ಬಿಗ್ ಬಾಸ್ ಗೆದ್ದ ಖುಷಿಲಿರೋ ಹನುಮಂತನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪೋಸ್ಟ್ ಗಳು ಹರಿದಾಡುತ್ತಿದೆ. ಮೀಮ್ ಪೇಜ್ ಗಳು, ಟ್ರೋಲ್ ಪೇಜ್ ಗಳು ಹನುಮಂತನ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಹನುಮಂತನಿಗೆ ಬಂದಿರುವ ಪ್ರೈಜ್ ಮನಿ ಹಾಗೂ ಟ್ರೋಫಿ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಹನುಮಂತನಿಗೆ ನಿರ್ಮಲಾ ಸೀತಾರಾಮನ್ ಅವರು ಕರೆದು ಮೊದಲು ಟ್ಯಾಕ್ಸ್ ಕಟ್ಟಿಬಿಡು ಎಂದು ಹೇಳುತ್ತಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅವುಗಳ ನೋಡುವ ಜನರಿಗು ತಮಾಷೆಯಿಂದ ನಗುವ ಹಾಗೆ ಮಾಡಿದೆ. ಅಷ್ಟಕ್ಕೂ ಏನು ಈ ವಿಷಯ? ಹನುಮಂತನ ಜೊತೆಗೆ ನಿರ್ಮಲಾ ಸೀತಾರಾಮನ್ ಅವರು ಟ್ರೋಲ್ ಆಗುತ್ತಿರುವುದು ಯಾಕೆ? ಫುಲ್ ಡೀಟೇಲ್ಸ್ ತಿಳಿಸಿಕೊಡುತ್ತೇವೆ ನೋಡಿ..
ಕಳೆದ ಕೆಲವು ದಿನಗಳಿಂದ ನಿರ್ಮಲಾ ಸೀತಾರಾಮನ್ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇದು ಟ್ಯಾಕ್ಸ್ ವಿಚಾರಕ್ಕೆ. ಬಹುತೇಕ ಎಲ್ಲಾ ಪದಾರ್ಥಗಳ ಮೇಲೆ ಟ್ಯಾಕ್ಸ್ ಹೇರಿಕೆ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು, ಪಾಪ್ ಕಾರ್ನ್ ಮೇಲೆ ಟ್ಯಾಕ್ಸ್ ಹಾಕಿ ಇನ್ನು ಹೆಚ್ಚು ಟ್ರೋಲ್ ಆದರು. ಫೆಬ್ರವರಿ 1ರಂದು ಹೊಸ ಬಜೆಟ್ ನಡೆಯಲಿದ್ದು, ಇನ್ನು ಟ್ಯಾಕ್ಸ್ ಜಾಸ್ತಿ ಮಾಡಬಹುದು ಇದರಿಂದ ಜನರಿಗೆ ಹೆಚ್ಚು ತೊಂದರೆ ಆಗಬಹುದು. ಅದರಲ್ಲೂ ಮಧ್ಯಮ ವರ್ಗದ ಜನರ ಮೇಲೆ ಇವರ ಟ್ಯಾಕ್ಸ್ ವಿಚಾರ ಸಿಕ್ಕಾಪಟ್ಟೆ ಪರಿಣಾಮ ಬೀರುತ್ತದೆ ಎನ್ನುವ ಅಭಿಪ್ರಾಯ ಇದೆ. ನಿರ್ಮಲಾ ಸೀತಾರಾಮನ್ ಅವರು ಮಾಧ್ಯಮ ವರ್ಗದ ಜನರ ಬಗ್ಗೆ ನೀಡಿದ್ದ ಹೇಳಿಕೆಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿ, ಇವರು ತುಂಬಾ ಟ್ರೋಲ್ ಆಗಿದ್ದರು. ಇದೀಗ ಹನುಮಂತನ ವಿಷಯಕ್ಕೂ ಟ್ರೋಲ್ ಆಗುತ್ತಿದ್ದಾರೆ.

ಇವರಿಬ್ಬರಿಗೂ ವೈಯಕ್ತಿಕವಾಗಿ ಪರಿಚಯವೇ ಇಲ್ಲ. ಆದರೆ ನಿರ್ಮಲಾ ಸೀತಾರಾಮನ್ ಅವರು ಹನುಮಂತನನ್ನು ಕರೆದು, ಮೊದಲು ಬಾ ಟ್ಯಾಕ್ಸ್ ಕಟ್ಟು ಎಂದು ಹೇಳುತ್ತಿರುವ ಮೀಮ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಇದು ಇವರಿಬ್ಬರ ನಡೆಯುತ್ತಿರುವ ಸಂಭಾಷಣೆ ಅಲ್ಲ. ಬದಲಾಗಿ, ನೆಟ್ಟಿಗರು ತಮಾಷೆಯಾಗಿ ಮಾಡಿರುವ ಮೀಮ್ಸ್ ಆಗಿದೆ. ಹನುಮಂತನಿಗೆ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಕ್ಕೆ 50 ಲಕ್ಷ ಬಹುಮಾನ ಸಿಕ್ಕಿದೆ. ಇನ್ನು ಒಂದಷ್ಟು ಬಹುಮಾನ ಸಿಕ್ಕಿರುವುದು ಎಲ್ಲವನ್ನು ಸೇರಿಸಿದರೆ ಹಣದ ಮೊತ್ತ ಸುಮಾರು 65 ಲಕ್ಷಕ್ಕೆ ಬಂದು ತಲುಪುತ್ತದೆ. ಶೋ ನೋಡುವ ವೀಕ್ಷಕರು ನೆಟ್ಟಿಗರು ಎಲ್ಲರೂ ಸಹ ಹನುಮಂತ ಈ ಪೂರ್ತಿ ಹಣವನ್ನ ತೆಗೆದುಕೊಂಡು ಊರಿಗೆ ಹೋಗಿದ್ದಾನೆ. ಅವನಿಗೆ ಪೂರ್ತಿ ಹಣ ಸಿಕ್ಕಿದೆ ಎಂದೇ ಅಂದುಕೊಂಡಿದ್ದಾರೆ. ಆದರೆ ಅಸಲಿ ವಿಷಯ ಬೇರೆಯೇ ಇದೆ. ಹನುಮಂತನಿಗೆ ಪೂರ್ತಿ ಹಣ ಖಂಡಿತವಾಗಿಯೂ ಸಿಗುವುದೆ ಇಲ್ಲ.
ನಿರ್ಮಲಾ ಸೀತಾರಾಮನ್ ಅವರು ತಂದಿರುವ ಟ್ಯಾಕ್ಸ್ ರೂಲ್ಸ್ ನ ಪ್ರಕಾರ, ಹನುಮಂತನಿಗೆ ಬಂದಿರುವ ಪ್ರೈಜ್ ಹಣದಲ್ಲಿ, 30% ಅನ್ನು ಟ್ಯಾಕ್ಸ್ ಕಟ್ಟಬೇಕು. ಟ್ಯಾಕ್ಸ್ ಕಟ್ಟಿದ ಬಳಿಕ ಉಳಿಯುವಷ್ಟು ಹಣ ಮಾತ್ರ ಹನುಮಂತನಿಗೆ ಸೇರುತ್ತದೆ. ಇದು ಹನುಮಂತನಿಗೆ ಗೊತ್ತಿದೆಯೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಹಾಗೆಯೇ ಜನರಿಗೂ ಹೆಚ್ಚಾಗಿ ಗೊತ್ತಿರುವುದಿಲ್ಲ. ಎಲ್ಲರೂ ಹನುಮಂತನಿಗೆ ಪೂರ್ತಿ 50 ಲಕ್ಷ ಸಿಕ್ಕಿಬಿಟ್ಟಿದೆ ಎಂದೇ ಭಾವಿಸಿದ್ದಾರೆ. ಆದರೆ ಟ್ಯಾಕ್ಸ್ ಕಟ್ಟುವುದು ಬಹಳ ಮುಖ್ಯ. ಈ ಕಾರಣಕ್ಕೆ ನೆಟ್ಟಿಗರು ಹನುಮಂತ ಹಾಗೂ ನಿರ್ಮಲಾ ಸೀತಾರಾಮನ್ ಇಬ್ಬರ ಫೋಟೋ ಸಹ ಹಾಕಿ, ಮೊದಲು ಟ್ಯಾಕ್ಸ್ ಕಟ್ಟಿಬಿಡು ಹನುಮಂತು ಎಂದು ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಾರೆ ಟ್ಯಾಕ್ಸ್ ಕಟ್ಟಿದ ಬಳಿಕ ಹನುಮಂತನ ಕೈಗೆ ಎಷ್ಟು ಲಕ್ಷ ಸಿಗುತ್ತದೆ ಎನ್ನುವುದು ಆ ದೇವರೇ ಬಲ್ಲ. ಎಲ್ಲಾ ನಿರ್ಮಲಾ ಸೀತಾರಾಮನ್ ಅವರ ಮಹಿಮೆ ಎಂದೇ ಹೇಳಬಹುದು.

ಇನ್ನು ಬಿಗ್ ಬಾಸ್ ಶೋ ಮುಗಿಸಿ ಈಗ ಹನುಮಂತ ಬ್ಯುಸಿ ಆಗಿದ್ದಾನೆ. ಕೆಲವು ಫ್ರೆಂಡ್ಸ್ ಗಳನ್ನು ಭೇಟಿ ಮಾಡಿದ್ದು, ಮಾಧ್ಯಮದವರನ್ನು ಭೇಟಿ ಮಾಡಿದ್ದಾನೆ. ಹಾಗೆಯೇ ಕೆಲವು ಇಂಟರ್ವ್ಯೂಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾನೆ. ಈ ಹುಡುಗನ ಮುಗ್ಧತೆಯೇ ಎಲ್ಲರಿಗೂ ಇಷ್ಟ ಆಗಿದ್ದು, ಹನುಮಂತ ಗೆಲ್ಲಲೇಬೇಕು ಎನ್ನುವುದು ಕರ್ನಾಟಕದ ಜನತೆಯ ಆಶಯ ಆಗಿತ್ತು. ಅದೇ ರೀತಿ ಜನರ ತೀರ್ಪು ಜನಾರ್ಧನ ತೀರ್ಪು ಎನ್ನುವ ಹಾಗೆ ಹನುಮಂತ ಬರೋಬ್ಬರಿ 5.3 ಕೋಟಿ ವೋಟ್ ಗಳನ್ನು ಪಡೆದು, ಬಿಗ್ ಬಾಸ್ ಶೋ ವಿಜೇತನಾಗಿದ್ದಾನೆ. ಈ ಹುಡುಗನ ಗೆಲುವು ಉತ್ತರ ಕರ್ನಾಟಕದಿಂದ ಹೆಚ್ಚು ಜನರು ಬಣ್ಣದ ಲೋಕಕ್ಕೆ ಬರುವುದಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಈ ಮೊದಲು ಸರಿಗಮಪ, ಈಗ ಬಿಗ್ ಬಾಸ್ ಎರಡು ಶೋಗಳಲ್ಲೂ ಹನುಮಂತ ರಾರಾಜಿಸಿದ್ದಾನೆ.
ಬಿಗ್ ಬಾಸ್ ಶೋ ಮೂಲಕ ಇನ್ನು ಹೆಚ್ಚು ಜನರಿಗೆ ಹತ್ತಿರ ಆಗಿದ್ದಾನೆ ಹನುಮಂತ. ಜನರು ಈತನ ಬಗ್ಗೆ ತಿಳಿದುಕೊಳ್ಳಲು ಕುತೂಹಲ ತೋರಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ಸಣ್ಣ ಹಳ್ಳಿಯ ಹುಡುಗ ಆಗಿರುವ ಹನುಮಂತನನ್ನು ಸರಿಗಮಪ ಕಾರ್ಯಕ್ರಮಕ್ಕೆ ಕರೆತಂದಿದ್ದು ಜೀಕನ್ನಡ. ಆ ಶೋ ಇಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಕುರಿಗಾಹಿ ಹನುಮಂತ. ಇವನ ಮುಗ್ಧತೆ, ಉತ್ತರ ಕರ್ನಾಟಕ ಶೈಲಿಯ ಭಾಷೆ, ಸ್ಥಳದಲ್ಲೇ ಹಾಡು ಕಟ್ಟಿ ಪದ್ಯ ಹಾಡುವುದು ಇದೆಲ್ಲವೂ ಈತ ಎಂಥಾ ಅದ್ಭುತ ಪ್ರತಿಭೆ ಎನ್ನುವುದನ್ನು ತಿಳಿಸಿಕೊಡುತ್ತದೆ. ಮುಗ್ಧತೆಯ ಜೊತೆಗೆ ಈತನಲ್ಲಿ ಯಾರು ಊಹಿಸದ ಬುದ್ಧಿವಂತಿಕೆ ಹಾಗೂ ಚಾಣಾಕ್ಷತನ ಇದೆ. ಈ ಗುಣದಿಂದಲೇ ಬಿಗ್ ಬಾಸ್ ಕೊಡುತ್ತಿದ್ದ ಎಲ್ಲಾ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ. ಟಾಸ್ಕ್ ನಡೆಯುವ ವೇಳೆ ಹನುಮಂತ ನಡೆಯುತ್ತಿದ್ದ ವೇಳೆ, ಹನುಮಂತನ ಎಲ್ಲಾ ನಿರ್ಧಾರಗಳು ಸರಿಯಾಗಿಯೇ ಇರುತ್ತಿದ್ದವು.

ಈ ರೀತಿಯಾಗಿ ಬಿಗ್ ಬಾಸ್ ಮನೆಯ ಒಳಗೆ ತನ್ನದೇ ಆದ ರೀತಿಯಲ್ಲಿ, ಶೈಲಿಯಲ್ಲಿ ಒಂದು ಸಾಮ್ರಾಜ್ಯವನ್ನೇ ಕಟ್ಟುತ್ತ ಹೋದ. ದೋಸ್ತ ದೋಸ್ತ ಎಂದು ಧನರಾಜ್ ಜೊತೆಗೆ ಬಹಳ ಆತ್ಮೀಯವಾಗಿದ್ದ, ಗೌತಮಿ ಅವರ ಜೊತೆಗೆ, ಗೋಲ್ಡ್ ಸುರೇಶ್ ಅವರ ಜೊತೆಗೆ ಹಾಗೂ ಇನ್ನು ಕೆಲವು ಸ್ಪರ್ಧಿಗಳ ಜೊತೆಗೆ ಸ್ನೇಹದಿಂದಲೇ ಇರುತ್ತಿದ್ದ ಹನುಮಂತ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದು ಬೇರೆ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ, ಗೆಲುವಿನ ಹಾದಿ ಹಿಡಿದು, ಫಿನಾಲೆ ತಲುಪಿ.. ಕೊನೆಗೆ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾನೆ ಉತ್ತರ ಕರ್ನಾಟಕದ ಹುಲಿ ಹನುಮಂತ. ಈ ಗೆಲುವು, ಯಶಸ್ಸು ಎಲ್ಲವೂ ಹನುಮಂತನ ಜೊತೆಗೆ ಸದಾ ಹೀಗೆ ಇದ್ದು, ಇನ್ನು ಎತ್ತರಕ್ಕೆ ಬೆಳೆಯಲಿ.