ಅಪ್ಪಟ ಕನ್ನಡದ ನಿರೂಪಕಿ ಎಂದೇ ಹೆಸರು ಪಡೆದಿದ್ದವರು ಅಪರ್ಣಾ ವಸ್ತಾರೆ. 90ರ ದಶಕದಿಂದ ನಿರೂಪಣೆ ಶುರು ಮಾಡಿ, ಈಗಿನವರೆಗೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿದ್ದವರು ಅಪರ್ಣಾ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಪರ್ಣಾ ಅವರು ಕಳೆದ ವರ್ಷ ಜುಲೈ 11ರಂದು ವಿಧಿವಶರಾದರು. ಇವರು ಇಲ್ಲ ಎನ್ನುವ ವಾಸ್ತವವನ್ನೇ ಅವರ ಕುಟುಂಬದವರು ಇನ್ನು ಕೂಡ ಪೂರ್ತಿಯಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ, ಆದರೆ ಇದೀಗ ಅಪರ್ಣಾ ಅವರ ಅಣ್ಣ ಚೈತನ್ಯ ಅವರು ಸಹ ವಿಧಿವಶರಾಗಿದ್ದಾರೆ. ಈ ದುಃಖದ ಸುದ್ದಿಯನ್ನು ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಅವರು ತಿಳಿಸಿದ್ದಾರೆ..
ಸೋಷಿಯಲ್ ಮೀಡಿಯಾದಲ್ಲಿ ಅಪರ್ಣಾ ಅವರ ಅಣ್ಣ ಚೈತನ್ಯ ಅವರ ಫೋಟೋ ಒಂದನ್ನು ಶೇರ್ ಮಾಡಿರುವ ನಾಗರಾಜ್ ವಸ್ತಾರೆ ಅವರು.. “ಅಪರ್ಣೆಯ ಅಣ್ಣ ಚೈತನ್ಯ ನಿನ್ನೆ ನಡುರಾತ್ರಿಯಲ್ಲಿ ಈ ಇಹತೊರೆದು ಸರಿದಿದ್ದಾರೆ. ತೀವ್ರತಮ ವಿಷಾದ. ಕೆಲವು ಹೂವುಗಳು ಅರಳದೆ ಮೊಗ್ಗಾಗಿಯೇ ಉದುರಿಹೋಗುತ್ತವೆ. ಇನ್ನು ಕೆಲವು ಅರಳಿ ಹಣ್ಣಾಗದೆ ಕಮರುತ್ತವೆ. ಇನ್ನೂ ಕೆಲವನ್ನು ಒತ್ತಾಯದಿಂದ ಕೊಯ್ದು ಕತ್ತರಿಸಲಾಗುತ್ತದೆ. ಯಾರು ಯಾವುದೆಂದು ನಾನು ಈವರೆಗೂ ಅರಿತಿಲ್ಲ. ಅರಿಯುವ ಜಿಜ್ಞಾಸೆಯೂ ಈ ಹೊತ್ತಿನದಲ್ಲ. ದಿನದಿಂದ ದಿನಕ್ಕೂ ನಾನು ಹೆಚ್ಚು ಹೆಚ್ಚು ಒಬ್ಬನಾಗುತ್ತಿರುವುದು ಯಾವೊತ್ತಿನ ಸತ್ಯ. ಬಹುಶಃ ಎಲ್ಲರದೂನು. ನಮಸ್ಕಾರ..”ಎಂದು ಬರೆದುಕೊಂಡಿದ್ದಾರೆ.
ಇದು ನಿಜಕ್ಕೂ ಬಹಳ ದುಃಖ ತರುವಂಥ ವಿಷಯ. ಇತ್ತೀಚೆಗೆ ತಂಗಿಯನ್ನು ಕಳೆದುಕೊಂಡ ನೋವಿನಲ್ಲಿದ್ದರು ಅಣ್ಣ ಚೈತನ್ಯ. ಈಗ ಅವರು ಸಹ ಇಲ್ಲ ಎಂದರೆ ಅವರ ಮನಸ್ಸಿನ ಆ ಘಟನೆ ಎಂಥಾ ಪರಿಣಾಮ ಬೀರಿದೆ ಎನ್ನುವುದನ್ನು ಊಹಿಸಿಕೊಳ್ಳುವುದಕ್ಕೆ ಕೂಡ ಕಷ್ಟ ಆಗುತ್ತದೆ. ಅಪರ್ಣಾ ಅವರ ಅಣ್ಣನ ಆರೋಗ್ಯ ಕೂಡ ಸರಿ ಇರಲಿಲ್ಲ ಎಂದು ಹೇಳಲಾಗುತ್ತಿತ್ತು. ಅವರನ್ನು ಒಂದು ಮಗುವನ್ನು ನೋಡಿಕೊಳ್ಳುವ ಹಾಗೆಯೇ ನೋಡಿಕೊಳ್ಳಲಾಗುತ್ತಿದೆ ಎಂದು ಅಪರ್ಣಾ ಅವರು ಇಲ್ಲ ಎನ್ನುವ ವಿಷಯ ಗೊತ್ತಾದ ನಂತರ ತಿಳಿದುಬಂದಿತ್ತು. ಇದೀಗ ಅವರು ಸಹ ಇಹಲೋಕ ತ್ಯಜಿಸಿ ಹೊರಟು ಹೋಗಿದ್ದಾರೆ.

ಅಪರ್ಣಾ ಅವರ ಕುಟುಂಬಕ್ಕೆ ಇದು ಅತೀವವಾದ ದುಃಖ ತಂದಿರುವಂಥ ವಿಷಯ. ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಅವರು ಹೇಗೆ ತಾನೇ ಒಂದಾದ ನಂತರ ಒಂದೊಂದು ನೋವುಗಳನ್ನು ಸಹಿಸಿಕೊಳ್ಳಬೇಕು? ನಾಗರಾಜ್ ಅವರಿಗೆ ದೇವರು ಈ ಎಲ್ಲಾ ನೋವುಗಳನ್ನು ಭರಿಸಿಕೊಂಡು, ಸ್ಟ್ರಾಂಗ್ ಆಗಿ ಇರುವುದಕ್ಕೆ ಶಕ್ತಿ ಕೊಡಬೇಕು ಎನ್ನುವುದೇ ಎಲ್ಲರ ಕೋರಿಕೆ. ಅಪರ್ಣಾ ಅವರು ಎಲ್ಲೇ ಇದ್ದರೂ ಪತಿ ನಾಗರಾಜ್ ಅವರಿಗೆ ಮಾನಸಿಕವಾಗಿ ಶಕ್ತಿ ತುಂಬಬೇಕು, ಇಲ್ಲದೇ ಹೋದರೆ ಆ ವ್ಯಕ್ತಿ ಮಾನಸಿಕವಾಗಿ ಇನ್ನಷ್ಟು ಕುಗ್ಗಿ ಹೋಗುತ್ತಾರೆ. ಅಪರ್ಣಾ ಅವರ ನೆನಪುಗಳು ಮಾಸುವಂಥದ್ದಲ್ಲ.
ಅಪರ್ಣಾ ಅವರ ಬಗ್ಗೆ ಎಷ್ಟೇ ಬರೆದರು ಕಡಿಮೆಯೇ, ಒಂದು ರೀತಿ ಅವರು ಕನ್ನಡದ ನಿಘಂಟು ಎನ್ನುವ ಹಾಗಿದ್ದರು. ಅವರ ಅಚ್ಚಕನ್ನಡ, ಕನ್ನಡ ಪದಬಳಕೆ ಇದೆಲ್ಲವನ್ನು ಮರೆಯಲು ಸಾಧ್ಯವಿಲ್ಲ. ಮಜಾ ಟಾಕೀಸ್ ನ ಒನ್ ಅಂಡ್ ಓನ್ಲಿ ವರಲಕ್ಷ್ಮೀ ಪಾತ್ರವನ್ನ ಹೇಗೆ ತಾನೇ ಮರೆಯಲು ಸಾಧ್ಯ. ಪ್ರತಿ ಎಪಿಸೋಡ್ ನಲ್ಲೂ ವಿಭಿನ್ನ ಗೆಟಪ್ ಗಳಲ್ಲಿ ಬಂದು, ಜನರನ್ನು ನಗಿಸಿ, ವರಲಕ್ಷ್ಮೀ ಪಾತ್ರಕ್ಕೆ ಎಲ್ಲರೂ ಅಡಿಕ್ಟ್ ಆಗುವ ಹಾಗೆ ಮಾಡಿದ್ದರು. ಈಗ ಮಜಾ ಟಾಕೀಸ್ ಮತ್ತೆ ಶುರುವಾಗಲಿದೆ, ಆದರೆ ಅಪರ್ಣಾ ಅವರಿಲ್ಲದೇ ಆ ಕಾರ್ಯಕ್ರಮ ನೋಡುವುದಂತೂ ಕಷ್ಟ.