆ ಗೌತಮಿ ಹಾಗೂ ಮಂಜು ಅವರದ್ದು ಫ್ರೆಂಡ್ಶಿಪ್. ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಇತ್ತು ಎಂದರೆ ಏನೇ ಆದರೂ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. ಕೆಲವೊಮ್ಮೆ ಜಗಳ, ಮನಸ್ತಾಪ ಇದೆಲ್ಲವೂ ಆಗುತ್ತಿದ್ದಂತೂ ನಿಜ. ಆದರೆ ಕೊನೆಗೆ ಇಬ್ಬರು ಜೊತೆಯಾಗಿಯೇ ಇರುತ್ತಿದ್ದರು. ಈ ಫ್ರೆಂಡ್ಶಿಪ್ ಇಂದಲೇ ಇಬ್ಬರಿಗೂ ತೊಂದರೆ ಕೂಡ ಆಗಿದ್ದು, ಎಂದು ಹೇಳಬಹುದು. ಸುದೀಪ್ ಅವರು ಸಹ ಇಬ್ಬರಿಗೂ ಈ ಫ್ರೆಂಡ್ಶಿಪ್ ಬಗ್ಗೆ ಅನೇಕ ಬಾರಿ ಬುದ್ಧಿವಾದ ಹೇಳಿದರು. ಆದರೆ ಯಾವುದು ಸಹ ಸರಿ ಹೋಗಲಿಲ್ಲ. ಇವರಿಬ್ಬರ ಫ್ರೆಂಡ್ಶಿಪ್ ಹಾಗೆ ಉಳಿದಿತ್ತು.

ಫ್ಯಾಮಿಲಿ ರೌಂಡ್ ನಲ್ಲಿ ಇಬ್ಬರ ಮನೆಯವರು ಬಂದು, ಆ ಸ್ನೇಹ ಬಿಟ್ಟು ನಿನ್ನ ಆಟ ನೀನು ಆಡಬೇಕು ಎಂದು ಹೇಳಿದ ನಂತರವೇ ಇವರಿಬ್ಬರಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದ್ದು. ಆದರೆ ಇಬ್ಬರು ಪೂರ್ತಿಯಾಗಿ ಅಂತು ಬದಲಾಗಲಿಲ್ಲ. ಬಿಗ್ ಬಾಸ್ ಮನೆಯ ಒಳಗೆ ಇದ್ದ ಇವರಿಬ್ಬರ ಸ್ನೇಹ ಹೊರಗಡೆ ಕೂಡ ಅದೇ ರೀತಿ ಇದೆ. ಬಿಗ್ ಬಾಸ್ ಇಂದ ಹೊರಬಂದಮೇಲೆ ಗೌತಮಿ, ಮಂಜು ಹಾಗೂ ಗೌತಮಿ ಅವರ ಪತಿ ಅಭಿಶೇಕ್ ಮೂವರು ಭೇಟಿಯಾಗಿದ್ದರು, ಆ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಸಹ ಶೇರ್ ಮಾಡಿಕೊಳ್ಳಲಾಗಿತ್ತು. ಆ ಸ್ನೇಹ ಈಗಲೂ ಸಹ ಮುಂದುವರೆಯುತ್ತಲೇ ಇದೆ. ಈ ಮೂವರು ಈಗ ಜೊತೆಯಾಗಿ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ದೇವಿಯ ಹೆಸರನ್ನು ಗೌತಮಿ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೇಳೋದನ್ನ ಕೇಳಿರುತ್ತೇವೆ.

ಪ್ರತಿದಿನ ವನದುರ್ಗೆ ದೇವಿಯ ಪೂಜೆ ಮಾಡುತ್ತಿದ್ದರು ಜಪ ಮಾಡುತ್ತಿದ್ದರು ಗೌತಮಿ. ಟಾಸ್ಕ್ ಇದ್ದಾಗ ಇವರು ಬೇಡಿಕೊಳ್ಳುತ್ತಿದ್ದು ಸಹ ಈ ದೇವಿಗೆ. ವನದುರ್ಗೆ, ವನದುರ್ಗಮ್ಮ ಎಂದು ಗೌತಮಿ ಅವರು ಹಲವು ಸಾರಿ ಹೇಳಿರೋದನ್ನ ಕೇಳಿರುತ್ತೇವೆ. ವನದುರ್ಗೆ ದೇವಿಯ ಭಕ್ತೆ ಆಗಿರುವ ಗೌತಮಿ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ನಂತರ ವನದುರ್ಗೆ ದೇವಸ್ಥಾನಕ್ಕೆ ಹೋಗಿಬಂದಿದ್ದರು. ಇದೀಗ ತಮ್ಮ ಗೆಳೆಯ ಮಂಜು ಅವರನ್ನು ಕೂಡ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಹೌದು, ಮಂಜು ಅವರಿಗೆ ಸಹ ಒಳ್ಳೆದಾಗ್ಲಿ ಎಂದು ಈ ಕೆಲಸ ಮಾಡಿದ್ದಾರೆ ಗೌತಮಿ. ಗೌತಮಿ ಅವರ ಗಂಡ ಅಭಿಷೇಕ್ ಅವರು ಸಹ ಜೊತೆಯಲ್ಲಿ ಹೋಗಿರುವುದು ಇನ್ನೊಂದು ವಿಶೇಷ ಆಗಿದೆ. ಈ ಫೋಟೋಸ್ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ.
ನಿಜವಾದ ಬೆಸ್ಟ್ ಫ್ರೆಂಡ್ ಅಂದ್ರೆ ಗೌತಮಿ ಅವರ ಹಾಗಿರಬೇಕು, ಹೊರಗಡೆ ಬಂದಮೇಲು ಮಂಜು ಅವರನ್ನು ಮರೆಯದೇ, ಅವರಿಗೆ ಒಳ್ಳೆದಾಗ್ಲಿ ಎಂದು ವನದುರ್ಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಗೌತಮಿ ಅವರ ಬಗ್ಗೆ ಪಾಸಿಟಿವ್ ಕಾಮೆಂಟ್ಸ್ ಗಳು ಕೇಳಿಬರುತ್ತಿದೆ. ಬೇರೆ ಸ್ಪರ್ಧಿಗಳು, ಬೇರೆ ರೀತಿಯಲ್ಲಿ ಸಮಯ ಕಳೆಯುತ್ತಿದ್ದರೆ, ಕೆಲವರು ಮಾತ್ರ ಈ ರೀತಿ ಫ್ಯಾಮಿಲಿ, ದೇವಸ್ಥಾನ ಎಂದು ಸಮಯ ಕಳೆಯುತ್ತಿದ್ದಾರೆ. ಇವರಿಬ್ಬರ ಫ್ರೆಂಡ್ಶಿಪ್ ಇದೇ ರೀತಿ ಮುಂದುವರೆಯಲಿ. ಯಾವಾಗಲೂ ಹೀಗೆ ಇರಲಿ ಅಂತಿದ್ದಾರೆ ಫ್ಯಾನ್ಸ್. ಮಂಜು ಅವರಿಗೆ ಸಿನಿಮಾದಲ್ಲಿ ನಟಿಸಲು ಇನ್ನು ಒಳ್ಳೆ ಅವಕಾಶಗಳು ಸಿಗಲಿ, ಗೌತಮಿ ಅವರಿಗೆ ಒಳ್ಳೇ ಪ್ರಾಜೆಕ್ಟ್ ಗಳು ಸಿಗಲಿ ಎಂದು ಹಾರೈಸೋಣ..