ನಟ ಯಶ್ ಅವರು ಇಂದು ದೊಡ್ಡ ಸ್ಟಾರ್ ಹೀರೋ. ಕೆಜಿಎಫ್ ಸಿನಿಮಾ ನಂತರ ಗ್ಲೋಬಲ್ ಸ್ಟಾರ್ ಆಗಿ ಯಶ್ ಅವರು ಗುರುತಿಸಿಕೊಂಡಿದ್ದಾರೆ. ಇಂದು ಯಶ್ ಅನ್ನುವ ಹೆಸರು, ರಾಕಿ ಭಾಯ್ ಎನ್ನುವ ಹೆಸರು ದೇಶಗಳ ಗಡಿಯನ್ನು ದಾಟಿ ಬೆಳೆದಿದೆ. ದುಬೈನಲ್ಲಿರೋ ಪಾಕಿಸ್ತಾನದ ಡ್ರೈವರ್ ಗು ರಾಕಿ ಭಾಯ್ ಗೊತ್ತು. ಹಲವು ಕಲಾವಿದರು ಈ ಬಗ್ಗೆ ಹೇಳಿದ್ದಾರೆ. ಇದು ಕರ್ನಾಟಕದವರಾಗಿ ನಮಗೆ ಬಹಳ ಹೆಮ್ಮೆಯ ವಿಚಾರ. ಇನ್ನು ಯಶ್ ಅವರು ಬೆಳೆದು ಬಂದ ಹಾದಿ ನಮಗೆಲ್ಲಾ ಗೊತ್ತೇ ಇದೆ. ಯಾವುದೇ ಗಾಡ್ ಫಾದರ್ ಇಲ್ಲದೇ, ಯಾರ ಸಪೋರ್ಟ್ ಕೂಡ ಇಲ್ಲದೇ ಬಂದ ಯಶ್ ಇಂದು ತಮ್ಮದೆ ಆದ ಸಾಮ್ರಾಜ್ಯ ಕಟ್ಟಿದ್ದಾರೆ. ಯಶ್ ಅವರನ್ನು ಎಲ್ಲಾ ಫ್ಯಾನ್ಸ್ ಯಶ್ ಬಾಸ್ ಎಂದು ಕರೆಯುತ್ತಾರೆ. ಆದರೆ ಯಶ್ ಅವರು ಬಾಸ್ ಅಂತ ಕರೆಯೋದು ಇವರೊಬ್ಬರನ್ನ ಮಾತ್ರ.

ಯಶ್ ಅವರಿಗೆ ಈಗ ದೊಡ್ಡ ಅಭಿಮಾನಿ ಬಳಗ ಇದೆ. ದೇಶ ವಿದೇಶಗಳಲ್ಲಿ ಅಭಿಮಾನಿಗಳು ಯಶ್ ಅವರ ಸಿನಿಮಾ ನೋಡೋಕೆ ಕಾಯ್ತಿದ್ದಾರೆ. ಕೆಜಿಎಫ್2 ನಂತರ ಯಶ್ ಅವರ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಬಾಲಿವುಡ್ ನಟನಟಿಯರು, ಹಾಲಿವುಡ್ ತಂತ್ರಜ್ಞರು ಟಾಕ್ಸಿಕ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಶೂಟಿಂಗ್ ಆಗುತ್ತಿರುವ ಸಿನಿಮಾ ಟಾಕ್ಸಿಕ್. ಈ ಸಿನಿಮಾ ಮೂಲಕ ಗ್ಲೋಬಲ್ ಆಡಿಯನ್ಸ್ ಅನ್ನು ರೀಚ್ ಆಗಿ, ಗ್ಲೋಬಲ್ ಮಾರ್ಕೆಟ್ ನಲ್ಲಿ ಸದ್ದು ಮಾಡೋಕೆ ತಯಾರಾಗಿದ್ದಾರೆ ನಟ ಯಶ್.

ಇನ್ನು ಇವರ ಅಭಿಮಾನಿಗಳು ಕೂಡ ಟಾಕ್ಸಿಕ್ ಸಿನಿಮಾದ ಬಿಗ್ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ. ಯಶ್ ಅವರು ಸಿನಿಮಾ ಅಪ್ಡೇಟ್ ಒಂದು ಕಡೆಯಾದರೆ, ಪರ್ಸನಲ್ ಲೈಫ್ ನಲ್ಲಿ ಕೂಡ ರಾಕಿ ಭಾಯ್ ತುಂಬಾ ಬ್ಯುಸಿ ಆಗಿದ್ದಾರೆ. ನಿನ್ನೆಯಷ್ಟೇ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ ಇತ್ತು. ಈ ವರ್ಷ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ರಾಧಿಕಾ ಪಂಡಿತ್. ಪತ್ನಿಯ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿದ್ದಾರೆ ನಟ ಯಶ್. ರಾಧಿಕಾ ಅವರ ಹುಟ್ಟುಹಬ್ಬದ ಫೋಟೋಸ್ ಹಾಗೂ ವಿಡಿಯೋಗಳು ವೈರಲ್ ಆಗಿದೆ. ಇನ್ನು ತಂದೆ ತಾಯಿಯನ್ನು ಮತ್ತು ತಂಗಿಯನ್ನು ಕೂಡ ಅಷ್ಟೇ ಪ್ರೀತಿಯಿಂದ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಶ್ ಅವರು ಇಂದು ಸ್ಟಾರ್ ಆಗಿರಬಹುದು, ಆದರೆ ಅವರ ಜೀವನ ಶುರುವಾಗಿದ್ದು ಮೈಸೂರಿನಲ್ಲಿ, ಮಧ್ಯಮವರ್ಗದ ಕುಟುಂಬದಲ್ಲಿ.
ಯಶ್ ಅವರ ತಂದೆ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದವರು. ಯಶ್ ಅವರ ತಂದೆ ತಾಯಿ ಇಬ್ಬರಿಗೂ ಕೂಡ ಮಕ್ಕಳು ಚೆನ್ನಾಗಿ ಓದಬೇಕು ಎನ್ನುವ ಆಸೆ ಇತ್ತು. ಅದೇ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದರು. ಆದರೆ ಯಶ್ ಅವರು ಪಕ್ಕಾ ಲೋಕಲ್ ಹುಡುಗ, ಫ್ರೆಂಡ್ಸ್ ಜೊತೆಗೆ ಚೆನ್ನಾಗಿ ಗೋಲಿ ಅಡುತ್ತಿದ್ದರಂತೆ. ಆದರೆ ಯಶ್ ಅವರ ತಂದೆಗೆ ಮಗ ಗೋಲಿ ಆಡೋದು ಇಷ್ಟವಿರಲಿಲ್ಲ. ಯಶ್ ಹಾಗೂ ಅವರ ಎಲ್ಲಾ ಫ್ರೆಂಡ್ಸ್ ಗಳಿಗೆ ಯಶ್ ಅವರ ತಂದೆ ವಾರ್ನಿಂಗ್ ಕೊಡುತ್ತಿದ್ದರಂತೆ. ಯಶ್ ಅವರ ತಂದೆಯನ್ನು ಅವರ ಫ್ರೆಂಡ್ಸ್ ಎಲ್ಲರೂ ಟೈಗರ್ ಎಂದು ಕರೆಯುತ್ತಿದ್ದರಂತೆ. ಎಲ್ಲರಿಗೂ ಯಶ್ ಅವರ ತಂದೆಯನ್ನು ಕಂಡರೆ ಅಷ್ಟು ಭಯ ಇತ್ತಂತೆ. ಯಶ್ ಅವರಿಗೆ ತಂದೆಯವರು ಗೋಲಿ ಆಡಬಾರದು ಎಂದು ಹೇಳಿದ್ದರೂ ಸಹ, ಒಂದು ದಿವಸ ಯಶ್ ಅವರು ಗೋಲಿ ಅಡುತ್ತಿದ್ದರಂತೆ. ಆ ದಿನ ಯಶ್ ಅವರ ತಲೆಗೆ ಪಟ್ ಎಂದು ಒಂದು ಏಟು ಬಿತ್ತಂತೆ.

ಹೊಡೆದಿದ್ದು ಯಾರು ಎಂದು ನೋಡಿದರೆ, ಹಿಂದೆ ಬಾಸ್ ನಿಂತಿದ್ದರಂತೆ. ಈ ಘಟನೆಯನ್ನು ಖುದ್ದು ಯಶ್ ಅವರೇ ಹೇಳಿದ್ದು. ಯಶ್ ಅವರು ಇಲ್ಲಿ ಬಾಸ್ ಎಂದು ಕರೆದಿರುವುದು ಮತ್ಯಾರನ್ನು ಅಲ್ಲ, ತಮ್ಮ ತಂದೆಯನ್ನು. ಅಪ್ಪನನ್ನು ಬಾಸ್ ಎಂದು ಕರೆಯುತ್ತಿದ್ದರಂತೆ ಯಶ್. ಎಲ್ಲರೂ ಯಶ್ ಅವರನ್ನು ಬಾಸ್ ಎಂದು ಕರೆಯುತ್ತಾರೆ. ಆದರೆ ಯಶ್ ಅವರಿಗೆ ಅವರ ತಂದೆಯೇ ಬಾಸ್. ತಂದೆಯನ್ನು ಕಂಡರೆ ಯಶ್ ಅವರಿಗೆ ಅಷ್ಟು ಪ್ರೀತಿ. ಈಗಲೂ ತಂದೆಯನ್ನು ಯಶ್ ಅವರು ಬಾಸ್ ಎಂದೇ ಕರೆಯುವುದು. ಎಲ್ಲಾ ಮಕ್ಕಳಿಗೂ ತಂದೆ ತಾಯಿ ಬಾಸ್ ಎಂದರೆ ತಪ್ಪಲ್ಲ. ಯಶ್ ಅವರ ಮನೆಯಲ್ಲಿ ಇದು ಇನ್ನು ಕೂಡ ಸ್ಪೆಷಲ್ ಎಂದು ಹೇಳಿದರೆ ತಪ್ಪಲ್ಲ. ಯಶ್ ಅವರು ರಾಕಿಂಗ್ ಸ್ಟಾರ್ ಆಗಿದ್ದರು ಅವರ ತಂದೆ ಈಗಲೂ ಬಾಸ್.

ಇನ್ನು ಯಶ್ ಅವರ ತಂದೆ ತಾಯಿ ಕೂಡ ಮಗನ ಬಗ್ಗೆ ಅಷ್ಟೇ ಪ್ರೀತಿ ಇಟ್ಟುಕೊಂಡಿದ್ದಾರೆ. ಮಗ ಅಷ್ಟು ದೊಡ್ಡ ಸ್ಟಾರ್ ಆಗಿದ್ದರು ಕೂಡ ಯಶ್ ಅವರ ತಂದೆ ಬಸ್ ಡ್ರೈವರ್ ಆಗಿ ಕೆಲಸಕ್ಕೆ ಹೋಗುತ್ತಿದ್ದರು. ನಿವೃತ್ತಿಯಾದ ಮೇಲೆ ಯಶ್ ಅವರ ತಂದೆ ತಾಯಿ ಇಬ್ಬರು ಕೂಡ ಬೆಂಗಳೂರಿನಲ್ಲಿ ಮಗನ ಜೊತೆಗೆ ಇಲ್ಲ. ಇಬ್ಬರು ಕೂಡ ಹಾಸನದಲ್ಲಿ ಫಾರ್ಮ್ ಹೌಸ್ ನಲ್ಲಿ ಬಹಳ ಸರಳವಾಗಿ ಜೀವನ ನಡೆಸುತ್ತಿದ್ದಾರೆ. ಯಶ್ ಅವರ ತಂದೆ ತಾಯಿಗೆ ತಮ್ಮ ಸ್ವಂತ ಊರಿನಲ್ಲಿ ಕೃಷಿ ಮಾಡುತ್ತ ಜೀವನ ನಡೆಸಬೇಕು ಅನ್ನುವ ಆಸೆ ಇತ್ತಂತೆ. ಆ ಆಸೆಯನ್ನು ಈಗ ಯಶ್ ಅವರು ಈಡೇರಿಸಿದ್ದಾರೆ. ಯಶ್ ಅವರ ತಂದೆ ತಾಯಿ ಈಗ ಫಾರ್ಮ್ ಹೌಸ್ ನಲ್ಲಿ ಆರಾಮಾಗಿ ಜೀವನ ನಡೆಸುತ್ತಿದ್ದಾರೆ. ಮಗ ಇದ್ದರೆ ಯಶ್ ಅವರ ಹಾಗಿರಬೇಕು.

ಯಶ್ ಅವರ ತಂದೆ ತಾಯಿ ಹಾಸನದಲ್ಲಿ ದೊಡ್ಡ ಸ್ಟಾರ್ ಹೀರೋ ತಂದೆ ತಾಯಿಯಂತೆ ಇಲ್ಲ. ಬಹಳ ಸರಳವಾಗಿದ್ದಾತೆ. ಇತ್ತೀಚೆಗೆ ಯಶ್ ಅವರ ತಾಯಿ ಸಂದರ್ಶನ ಒಂದರಲ್ಲಿ ಹೇಳಿದ ಅನುಸಾರ, ಅವರಿಬ್ಬರು ಮನೆಯಲ್ಲಿ ಯಾವುದೇ ಕೆಲಸದವರನ್ನು ಸಹ ಇರಿಸಿಕೊಂಡಿಲ್ಲ. ತಾವು ಚೆನ್ನಾಗಿರುವ ವರೆಗು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ. ಸೊಸೆ ರಾಧಿಕಾ ಕೆಲಸ ಮಾಡುವುದು ಕೂಡ ನಮಗೆ ಇಷ್ಟವಿಲ್ಲ ಎಂದಿದ್ದರು. ನಾವು ಕಷ್ಟಪಟ್ಟಿದ್ದೀವಿ, ನಮ್ಮ ಕಷ್ಟಗಳನ್ನ ನಮ್ಮ ಮಕ್ಕಳು ಪಡೋದು ಬೇಡ ಎಂದು ಯಶ್ ಅವರ ತಾಯಿ ಹೇಳಿದ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ತಂದೆ ತಾಯಿಗೆ ತಕ್ಕ ಮಗ ಯಶ್ ಅವರು. ಅದೇ ರೀತಿ ಯಶ್ ಅವರ ತಂದೆ ತಾಯಿ ಕೂಡ ಅಷ್ಟೇ ಒಳ್ಳೆಯವರು.



