ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದು ತಿಂಗಳುಗಳು ಕಳೆಯುತ್ತಿದ್ದರೂ ಕೂಡ ಈ ಶೋಗೆ ಇರುವ ಜನಪ್ರಿಯತೆ ಮಾತ್ರ ಕಡಿಮೆ ಆಗುತ್ತಿಲ್ಲ. ವಿನ್ನರ್ ಆದವರಿಗೆ, ಸ್ಪರ್ಧಿಗಳಿಗೆ ಜನರಿಂದ ಸಿಗುತ್ತಿರುವ ಪ್ರೀತಿ ಕೂಡ ಕಡಿಮೆ ಆಗಿಲ್ಲ. ಇದಕ್ಕೆ ಒಂದು ಉದಾಹರಣೆ ಹನುಮಂತನಿಗೆ ಎಲ್ಲಾ ಕಡೆ ಜನರಿಂದ ಸಿಗುತ್ತಿರುವ ಪ್ರೀತಿ. ಹನುಮಂತ ಒಬ್ಬನಿಗೆ ಮಾತ್ರವಲ್ಲ, ಬಿಗ್ ಬಾಸ್ ಶೋ ನ ಬೇರೆ ಎಲ್ಲಾ ಸ್ಪರ್ಧಿಗಳಿಗೆ ಕೂಡ ಅದೇ ರೀತಿ ಜನರಿಂದ ಪ್ರೀತಿ ಸಿಗುತ್ತಲಿದೆ. ಈಗ ಹನುಮಂತನಿಗೆ ಜನರಿಂದ ಸಿಗುತ್ತಿರುವ ಪ್ರೀತಿ, ಅಭಿಮಾನದ ವಿಷಯದ ಬಗ್ಗೆ ಒಂದು ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹನುಮಂತನ ಕೈಗೆ ಅಭಿಮಾನಿಗಳು ಬಂದು ಮುತ್ತು ಕೊಡುತ್ತಿದ್ದಾರಂತೆ. ಆ ರೀತಿ ಮಾಡುತ್ತಿರುವುದಕ್ಕೆ ಕಾರಣ ಏನು ಎಂದು ತಿಳಿಸುತ್ತೇವೆ ನೋಡಿ..
ಹನುಮಂತ ಹಾಡುವ ಹುಡುಗ, ಬಡತನದಲ್ಲಿ ಹುಟ್ಟಿ ಬೆಳೆದ ಕುರಿ ಕಾಯೋ ಹುಡುಗ ಅನ್ನೋದು ಎಲ್ಲರಿಗೂ ಗೊತ್ತಿತ್ತು, ಅದಕ್ಕಿಂತ ಹೆಚ್ಚಾಗಿ ಹನುಮಂತನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಹನುಮಂತ ನಿಜಕ್ಕೂ ಯಾವ ರೀತಿ? ಆತನಲ್ಲಿ ಮುಗ್ಧತೆಯ ಜೊತೆಗೆ ಇನ್ಯಾರಲ್ಲೂ ಇರದಂಥ ಚಾಣಾಕ್ಷತನ, ಬುದ್ಧಿವಂತಿಕೆ ಇದೆ ಅನ್ನೋದು ಗೊತ್ತಾಗಿದ್ದು ಬಿಗ್ ಬಾಸ್ ಶೋ ಇಂದ. ಈ ಒಂದು ಶೋ ಇಂದ ರಾಜ್ಯದ ಎಲ್ಲೆಡೆ ಹನುಮಂತನಿಗೆ ಪ್ರೀತಿ ಸಿಕ್ಕಿದೆ. ಎಲ್ಲರೂ ಅಂದುಕೊಂಡಿದ್ದು ಹನುಮಂತನೇ ಗೆಲ್ಲಬೇಕು ಎಂದು. ಎಲ್ಲರೂ ಅಂದುಕೊಂಡ ರೀತಿಯಲ್ಲೇ ಹನುಮಂತ ಗೆದ್ದಿದ್ದಾನೆ. ಅವನಿಗೆ ಜನಪ್ರಿಯತೆ, ಹೆಸರು, ಜನರ ಪ್ರೀತಿ ಜೊತೆಗೆ 50 ಲಕ್ಷ ಹಣ ಕೂಡ ಸಿಕ್ಕಿದೆ. ಅಷ್ಟೇ ಅಲ್ಲದೇ, ಹೊಸ ಶೋ ಕೂಡ ಸಿಕಿದೆ.
ಈಗ ಹನುಮಂತ ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಅಲ್ಲಿ ಸಹ ಸ್ಪರ್ಧಿಯಾಗಿ ಬಂದು, ಜನರಿಗೆ ಮನರಂಜನೆ ನೀಡುತ್ತಿದ್ದಾನೆ. ಈ ಶೋನಲ್ಲಿ ಹನುಮಂತ ಎಷ್ಟು ಚೆನ್ನಾಗಿ ಆಕ್ಟ್ ಮಾಡಬಹುದು ಎನ್ನುವುದು ಗೊತ್ತಾಗಿದೆ. ಹನುಮಂತ ಬಿಗ್ ಬಾಸ್ ಮನೆಯ ಒಳಗೆ ಇದ್ದಾಗಲೇ, ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಕೂಡ ಅಯ್ಕೆಯಾಗಿದ್ದ. ಈ ರೀತಿಯಾಗಿ ಹನುಮಂತ ಎಲ್ಲರಿಗೂ ಬಹಳ ಇಷ್ಟವಾಗಿದ್ದಾನೆ. ಇನ್ನು ಇಂದಿನ ಸಂಚಿಕೆಯಲ್ಲಿ ಅನುಪಮಾ ಗೌಡ ಅವರು, ಹನುಮಂತನಿಗೆ ಫ್ಯಾನ್ಸ್ ಎಲ್ಲರೂ ಎಷ್ಟು ಪ್ರೀತಿ ತೋರಿಸುತ್ತಿದ್ದಾರೆ ,ಹೇಗಿದೆ ಆ ಪ್ರೀತಿ ಎಂದು ಕೇಳಿದ್ದಕ್ಕೆ ಹನುಮಂತ ಜನರು ತೋರಿಸುವ ಪ್ರೀತಿ ಇಂದ ತುಂಬಾ ಖುಷಿ ಇದೆ ಎಂದು ಹೇಳಿದ್ದಾನೆ. ಜನರು ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯೇ ಬೇರೆ..

ಜನರು ಯಾವ ರೀತಿ ಪ್ರೀತಿ ವ್ಯಕ್ತಪಡಿಸಿದರೆ, ನಿಮಗೆ ಇಷ್ಟವಾಗುತ್ತದೆ ಎಂದು ಕೇಳಿದ್ದಕ್ಕೆ ಹನುಮಂತ ಒಂದು ಉತ್ತರ ಕೊಟ್ಟಿದ್ದಾನೆ. ಜನರು ಬಂದು ಹನುಮಂತನ ಕೈಗೆ ಮುತ್ತು ಕೊಡುತ್ತಾರಂತೆ, ಇದನ್ನ ನೋಡಿ ಅವನಿಗೆ ತುಂಬಾ ಖುಷಿ ಆಗುತ್ತದಂತೆ. ಅದಕ್ಕೆ ಒಂದು ಪ್ರಮುಖ ಕಾರಣ ಸಹ ಇದೆ, ಜನರು ಹನುಮಂತನ ಕೈಗೆ ಮುತ್ತು ಕೊಡೋದು ಯಾಕೆ ಅಂದ್ರೆ, ಸುದೀಪ್ ಸರ್ ಅವನ ಕೈ ಹಿಡಿದಿದ್ದಾರೆ, ಹನುಮಂತನನ್ನ ಅಪ್ಪಿಕೊಂಡಿದ್ದಾರೆ, ಅಂಥ ಅದೃಷ್ಟವಂತ ಕೈಗೆ ಮುತ್ತು ಕೊಡಬೇಕು ಎಂದು ಹನುಮಂತನನ್ನು ನೋಡಿದ ತಕ್ಷಣವೇ ಹಲವರು ಕೈಗೆ ಮುತ್ತು ಕೊಡುತ್ತಾರಂತೆ, ಇನ್ನು ಕೆಲವರು ಅಪ್ಪಿಕೊಳ್ಳುತ್ತಾರಂತೆ. ಜನರ ಈ ಪ್ರೀತಿಗೆ ಏನು ಹೇಳಬೇಕೋ ಗೊತ್ತಾಗೋದಿಲ್ಲ ಎನ್ನುತ್ತಾನೆ ಹನುಮಂತ. ಇದಾದ ಬಳಿಕ ತಂದೆ ತಾಯಿ ಹೇಗಿದ್ದಾರೆ ಎಂದು ಕೇಳಿ, ಅಭಿಮಾನಿಗಳ ವಿಡಿಯೋ ಕೂಡ ತೋರಿಸಿದ್ದಾರೆ..
ಬಿಗ್ ಬಾಸ್ ಮುಗಿದ ಬಳಿಕ ಹನುಮಂತನನ್ನು ಜನರಿಗೆ ಊರಿನಲ್ಲಿ ಎಷ್ಟು ಚೆನ್ನಾಗಿ ಸ್ವಾಗತ ಮಾಡಿದ್ದಾರೆ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎಂದು ತೋರಿಸಲಾಯಿತು. ಇನ್ನು ಜನರ ಬಗ್ಗೆ ಹನುಮಂತ ಹೇಳೋ ಈ ಮಾತುಗಳನ್ನ ಕೇಳಿದರೆ, ಸುದೀಪ್ ಅವರನ್ನು ಕಂಡರೆ ಜನರಿಗೆ ಅದೆಷ್ಟು ಪ್ರೀತಿ ಅನ್ನೋದು ಗೊತ್ತಾಗುತ್ತದೆ. ಕಿಚ್ಚ ಸುದೀಪ್ ಅವರು 2 ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಇರುವವರು, ಇಷ್ಟು ವರ್ಷಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಕೂಡ ತಮ್ಮ ಅತ್ಯುತ್ತಮ ಅಭಿನಯದ ಮೂಲಕ ಹೆಸರು ಮಾಡಿದ್ದಾರೆ. ಬಿಗ್ ಬಾಸ್ ಶೋ ಗೆ ಶೋಭೆ ತರುವುದೇ ಕಿಚ್ಚ ಸುದೀಪ್ ಅವರು ಎಂದು ಹೇಳಿದರೂ ಕೂಡ ತಪ್ಪಲ್ಲ. ಮುಂದಿನ ಸೀಸನ್ ಇಂದ ಸುದೀಪ್ ಅವರು ಬಿಗ್ ಬಾಸ್ ನಿರೂಪಣೆ ಮಾಡೋದಿಲ್ಲ ಎನ್ನುವುದೇ ಬೇಸರದ ವಿಷಯ ಆಗಿದೆ.