ಸಾಮಾನ್ಯವಾಗಿ ಈ ವಾಕರಿಕೆಗಳು ಅತಿಯಾದ ಆಹಾರ ಸೇವನೆ, ಉಪವಾಸಗಳನ್ನು ಮಾಡುವುದರಿಂದ, ನಿದ್ರಾಹೀನತೆಯಿಂದಾಗಿ ಅಂತವರಿಗೆ ವಾಕರಿಕೆಗಳು ಹೆಚ್ಚಾಗಿ ಕಾಣಿಸಿಬಿಗುತ್ತದೆ. ಕಾಫಿ,ಟೀ ಅಭ್ಯಾಸ ಹೆಚ್ಚಿದಾಗ ಈ ವಾಕರಿಕೆಗಳು ಕಂಡು ಬರುತ್ತದೆ. ನೀರನ್ನು ಕುಡಿಯುವ ಅಭ್ಯಾಸ ಯಾರಿಗೆ ಕಡಿಮೆ ಇದೆಯೋ ಅವರಿಗೆ ವಾಕರಿಕೆ ಕಂಡುಬರುತ್ತದೆ. ಈ ರೀತಿಯ ಸಮಸ್ಯೆಗಳ ಜೊತೆ ಆಹಾರದ ಸೇವನೆಯನ್ನು ತಡೆಗಟ್ಟುತ್ತದೆ. ಆಹಾರದ ಅವಶ್ಯಕತಇದೆಯೋ ಅನ್ನುವ ರೀತಿ ಭಾಸವಾಗುತ್ತದೆ. ಇಂತಹ ಸಮಸ್ಯೆಗಳಿಗೆ ಯಾವ ರೀತಿಯ ಆಹಾರ ಯಾವ ರೀತಿ ಜೀವನಶೈಲಿ ಪಾಲಿಸಬೇಕು.
ಒಂದು ಸಮಯಕ್ಕೆ ಸರಿಯಾದ ಆಹಾರ ಪದ್ಧತಿ ಇರಬೇಕು. ಕಾಫಿ, ಟೀ ಅಭ್ಯಾಸಗಳನ್ನು ನಿಲ್ಲಿಸಬೇಕು. ಆಹಾರದಲ್ಲಿ ಅಜೀರ್ಣವಾಗುವ ಆಹಾರಗಳನ್ನು, ಹೊರಗಿನ ಆಹಾರಗಳನ್ನು ನಿಲ್ಲಿಸುವುದು, ಆಹಾರ ಜೀರ್ಣವಾಗಲು ಬೇಕಾದಂತಹ ಸೊಪ್ಪು, ತರಕಾರಿ ಬೆಲೆ ಕಾಳು, ಹಣ್ಣುಗಳು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಿಗೆ ಬಳಸುವುದರಿಂದ ಜೀರ್ಣಕ್ರಿಯೆ ಸರಿಯಾಗುತ್ತದೆ. ಯಾವಾಗ ಸರಿಯಾಗಿದೆ ಎಂದು ತಿಳಿಯಾಗುತ್ತದೆ. ಅಂತ ಸಂದರ್ಭದಲ್ಲಿ ಮಾತ್ರ ಇಂತಹ ಸಮಸ್ಯೆಗಳು ನಿಲ್ಲುತ್ತದೆ. ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಹುಣಸೆ ಹಣ್ಣಿನ ರಸ ಸೇವನೆ , ಏಲಕ್ಕಿ ಬೆಲ್ಲ ಸೇರಿಸಿದ ಪಾನಕ ಸೇವಿಸುವುದರಿಂದ ಹೊಟ್ಟೆ ಶುದ್ಧಿಕರಣಗಳಾಗುತ್ತದೆ.
ಹಸಿವನ್ನು ಕಾಪಾಡಿಕೊಳ್ಳಬಹುದು. ವಾಂತಿ,ವಾಕರಿಕೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಇದನ್ನು ದಿನದಲ್ಲಿ ಎರಡು ಬಾರಿ ಸೇವಿಸುವುದರಿಂದ ವಾಕರಿಕೆಯನ್ನು ನಿವಾರಣೆ ಮಾಡಬಹುದು. ಭತ್ತದ ಅರಳಿನ ಗಂಜಿಯನ್ನು ಮಾಡಿ ಕುಡಿಯುವುದರಿಂದ ಉತ್ತಮ. ವಾಕರಿಕೆ ದೇಹದ ಉಷ್ಣತೆ ಇವೆಲ್ಲವನ್ನು ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೆ ಗರಿಕೆ ಹುಲ್ಲಿನ ರಸ ಕುಡಿಯುವುದರಿಂದ ಕಡಿಮೆ ಆಗುತ್ತದೆ. ಇನ್ನು ಹುರಿದ ಜೀರಿಗೆಯನ್ನು ಮಜ್ಜಿಗೆಯಿಂದ ಸೇವನೆ ಮಾಡುವುದರಿಂದ ವಾಕರಿಕೆ ಕಡಿಮೆಯಾಗುತ್ತದೆ.
ಕಬ್ಬಿನ ಹಾಲು ಕುಡಿಯುವುದರಿಂದ ಯಕೃತ್ನ ಪೋಷಣೆ ಮಾಡಬಲ್ಲದು. ರೋಗನಿರೋಧಕ ಶಕ್ತಿ ದೇಹಕ್ಕೆ ಸೋಂಕುಗಳನ್ನು ನಿವಾರಣೆ ಕೂಡ ಆಗುತ್ತದೆ. ಇವೆಲ್ಲ ಮನೆ ಮದ್ದುಗಳನ್ನು ಮನೆಗಳಲ್ಲಿ ಹೆಚ್ಚಾಗಿ ಮಾಡಿಕೊಳ್ಳಬಹುದು. ಇದೇ ರೀತಿ ದೀರ್ಘಕಾಲ ಚಿಕಿತ್ಸೆಗಳನ್ನು ಹೆಚ್ಚಾಗಿ ತೆಗೆದುಕೊಂಡು ಶುದ್ಧಿಯಲ್ಲಿ ಇದ್ದುಕೊಂಡರೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ. ಇವೆಲ್ಲವನ್ನು ಪಾಲಿಸಿ ದೇಹವನ್ನು ಶುದ್ಧಿಯಲ್ಲಿದ್ದರೆ ಯಾವುದೇ ಅನಾರೋಗ್ಯಗಳು ಬರುವುದಿಲ್ಲ.