ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಫೇಮಸ್ ಆದವರು ರಜತ್ ಕಿಶನ್, ಬಿಗ್ ಬಾಸ್ ಕನ್ನಡ ಸೀಸನ್ 10ರಿಂದ ಫೇಮಸ್ ಆದವರು ವಿನಯ್ ಗೌಡ. ಇವರಿಬ್ಬರು ಕೂಡ ಬೆಸ್ಟ್ ಫ್ರೆಂಡ್ಸ್, ಬಹಳ ವರ್ಷಗಳಿಂದ ಇವರಿಬ್ಬರೂ ಜೊತೆಯಾಗಿದ್ದಾರೆ. ಬೆಸ್ಟ್ ಫ್ರೆಂಡ್ಸ್ ಸಹ ಆಗಿದ್ದು, ಆಗಾಗ ಮೀಟ್ ಮಾಡುವುದು, ಎಂಜಾಯ್ ಮಾಡುವುದು ಎಲ್ಲವು ನಡೆಯುತ್ತದೆ. ಕಳೆದ ಬಾರಿ ಬಿಗ್ ಬಾಸ್ ನಲ್ಲಿ ವಿನಯ್ ಇದ್ದಾಗ, ರಜತ್ ಸಪೋರ್ಟ್ ಮಾಡಿದ್ದರು, ಹೊರಗಡೆ ವಿನಯ್ ಅವರ ಬಗ್ಗೆ ಮಾತನಾಡಿ, ವಿನಯ್ ತುಂಬಾ ಒಳ್ಳೆಯರು ಎಲ್ಲರೂ ವಿನಯ್ ಗೆ ಸಪೋರ್ಟ್ ಮಾಡಿ, ಎಲ್ಲರೂ ವಿನಯ್ ಗೆ ವೋಟ್ ಮಾಡಬೇಕು ಎಂದು ಕೇಳಿಕೊಂಡಿದ್ದರು ರಜತ್. ಆದರೆ ಇದೀಗ ಈ ಬೆಸ್ಟ್ ಫ್ರೆಂಡ್ ಗಳ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರಿಗೂ ಸಂಕಷ್ಟ ಎದುರಾಗಿದೆ. ಈ ವಿಚಾರದ ಬಗ್ಗೆ ಈಗ ಭಾರಿ ಚರ್ಚೆ ನಡೆಯುತ್ತಿದೆ ಎಂದು ನಮಗೆಲ್ಲಾ ಗೊತ್ತೇ ಇದೆ.

ವಿನಯ್ ಹಾಗೂ ರಜತ್ ಇಬ್ಬರು ಕೂಡ ಈಗ ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸ್ಸ್ ಗರ್ಲ್ಸ್ ಶೋನಲ್ಲಿ ಪಾಲ್ಗೊಂಡಿದ್ದಾರೆ. ಹುಡುಗರ ತಂಡದ ಕ್ಯಾಪ್ಟನ್ ವಿನಯ್ ಗೌಡ ಆಗಿದ್ದು, ಅವರ ತಂಡದಲ್ಲಿ ರಜತ್ ಕಿಶನ್ ಇದ್ದಾರೆ. ಇಬ್ಬರು ಕೂಡ ಒಂದೇ ತಂಡದಲ್ಲಿದ್ದು ಸಖತ್ ಮಸ್ತಿ ಮಾಡುತ್ತಿದ್ದಾರೆ. ಹುಡುಗಿಯರ ಟೀಮ್ ಗೆ ಸಖತ್ ಆಗಿ ಠಕ್ಕರ್ ಕೊಡುತ್ತಲಿದ್ದಾರೆ. ಇವರ ತಂಡ, ಈ ಶೋ ಎಲ್ಲವೂ ಚೆನ್ನಾಗಿಯೇ ಸಾಗುತ್ತಿದೆ. ಆದರೆ ವಿನಯ್ ಹಾಗೂ ರಜತ್ ವಿರುದ್ಧ ಈಗ ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಾಗಿದ್ದು, ಇವರಿಬ್ಬರ ವಿರುದ್ಧ ಎಫ್.ಐ.ಆರ್ ರಿಜಿಸ್ಟರ್ ಆಗಿದೆ. ಈ ರೀತಿ ಆಗಿರುವುದು ಇವರಿಬ್ಬರು ಮಾಡಿರುವ ಒಂದೇ ಒಂದು ರೀಲ್ಸ್ ಇಂದ. ರೀಲ್ಸ್ ನಲ್ಲಿ ಲಾಂಗ್ ಹಿಡಿದುಕೊಂಡಿದ್ದರು ಎನ್ನುವ ಕಾರಣಕ್ಕೆ ಈ ರೀತಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ದೂರನ್ನು ದಾಖಲು ಮಾಡಿಕೊಳ್ಳಲಾಗಿದೆ. ವಿಡಿಯೋದಲ್ಲಿ ಇಬ್ಬರು ಬಳಕೆ ಮಾಡಿರುವುದು ನಿಜವಾದ ಲಾಂಗ್ ಅಲ್ಲ, ಡ್ಯುಪ್ಲಿಕೇಟ್ ಲಾಂಗ್ ಆಗಿದೆ. ಆದರೆ ಈಗಿನ ಲಾ ಅನುಸಾರ, ಸೋಷಿಯಲ್ ಮೀಡಿಯಾದಲ್ಲಿ ಈ ಥರದ ಯಾವುದೇ ವಸ್ತುಗಳನ್ನು ಬಳಸಿ ರೀಲ್ಸ್ ಮಾಡುವ ಹಾಗಿಲ್ಲ, ಫೋಟೋಸ್ ಹಾಕುವ ಹಾಗಿಲ್ಲ ಎಂದು ಹೇಳಲಾಗಿದ್ದು, ಇದರಿಂದ ರಜತ್ ಹಾಗೂ ವಿನಯ್ ಇಬ್ಬರು ಕೂಡ ತೊಂದರೆಗೆ ಸಿಲುಕುಕೊಂಡಿದ್ದಾರೆ. ಎಫ್.ಐ.ಆರ್ ದಾಖಲಾಗಿದೆ ಎನ್ನುವ ಮಾಹಿತಿ ಅಷ್ಟೇ ಸಧ್ಯಕ್ಕೆ ಸಿಕ್ಕಿದ್ದು, ಮುಂದೆ ಇದೆಲ್ಲವೂ ಯಾವ ರೀತಿ ಆಗುತ್ತದೆ, ಹೇಗೆ ಇದರಿಂದ ಹೊರಗಡೆ ಬರುತ್ತಾರೆ ಎಂದು ಕಾದು ನೋಡಬೇಕಿದೆ..

ಇದೇ ವಿಚಾರಕ್ಕೆ ರಜತ್ ಅವರು ನಟ ದರ್ಶನ್ ಅವರ ಫ್ಯಾನ್ಸ್ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು ಎಂದು ಹೇಳಬಹುದು. ಬಿಗ್ ಬಾಸ್ ಮೂಲಕ ಫೇಮಸ್ ಆಗಿದ್ದರು ರಜತ್, 50 ದಿನಗಳ ನಂತರ ಬಿಗ್ ಬಾಸ್ ಗೆ ಬಂದ ರಜತ್, ಫಿನಾಲೆ ತಲುಪಿ ಟಾಪ್ 3ನೇ ಸ್ಪರ್ಧಿಯಾಗಿ, ಎರಡನೇ ರನ್ನರ್ ಅಪ್ ಆಗಿ ಹೊರಬಂದರು. ಒಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಇಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದು, ಶೋನಲ್ಲಿ ಇದ್ದು, ಫಿನಾಲೆ ತಲುಪಿದ್ದು ಇದೇ ಮೊದಲು ಎಂದು ಹೇಳಿದರು ತಪ್ಪಲ್ಲ. ರಜತ್ ಹವಾ ಅಷ್ಟು ಜೋರಾಗಿತ್ತು. ಇದೆಲ್ಲ ಒಂದು ಕಡೆಯಾದರೆ ರಜತ್ ಜನರಿಗೆ ಹೆಚ್ಚು ಇಷ್ಟವಾಗಿದ್ದು ಅವರು ಡಿಬಾಸ್ ಫ್ಯಾನ್ ಅನ್ನೋ ಕಾರಣಕ್ಕೆ. ದರ್ಶನ್ ಅವರ ಫ್ಯಾನ್ಸ್ ರಜತ್ ಅವರಿಗೆ ಸಪೋರ್ಟ್ ಮಾಡುತ್ತಿದ್ದರು. ರಜತ್ ಅವರು ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ಕೂಡ ತಾವು ದರ್ಶನ್ ಅವರ ಫ್ಯಾನ್ ಎಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ಮನೆಯ ಒಳಗೆ ದರ್ಶನ್ ಅವರ ಹಾಡನ್ನು ಕೂಡ ಹಾಡಿದ್ದು ವಿಶೇಷ.
ಅಭಿಮಾನಿಗಳಿಗೆ ಇದು ಬಹಳ ಇಷ್ಟವಾಗಿತ್ತು. ಅಷ್ಟೇ ಅಲ್ಲ ರಜತ್ ಹಲವು ಬಾರಿ ತಾವು ಪಕ್ಕಾ ಡಿಬಾಸ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ದರ್ಶನ್ ಅವರಿಗೆ ಸದಾ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ದರ್ಶನ್ ಅವರಿಗೆ ಕಳೆದ ವರ್ಷ ತೊಂದರೆ ಆದಾಗಲೂ ಸಹ ಅವರ ಜೊತೆಗೆ ನಿಂತಿದ್ದರು ರಜತ್. ಇಂಥ ರಜತ್ ಅವರು ಇದೀಗ ಡಿಬಾಸ್ ಫ್ಯಾನ್ಸ್ ಇಂದ ಬೈಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಆ ರೀಲ್ಸ್ ನಲ್ಲಿ, ದರ್ಶನ್ ಅವರು ಕರಿಯ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸ್ಟೈಲ್ ನಲ್ಲಿ ರಜತ್ ಅವರ ಬಟ್ಟೆ ಇದೆ. ರಜತ್ ಅವರು ಶರ್ಟ್ ಪ್ಯಾಂಟ್ ಹಾಗೂ ಶೂ ಧರಿಸಿದ್ದು, ಇದನ್ನು ದರ್ಶನ್ ಅವರ ಫ್ಯಾನ್ ಎಂದು ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಷರ್ಟ್ ಮೇಲೆ ಡಿಬಾಸ್ ಎಂದು ಬರೆಯಲಾಗಿದೆ.
ಪ್ಯಾಂಟ್ ಮೇಲೆ ದರ್ಶನ್ ಅವರ ಸಿನಿಮಾಗಳ ಹೆಸರನ್ನು ಬರೆಯಲಾಗಿದೆ. ಮಂಡ್ಯ, ಅಯ್ಯ, ಶಾಸ್ತ್ರಿ, ಲಂಕೇಶ್ ಪತ್ರಿಕೆ, ಹೀಗೆ ಅನೇಕ ಸಿನಿಮಾಗಳ ಹೆಸರುಗಳನ್ನು ಬರೆಯಲಾಗಿದೆ. ಇದೆಲ್ಲವೂ ಅಭಿಮಾನ ಎಂದುಕೊಂಡರೆ, ಮತ್ತೊಂದು ದೊಡ್ಡ ತಪ್ಪು ನಡೆದು ಹೋಗಿದೆ. ರಜತ್ ಅವರ ಪ್ಯಾಂಟ್ ಕೆಳಗಿನ ಭಾಗದಲ್ಲಿ ದರ್ಶನ್ ಎಂದು ಬರೆಯಲಾಗಿದೆ, ಅದು ಶೂ ಇರುವ ಜಾಗದಲ್ಲಿದ್ದು, ನೋಡಿದರೆ ದರ್ಶನ್ ಎಂದು ಶೂ ಮೇಲೆ ಬರೆದಿರುವ ಹಾಗೆ ತೋರುತ್ತದೆ. ಇದನ್ನು ನೋಡಿ ದರ್ಶನ್ ಅವರ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ದರ್ಶನ್ ಅಭಿಮಾನಿ ಅನ್ನೋದು, ಅವರ ಬಗ್ಗೆ ಸಂತೋಷದಿಂದ ಮಾತಾಡೋದು ಎಲ್ಲವೂ ಸರಿ. ಆದರೆ ಶೂ ಹತ್ತಿತ ದರ್ಶನ್ ಅವರ ಹೆಸರು ಬರಬಾರದಿತ್ತು, ಇದನ್ನೆಲ್ಲ ಗಮನಿಸಿಕೊಳ್ಳಬೇಕು ಅಂದಿದ್ದರು ಡಿಬಾಸ್ ಫ್ಯಾನ್ಸ್..

ರಜತ್ ಅವರನ್ನು ತರಾಟೆಗೆ ತೆಗೆದುಕೊಂಡು, ಅಭಿಮಾನ ವ್ಯಕ್ತಪಡಿಸೋಕೆ ಸಾಕಷ್ಟು ವಿಧಾನ ಇದೆ. ಅಭಿಮಾನದ ಹೆಸರಲ್ಲಿ ದರ್ಶನ್ ಅವರಿಗೆ ಅವಮಾನ ಮಾಡೋ ಕೆಲಸ ಮಾಡಬೇಡಿ ಎಂದು ರಜತ್ ಅವರಿಗೆ ಹೇಳಿದ್ದಾರೆ ಫ್ಯಾನ್ಸ್. ರಜತ್ ಇದಕ್ಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಏನೋ ಮಾಡಲು ಹೋಗಿ, ಇನ್ನೇನೋ ಆದ ಹಾಗೆ ತೋರುತ್ತಿದೆ. ರಜತ್ ಡಿಬಾಸ್ ಫ್ಯಾನ್ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಈ ವಿಚಾರದಲ್ಲಿ ಸ್ವಲ್ಪ ಹುಷಾರಾಗಿ ಇರಬೇಕಿತ್ತು ಅನ್ನೋದು ಎಲ್ಲರ ಅಭಿಪ್ರಾಯ ಆಗಿದೆ. ಇನ್ನು ರಜತ್ ಮೊನ್ನೆಯಷ್ಟೇ ಮೈಸೂರಿನಲ್ಲಿ ನಡೆದ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಸಹ ಕಾಣಿಸಿಕೊಂಡಿದ್ದರು. ರಜತ್ ಜೊತೆಗೆ ವಿನಯ್ ಕೂಡ ಇದ್ದರು. ಇಬ್ಬರಿಗೂ ದರ್ಶನ್ ಅವರ ಜೊತೆಗೆ ಒಳ್ಳೆಯ ಆತ್ಮೀಯತೆ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ದಾಖಲಾಗಿರುವ ಎಫ್.ಐ.ಆರ್ ಇಂದ ಹೇಗೆ ಹೊರಗಡೆ ಬರುತ್ತಾರೆ ಎಂದು ನೋಡಬೇಕಿದೆ.