ಹಲವು ದಿನಗಳಿಂದ ವಿಶ್ವಕಪ್ ಗಾಗಿ ಭಾರತ ತಂಡದಲ್ಲಿ ನಾಲ್ಕನೆಯ ಹಾಗೂ ಐದನೇ ಸ್ಥಾನದಲ್ಲಿ ಬ್ಯಾಟ್ಸ್ ಮ್ಯಾನ್ ಗಳನ್ನು ಹುಡುಕಾಡಲಾಗುತ್ತಿದೆ, ಏಕೆಂದರೆ ಕೆ. ಎಲ್ ರಾಹುಲ್ ಹಾಗೂ ಶ್ರೇಯಶ್ ಅಯ್ಯರ್ ಇಬ್ಬರೂ ಫಿಟ್ ಆಗಿಲ್ಲ, ಈ ತಲೆನೋವು ಕೂಡ ಇನ್ನೂ ಕಮ್ಮಿಯಾಗಿಲ್ಲ ಆದರೆ ಹೊಸ ತಲೆನೋವು ಶುರುವಾಗಿದೆ, ಬ್ಯಾಟಿಂಗ್ ಪೊಜಿಷನ್ ನಂಬರ್ ಎರಡರಲ್ಲಿ ಶುಭ್ಮನ್ ಗಿಲ್ ಐ ಪಿ ಎಲ್ ನಂತರ ನಿರಂತರವಾಗಿ ಪ್ಲಾಪ್ ಆಗುತ್ತಿದ್ದಾರೆ,

ಶುಭ್ಮನ್ ಗಿಲ್ ಓಪನರ್ ಸ್ಥಾನವನ್ನು ಕೂಡ ಕಳೆದುಕೊಳ್ಳಬಹುದು, ವರ್ಲ್ಡ್ ಕಪ್ ಗೆ ಆರಂಭಿಕ ಜೋಡಿ ಬದಲಾಗಬಹುದು, ಆದರೆ ಎಲ್ಲರೂ ಶುಭ್ಮನ್ ಗಿಲ್ ತನ್ನ ಫಾರ್ಮ್ ಅನ್ನು ಮರಳಿ ಪಡೆಯಲು ಅದ್ಭುತವಾದ ಪ್ರದರ್ಶನ ನೀಡಲಿ ಎಂದು ಆಶಿಸುತ್ತಿದ್ದಾರೆ, ಅದಕ್ಕಾಗಿ ಮಾಜಿ ಆಟಗಾರ ಆಕಾಶ್ ಚೋಪ್ರಾ ಶುಭ್ಮನ್ ಗಿಲ್ ಬಗ್ಗೆ ಹೇಳಿಕೆ ನೀಡಿದ್ದಾರೆ ಅವರ ಹೇಳಿಕೆ ಹೀಗಿದೆ, ‘
ಐ ಪಿ ಎಲ್ 2003 ರ ನಂತರ WTC ಫೈನಲ್ ನಡೆಯುತ್ತದೆ, ಅಲ್ಲಿ ಕೂಡ ಶುಭ್ಮನ್ ಗಿಲ್ ರನ್ ಗಳಿಸಿಲ್ಲ ಅದರ ನಂತರ ಮತ್ತೆ ಎರಡು ಟೆಸ್ಟ್ ಪಂದ್ಯಗಳನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದಾರೆ, ಅಲ್ಲೂ ಕೂಡ ಶುಭ್ಮನ್ ಗಿಲ್ ರನ್ ಗಳಿಸಿಲ್ಲ, ನಂತರ ಮೂರು ಏಕದಿನ ಪಂದ್ಯಗಳಲ್ಲಿ ಒಂದೇ ಒಂದು ಅರ್ಧ ಶತಕ ಬರುತ್ತದೆ.
ನಂತರ ಟಿ 20 ಪಂದ್ಯಗಳು ಆಗಿದೆ, ಅಲ್ಲೂ ಕೂಡ ಸಿಂಗಲ್ ಡಿಜಿಟ್ ರನ್ ಮಾತ್ರ ಗಳಿಸಿದ್ದಾರೆ, ಈಗಾಗಲೇ ಐ ಪಿ ಎಲ್ ನಂತರ ಮೂರು ತಿಂಗಳಾಗಿದೆ, ಇನ್ನೂ ಕೂಡ ಅವರು ಲಯಕ್ಕೆ ವಾಪಸ್ ಮರಳಿಲ್ಲ, ದೊಡ್ಡ ರನ್ಸ್ ಬಂದಿಲ್ಲ ಅವರು ಇನ್ನೂ ಕುಗ್ಗುತ್ತಲೇ ಹೋಗುತ್ತಿದ್ದಾರೆ. ಅದೇ ರೀತಿ ಇಶಾನ್ ಕಿಶನ್ ನನ್ನು ಕೂಡ ಎರಡು ಪಂದ್ಯವನ್ನಾಡಿಸಿ ಮೂರನೇ ಪಂದ್ಯಕ್ಕೆ ಡ್ರಾಪ್ ಮಾಡಲಾಗಿದೆ, ಇದೇ ರೀತಿ ನಾವು ಶುಭ್ಮನ್ ಗಿಲ್ ಜೊತೆಗೂ ಕೂಡ ಮಾಡಬೇಕಾಗುತ್ತದೆ,
‘ನೀವು ವೈಟ್ ಬಾಲ್ ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಬಂದರೆ ರನ್ಸ್ ಗಳಿಸುವ ಅದ್ಭುತ ಚಾನ್ಸ್ ಬರುತ್ತದೆ, ನೀವು ನಂಬರ್ ಆರರಲ್ಲಿ ರನ್ಸ್ ಗಳಿಸದಿದ್ದರೆ ಅದನ್ನು ಇಗ್ನೋರ್ ಮಾಡಬಹುದು, ಆದರೆ ಆರಂಭಿಕರಾಗಿ ರನ್ ಗಳಿಸದಿದ್ದರೆ ಅದು ಹೈಲೆಟ್ ಆಗುತ್ತದೆ’ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ, ಹೌದು ಆಕಾಶ್ ಚೋಪ್ರಾ ಮಾತಿನಲ್ಲಿ ಸತ್ಯವಿದೆ, ಶುಭ್ಮನ್ ಗಿಲ್ ರನ್ ಗಳಿಸಬೇಕಿದೆ ಅವರ ಲಯ ಮತ್ತೆ ಮರಳಿ ಪಡೆಯಬೇಕಿದೆ, ಐ ಪಿ ಎಲ್ ನಂತರ ಅವರು ಒಂಬತ್ತು ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಹನ್ನೊಂದು ಇನ್ನಿಂಗ್ಸ್ ಗಳಲ್ಲಿ 21.80 ರ ಸರಾಸರಿಯಲ್ಲಿ 218ರನ್ ಮಾತ್ರ ಗಳಿಸಿದ್ದಾರೆ, ಅವರ ಸ್ಟ್ರೈಕ್ ರೇಟ್ ಕೂಡ 77.85 ಇದೆ, ಅದರಲ್ಲಿ ಒಂದು ಅರ್ಧ ಶತಕ ಮಾತ್ರ ಬಂದಿದೆ,
ಜೊತೆಗೆ ಬೇರೆ ಬೇರೆ ಫಾರ್ಮ್ಯಾಟ್ ಗಳನ್ನು ನೋಡುವುದಾದರೆ ಟಿ20 ಫಾರ್ಮ್ಯಾಟ್ ನಲ್ಲಿ ಮೂರು ಪಂದ್ಯಗಳಲ್ಲಿ ಬರೀ 16 ರನ್ ಮಾತ್ರ ಗಳಿಸಿದ್ದಾರೆ, ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಮೂರು ಪಂದ್ಯಗಳಲ್ಲಿ ಬರೀ 76 ರನ್ ಗಳಿಸಿದ್ದಾರೆ, ಆದರೆ ಏಕದಿನ ಫಾರ್ಮ್ಯಾಟ್ ನಲ್ಲಿ ಮೂರು ಪಂದ್ಯಗಳಲ್ಲಿ 126 ರನ್ ಗಳಿಸಿದ್ದಾರೆ, ಅಂದರೆ ಏಕದಿನ ಫಾರ್ಮ್ಯಾಟ್ ನಲ್ಲಿ ಮಾತ್ರ ಶುಭ್ಮನ್ ಗಿಲ್ ಉತ್ತಮ ಪ್ರದರ್ಶನ ಕೊಟ್ಟಿದ್ದಾರೆ, ಇದೇ ರೀತಿ ಶುಭ್ಮನ್ ಗಿಲ್ ನ ಫಾರ್ಮ್ ಮುಂದುವರೆದರೆ ಅವರನ್ನು ಕೂಡ ಟಿ ಟ್ವೆಂಟಿ ಟೀಂ ನಿಂದ ಹೊರ ಹಾಕಲಾಗಬಹುದು’ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.