ಒಂದು ತಿಂಗಳಿನಿಂದ ಎಲ್ಲೆಡೆ ‘ಗುಲಾಬಿ ಜ್ವರದ್ದೇ’ ಸುದ್ದಿ. ಹಾಗಂತ ಇದು ಖಾಯಿಲೆ ಅಂದುಕೊಳ್ಳಬೇಡಿ. ಇಂಗ್ಲೀಷಿನ ‘ಬಾರ್ಬಿ’ ಸಿನಿಮಾ ರಿಲೀಸ್ ಆದ ಮೇಲಿಂದ ಸೋಶಿಯಲ್ ಮೀಡಿಯಾದಲ್ಲಿ ಯುವತಿಯರು ‘ಬಾರ್ಬಿಯಂತೆ’ ಬಟ್ಟೆ ತೊಟ್ಟು ರೀಲ್ಸ್ ಮಾಡುವುದು, ಫೋಟೋ ಶೂಟ್ ನಡೆಸುವುದು ನಡೆಯುತ್ತಿದೆ. ಆದರೆ ಇದೇ ಮೊದಲ ಬಾರಿಗೆ ‘ಗಂಡು ಬಾರ್ಬಿ’ಯೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ.

ಹೌದು, ಎಲಿಝರ್ ರೋಡ್ರಿಗಸ್ ಹೆರ್ನಾಂಡೇಝ್ ಎಂಬಾತನ ಮಗಳು ‘ಅಪ್ಪ ನನ್ನನ್ನು ಬಾರ್ಬಿ ಸಿನಿಮಾಗೆ ಕರೆದುಕೊಂಡು ಹೋಗು’ ಎಂದಿದ್ದಲ್ಲದೆ ‘ಈ ಸಿನಿಮಾಗೆ ಹೋಗುವಾಗ ನೀನೂ ಕೂಡ ಬಾರ್ಬಿ ಡ್ರೆಸ್ ನಲ್ಲಿ ಬರಬೇಕು’ ಎಂದಿದ್ದಾಳೆ. ಮಗಳ ಮಾತನ್ನು ಪಾಲಿಸಿದ ತಂದೆ. ಬಾರ್ಬಿ ಗೊಂಬೆಯಂತೆ ವೇಷ ತೊಟ್ಟಿದ್ದಾನೆ. ಬಾರ್ಬಿ ಅಪ್ಪನನ್ನು ಕಂಡು ಮಗಳು ಫಿದಾ ಆಗಿದ್ದಾಳೆ.
ಈ ಬಾರ್ಬಿ ವೇಷ ತೊಟ್ಟಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಎಲಿಝರ್ ರೋಡ್ರಿಗಸ್ ಹೆರ್ನಾಂಡೇಝ್ ‘ಮಗಳ ಆಸೆ ಈಡೇರಿಸಲು ಬಾರ್ಬಿಯಾದೆ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸೋಶಿಯ್ಲ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಗಳ ಆಸೆ ಈಡೇರಿಸಿದ ತಂದೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.