ಕನ್ನಡ ಚಿತ್ರರಂಗದಲ್ಲಿ ಸಧ್ಯಕ್ಕೆ ಇರುವ ಟಾಪ್ ಡೈರೆಕ್ಟರ್ ಗಳಲ್ಲಿ ತರುಣ್ ಸುಧೀರ್ ಅಗ್ರಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಲ್ಲ. ನಟ ದರ್ಶನ್ ಅವರು ನಾಯಕನಾಗಿ, ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ನಾಯಕಿಯಾಗಿ ನಟಿಸಿ, ತರುಣ್ ಸುಧೀರ್ ಅವರು ನಿರ್ದೇಶನ ಮಾಡಿದ ಕಾಟೇರಾ ಸಿನಿಮಾ ಅತಿದೊಡ್ಡ ಹಿಟ್ ಆಗಿ, ಹಲವು ಅವಾರ್ಡ್ಸ್ ಗಳನ್ನು ಪಡೆದುಕೊಂಡಿತು. ಈ ಮೂಲಕ ತರುಣ್ ಅವರು ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ಜೊತೆಗೆ ಇವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಇದೆ. ಇನ್ನು ದರ್ಶನ್ ಅವರ ಫ್ಯಾನ್ಸ್ ಅವರ ಜೊತೆಗೆ ಇನ್ನೊಂದು ಸಿನಿಮಾ ಮಾಡಿ ಎನ್ನುತ್ತಿದ್ದಾರೆ..

ತರುಣ್ ಸುಧೀರ್ ಅವರು ಕೆರಿಯರ್ ಶುರು ಮಾಡಿದ್ದು ಕಲಾವಿದನಾಗಿ. ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ ತರುಣ್ ಅವರು ಹೀರೋ ಆಗಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದರು ಆದರೆ ಇವರಿಗೆ ಹೀರೋ ಆಗಿ ಇವರಿಗೆ ಎಲ್ಲರೂ ಅಂದುಕೊಂಡಷ್ಟು ಯಶಸ್ಸು ಸಿಗಲಿಲ್ಲ. ಬಳಿಕ ನಿರ್ದೇಶನಕ್ಕೆ ಬಂದರು. ಚೌಕ, ರಾಬರ್ಟ್ ಎರಡು ಸಿನಿಮಾಗಳನ್ನು ನಿರ್ದೇಶಿಸಿದರು. ಈ ಎರಡು ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿದೆ. ನಂತರ ರಾಬರ್ಟ್ ಸಿನಿಮಾ ನಿರ್ದೇಶನ ಮಾಡಿದರು..ಈ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಆಯಿತು. ತರುಣ್ ಅವರಿಗೆ ದರ್ಶನ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಬಳಿಕ ತರುಣ್ ಅವರು ಸುದ್ದಿಯಾಗಿದ್ದು ಮದುವೆ ಕಾರಣಕ್ಕೆ. ತರುಣ್ ಅವರು ರಾಬರ್ಟ್ ಸಿನಿಮಾದಲ್ಲಿ ನಟಿಸಿದ ಸೋನಲ್ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರದ್ದು 4 ವರ್ಷಗಳ ಪ್ರೀತಿ, ಮದುವೆಗಿಂತ ಸ್ವಲ್ಪ ದಿವಸ ಮೊದಲಿಗೆ ಇವರ ಲವ್ ವಿಚಾರ ಬಯಲಾಗಿ ಎಲ್ಲರೂ ಮದುವೆ ಯಾವಾಗ ಎಂದು ಕೇಳುತ್ತಿದ್ದರು. ಆದರೆ ಈ ಜೋಡಿ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಈ ವರ್ಷ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಿತು. ಆಗಸ್ಟ್ 11ರಂದು ಈ ಜೋಡಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು, ಬಳಿಕ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಅನುಸಾರ ಮದುವೆಯಾದರು. ಸೋನಲ್ ಅವರು ಕ್ರಿಶ್ಚಿಯನ್ ಸಮುದಾಯದವರು.

ಈ ಜೋಡಿ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಎಲ್ಲೇ ಹೋದರು ಸಹ ಎಲ್ಲರೂ ಕೇಳುವ ಪ್ರಶ್ನೆ ಒಂದೇ ಆಗಿದೆ, ಮಕ್ಕಳು ಯಾವಾಗ, ಗುಡ್ ನ್ಯೂಸ್ ಯಾವಾಗ ಕೊಡ್ತೀರಾ ಎಂದು. ಆದರೆ ಈ ಜೋಡಿ ಮಕ್ಕಳ ಬಗ್ಗೆ ಏನನ್ನು ತಿಳಿಸಿಲ್ಲ, ಹಾಗೆಯೇ ಗುಡ್ ನ್ಯೂಸ್ ಯಾವಾಗ ಎಂದರೆ ಅದಕ್ಕೂ ಉತ್ತರ ಕೊಡುತ್ತಿಲ್ಲ. ಆದರೆ ಇದೀಗ ತರುಣ್ ಅವರು ಪತ್ನಿ ಸೋನಲ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಕಾರಣ ಎಲ್ಲರೂ ಈ ಜೋಡಿಗೆ ವಿಶ್ ಮಾಡುವುದಕ್ಕೆ ಶುರು ಮಾಡಿದರು, ಗುಡ್ ನ್ಯೂಸ್ ಕೊಡೋದಕ್ಕೆ ಬಂದಿದ್ದಾರೆ ಅಂದುಕೊಂಡಿದ್ದರು. ಆದರೆ ಅಸಲಿ ವಿಷಯ ಬೇರೆಯೇ ಆಗಿದೆ.
ಸೋನಲ್ ಅವರನ್ನು ತರುಣ್ ಸುಧೀರ್ ಅವರು ಕರೆದುಕೊಂಡು ಬಂದಿದ್ದು ಯಾವುದೇ ಚೆಕಪ್ ಗೆ ಅಲ್ಲ. ಇವರಿಬ್ಬರು ಪಶು ಆಸ್ಪತ್ರೆಯ ಉದ್ಘಾಟನೆಗೆ ಬಂದಿದ್ದರು. ಪ್ರಾಣಿಗಳನ್ನು ನೋಡಿಕೊಳ್ಳುವುದು ಪುಣ್ಯದ ಕೆಲಸ, ಮನುಷ್ಯರಲ್ಲಿ ಆದರೆ ಏನಾಗಿದೆ ಎಂದು ಅವರನ್ನೇ ಕೇಳಿ ತಿಳಿದುಕೊಳ್ಳಬಹುದು, ಆದರೆ ಪ್ರಾಣಿಗಳು ಮೂಕ ಜೀವಿಗಳು ಅಂಥವುಗಳಿಗೆ ಟ್ರೀಟ್ಮೆಂಟ್ ಕೊಡುವುದು ಸುಲಭ ಅಲ್ಲ ಎಂದು ತರುಣ್ ಅವರು ಸಂತೋಷದಿಂದ ವಿಶ್ ಮಾಡಿ, ಈ ಆಸ್ಪತ್ರೆಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಗುಡ್ ನ್ಯೂಸ್ ಕೊಡೋದು ಯಾವಾಗ ಎಂದು ಫ್ಯಾನ್ಸ್ ಎಲ್ಲರೂ ಕಾಯುತ್ತಿದ್ದಾರೆ.